ಆದದರಿಂದ ಅವನು ಯಾಜ ಕರನ್ನೂ ಲೇವಿಯರನ್ನೂ ಕೂಡಿಸಿಕೊಂಡು ಅವರಿಗೆನೀವು ಯೆಹೂದ ಪಟ್ಟಣಗಳಿಗೆ ಹೊರಟು ಹೋಗಿ ವರುಷ ವರುಷಕ್ಕೆ ನಿಮ್ಮ ದೇವರ ಆಲಯವನ್ನು ದುರಸ್ತು ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರಿಂದ ಹಣವನ್ನು ಕೂಡಿಸಿರಿ. ಕೆಲಸವನ್ನು ಶೀಘ್ರವಾಗಿ ನಡಿಸಿರಿ ಅಂದನು. ಆದಾಗ್ಯೂ ಲೇವಿಯರು ಅವಸರ ಮಾಡದೆ ಇದ್ದರು.
Cross references
ಆಗ ಯೆಹೋವಾಷನು ಯಾಜಕರಿಗೆ--ಕರ್ತನ ಮನೆಗೆ ತರಲ್ಪಟ್ಟ ಪ್ರತಿಷ್ಠಿತವಾದವುಗಳ ಹಣವೆಲ್ಲ ವನ್ನೂ ಹಾದು ಹೋಗುವ ಪ್ರತಿ ಮನುಷ್ಯನ ಹಣ ವನ್ನೂ ಪ್ರಾಣಗಳ ಎಣಿಕೆಯ ಹಣವನ್ನೂ ಪ್ರತಿ ಮನುಷ್ಯನು ತನ್ನ ಇಚ್ಚೆಯ ಪ್ರಕಾರ ಕರ್ತನ ಆಲಯಕ್ಕೆ ಕೊಡಬೇಕೆಂದು ತಕ್ಕೊಂಡು ಬಂದ ಹಣವೆಲ್ಲವನ್ನೂ
ಆಗ ಅರಸನಾದ ಯೆಹೋವಾಷನು ಯಾಜಕನಾದ ಯೆಹೋಯಾದಾ ವನನ್ನೂ ಯಾಜಕರನ್ನೂ ಕರೆದು ಅವರಿಗೆ--ನೀವು ಮನೆಯ ಒಡಕುಗಳನ್ನು ದುರಸ್ತುಮಾಡದೆ ಇರುವ ದೇನು? ಇನ್ನು ಮೇಲೆ ನೀವು ನಿಮ್ಮ ಪರಿಚಯದವ ರಿಂದ ಹಣವನ್ನು ತೆಗೆದುಕೊಳ್ಳದೆ ಮನೆಯ ಒಡಕು ಗಳಿಗೋಸ್ಕರ ಅದನ್ನು ಒಪ್ಪಿಸಿಕೊಡಿರಿ ಅಂದನು.
ಇವನ ಸಹೋದರರಾಗಿರುವ ಯೆಹೋ ಷಾಫಾಟನ ಕುಮಾರರಾದ ಅಜರ್ಯನೂ ಯೆಹೀ ಯೇಲನೂ ಜೆಕರ್ಯನೂ ಅಜರ್ಯನೂ ವಿಾಕಾಯೇ ಲನೂ ಶೆಫಟ್ಯನೂ ಇದ್ದರು. ಇವರೆಲ್ಲರು ಇಸ್ರಾ ಯೇಲಿನ ಅರಸನಾದ ಯೆಹೋಷಾಫಾಟನ ಕುಮಾ ರರು.
ಅವನು ತನ್ನ ಆಳ್ವಿಕೆಯ ಮೊದಲನೇ ವರುಷದ ಮೊದಲನೇ ತಿಂಗಳಲ್ಲಿ ಕರ್ತನ ಮನೆಯ ಬಾಗಲು ಗಳನ್ನು ತೆರೆದು ಅವುಗಳನ್ನು ಭದ್ರಮಾಡಿಸಿದನು.
ಆದರೆ ಯೋಷೀಯನ ಆಳ್ವಿಕೆಯ ಹದಿನೆಂಟನೇ ವರುಷದಲ್ಲಿ ಅವನು ದೇಶವನ್ನೂ ಆಲಯವನ್ನೂ ಶುಚಿಮಾಡಿದ ತರುವಾಯ ತನ್ನ ದೇವರಾದ ಕರ್ತನ ಆಲಯವನ್ನು ದುರಸ್ತುಮಾಡುವದಕ್ಕೆ ಅಚಲ್ಯನ ಮಗ ನಾದ ಶಾಫಾನನನ್ನೂ ಪಟ್ಟಣದ ಅಧಿಪತಿಯಾದ ಮಾಸೇಯನನ್ನೂ ರಾಯಸದವನಾದ ಯೋವಾಹಾ ಜನ ಮಗನಾದ ಯೋವಾಹನನ್ನೂ ಕಳುಹಿಸಿದನು.