Home Bibles 2 ದಿನವೃತ್ತಾಂತ 23:17 · ಕನ್ನಡ ಬೈಬಲ್
2 ದಿನವೃತ್ತಾಂತ 23:17 · ಕನ್ನಡ ಬೈಬಲ್

ಸಮಸ್ತ ಜನರು ಬಾಳನ ಮನೆಗೆ ಹೋಗಿ ಅದನ್ನು ಕೆಡವಿಹಾಕಿ ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿ ಪೀಠಗಳ ಮುಂದೆ ಕೊಂದುಹಾಕಿದರು.

Cross references

ದ್ವಿತೀಯೋಪದೇಶಕಾಂಡ 12:3

ನೀವು ಅವರ ಬಲಿಪೀಠಗಳನ್ನು ಕೆಡವಿಹಾಕಿ ಅವರ ಸ್ತಂಭಗಳನ್ನು ಒಡೆದು ಅವರ ತೋಪುಗಳನ್ನು ಬೆಂಕಿಯಿಂದ ಸುಟ್ಟು ಅವರ ದೇವರುಗಳ ವಿಗ್ರಹಗಳನ್ನು ಕಡಿದುಹಾಕಿ ಅವರ ಹೆಸರುಗಳನ್ನು ಆ ಸ್ಥಳಗಳೊಳಗಿಂದ ನಾಶಮಾಡಬೇಕು.

ದ್ವಿತೀಯೋಪದೇಶಕಾಂಡ 13:5

ಅಂಥ ಪ್ರವಾದಿಯನ್ನಾದರೂ ಕನಸು ಕಾಣುವವನ ನ್ನಾದರೂ ಕೊಂದುಹಾಕಬೇಕು; ಐಗುಪ್ತದೇಶದೊಳ ಗಿಂದ ನಿನ್ನನ್ನು ಹೊರಗೆ ಬರಮಾಡಿ, ದಾಸತ್ವದ ಮನೆ ಯೊಳಗಿಂದ ನಿನ್ನನ್ನು ವಿಮೋಚಿಸಿದ ನಿನ್ನ ಕರ್ತನಾದ ದೇವರಿಂದ ತಿರುಗುವಂತೆ ಮತ್ತು ನಿನ್ನ ದೇವರಾದ ಕರ್ತನು ನಿನಗೆ ನಡೆಯಲು ಆಜ್ಞಾಪಿಸಿದ ಮಾರ್ಗ ದಿಂದ ನಿನ್ನನ್ನು ದೂಡುವಂತೆ ಮಾತನಾಡಿದ್ದಾನೆ. ಹೀಗೆ ನೀನು ಕೆಟ್ಟದ್ದನ್ನು ನಿನ್ನ ಮಧ್ಯದಿಂದ ತೆಗೆದುಹಾಕಬೇಕು.

1 ಅರಸುಗಳು 18:40

ಆಗ ಎಲೀಯನು ಅವರಿಗೆ--ನೀವು ಬಾಳನ ಪ್ರವಾದಿಗಳನ್ನು ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿ ಕೊಳ್ಳದೆ ಇರಲಿ ಅಂದನು. ಇವರು ಅವರನ್ನು ಹಿಡಿ ದರು; ಎಲೀಯನು ಅವರನ್ನು ಕೀಷೋನ್‌ಹಳ್ಳದ ಬಳಿಗೆ ತಕ್ಕೊಂಡುಹೋಗಿ ಅಲ್ಲಿ ಅವರನ್ನು ಕೊಂದು ಹಾಕಿದನು.

2 ಅರಸುಗಳು 10:25

ಅವನು ದಹನಬಲಿಯನ್ನು ಅರ್ಪಿಸಿ ತೀರಿಸಿದ ತರುವಾಯ ಏನಾಯಿತಂದರೆ, ಯೇಹುವು ಕಾವಲುಗಾರನಿಗೂ ಅಧಿಪತಿಗಳಿಗೂನೀವು ಒಳಗೆ ಹೋಗಿ ಯಾವನೂ ಹೊರಗೆ ಬಾರದ ಹಾಗೆ ಅವರನ್ನು ಸಂಹರಿಸಿರಿ ಅಂದನು.

2 ಅರಸುಗಳು 11:18

ದೇಶದ ಜನರೆಲ್ಲರೂ ಬಾಳನ ಮನೆಯಲ್ಲಿ ಹೊಕ್ಕು ಅದನ್ನು ಕೆಡವಿಹಾಕಿ ಅವನ ಬಲಿಪೀಠಗಳನ್ನೂ ವಿಗ್ರಹ ಗಳನ್ನೂ ಸಂಪೂರ್ಣವಾಗಿ ತುಂಡುತುಂಡಾಗಿ ಒಡೆದು ಬಿಟ್ಟು ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು. ಇದಲ್ಲದೆ ಯಾಜಕನು ಕರ್ತನ ಮನೆಯಲ್ಲಿ ಅಧಿಕಾರಿಗಳನ್ನು ನೇಮಿಸಿ ದನು.

2 ಅರಸುಗಳು 18:4

ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು.

2 ದಿನವೃತ್ತಾಂತ 34:4

ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ

2 ದಿನವೃತ್ತಾಂತ 34:7

ಅವನು ಬಲಿಪೀಠಗಳನ್ನೂ ತೋಪುಗಳನ್ನೂ ಕೆಡವಿ ಹಾಕಿ ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿ ಮಾಡಿ ಇಸ್ರಾಯೇಲ್‌ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡಿಸಿದ ತರುವಾಯ ಯೆರೂಸಲೇಮಿಗೆ ಹಿಂತಿರುಗಿದನು.

ಯೆಶಾಯ 2:18

ಆತನು ವಿಗ್ರಹಗಳನ್ನು ಸಂಪೂರ್ಣ ವಾಗಿ ಇಲ್ಲದಂತೆ ಮಾಡಿಬಿಡುವನು.

ಜೆಕರ್ಯ 13:2

ಸೈನ್ಯಗಳ ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು; ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲ; ಪ್ರವಾದಿಗಳನ್ನೂ ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿ ಹೋಗುವಂತೆ ಮಾಡುವೆನು ಎಂದು ಅನ್ನುತ್ತಾನೆ.

Interlinear

Choose Theme