2 ದಿನವೃತ್ತಾಂತ 26:11 · ಕನ್ನಡ ಬೈಬಲ್
ಇದಲ್ಲದೆ ಶಾಸ್ತ್ರಿಯಾದ ಯೆಗೀಯೇಲನ ಕೈ ಯಿಂದಲೂ ಅಧಿಪತಿಯಾದ ಮಾಸೇಯನ ಕೈ ಯಿಂದಲೂ ಬರೆಯಲ್ಪಟ್ಟ ಲೆಕ್ಕದ ಪ್ರಕಾರ ಗುಂಪು ಗುಂಪಾಗಿ ಯುದ್ಧಕ್ಕೆ ಹೋಗುವ ರಾಣುವೆಯವರ ಸೈನ್ಯವು ಉಜ್ಜೀಯನಿಗೆ ಇತ್ತು. ಆ ಸೈನ್ಯವು ಅರಸನ ಪ್ರಧಾನರಲ್ಲಿ ಒಬ್ಬನಾದ ಹನನ್ಯನ ಕೈಕೆಳಗೆ ಇತ್ತು.
Cross references
2 ಅರಸುಗಳು 5:2
ಅರಾಮ್ಯರು ಗುಂಪುಗುಂಪಾಗಿ ಹೊರಟು ಇಸ್ರಾಯೇಲ್ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡುಕೊಂಡು ಬಂದರು. ಅವಳು ನಾಮಾ ನನ ಹೆಂಡತಿಗೆ ಸೇವಕಳಾಗಿದ್ದಳು.