ಆದರೆ ತಂದೆಗಳು ಮಕ್ಕಳಿ ಗೋಸ್ಕರ ಸಾಯುವದಿಲ್ಲ, ಮಕ್ಕಳು ತಂದೆಗಳಿಗೋಸ್ಕರ ಸಾಯುವದಿಲ್ಲ; ಪ್ರತಿ ಮನುಷ್ಯನು ತನ್ನ ಪಾಪದಲ್ಲಿ ಸಾಯಬೇಕೆಂದು ಕರ್ತನು ಆಜ್ಞಾಪಿಸಿದ್ದು ಮೋಶೆಯ ನ್ಯಾಯಪ್ರಮಾಣದ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಅವನು ಅವರ ಮಕ್ಕಳನ್ನು ಕೊಲ್ಲಲಿಲ್ಲ.
Cross references
ತಂದೆಗಳು ಮಕ್ಕಳ ನಿಮಿತ್ತವೂ ಮಕ್ಕಳು ತಂದೆಗಳ ನಿಮಿತ್ತವೂ ಕೊಲ್ಲಲ್ಪಡಬಾರದು; ಒಬ್ಬೊಬ್ಬನು ತನ್ನ ಪಾಪದ ನಿಮಿತ್ತ ಕೊಲ್ಲಲ್ಪಡಬೇಕು.
ರಾಜ್ಯವು ತನ್ನ ಕೈಯಲ್ಲಿ ಸ್ಥಿರಪಟ್ಟ ತರುವಾಯ ಅರಸ ನಾಗಿದ್ದ ತನ್ನ ತಂದೆಯನ್ನು ಕೊಂದ ತನ್ನ ಸೇವಕರನ್ನು ಕೊಂದುಹಾಕಿದನು.
ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡುವ ಕಸ್ದೀಯರು ಬಂದು ಈ ಪಟ್ಟಣಕ್ಕೆ ಬೆಂಕಿ ಹಚ್ಚಿ ಅದನ್ನೂ ಮತ್ತು ಯಾವ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗೆ ಧೂಪವರ್ಪಿಸಿ ನನಗೆ ಕೋಪದ್ರೇಕ ಎಬ್ಬಿಸುವ ಹಾಗೆ ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯಿ ದಿದ್ದಾರೋ ಅವುಗಳನ್ನು ಸುಟ್ಟುಬಿಡುವರು.
ಇಗೋ, ಎಲ್ಲಾ ಪ್ರಾಣಗಳು ನನ್ನವೇ; ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ; ಪಾಪ ಮಾಡುವವನೇ ತಾನಾ ಗಿಯೇ ಸಾಯುವನು.
ಪಾಪ ಮಾಡುವ ಪ್ರಾಣವು ತಾನಾಗಿ ಸಾಯುವದು; ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲ. ತಂದೆಯು ಮಗನ ಅಕ್ರಮವನ್ನು ಹೊರುವದಿಲ್ಲ. ನೀತಿವಂತನ ನೀತಿಯು ಅವನ ಮೇಲೆಯೇ ಇರುವದು. ದುಷ್ಟನ ದುಷ್ಟತ್ವವು ಅವನ ಮೇಲೆಯೇ ಇರುವದು.