Home Bibles 2 ದಿನವೃತ್ತಾಂತ 20:23 · ಕನ್ನಡ ಬೈಬಲ್
2 ದಿನವೃತ್ತಾಂತ 20:23 · ಕನ್ನಡ ಬೈಬಲ್

ಅಮ್ಮೋನ್‌, ಮೋವಾಬ್ಯರ ಮಕ್ಕಳು ಸೇಯಾರ್‌ ಪರ್ವತದ ನಿವಾಸಿ ಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯಾರಿನ ನಿವಾಸಿಗಳನ್ನು ಮುಗಿಸಿಬಿಟ್ಟ ತರುವಾಯ ತಾವೇ ಒಬ್ಬರನ್ನೊಬ್ಬರು ನಾಶಮಾಡಲು ಸಹಾಯ ಕೊಟ್ಟರು.

Cross references

ಆದಿಕಾಂಡ 14:6

ಅವರ ಬೆಟ್ಟ ವಾದ ಸೇಯಾರಿನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸವಿಾಪವಾದ ಏಲ್ಪಾರಾನಿನ ವರೆಗೂ ಅವರನ್ನು ಸಂಹರಿಸಿದರು.

ಆದಿಕಾಂಡ 36:8

ಹೀಗೆ ಏಸಾವನು ಸೇಯಾರ್‌ ಪರ್ವತದಲ್ಲಿ ವಾಸವಾಗಿದ್ದನು. ಏಸಾವನೇ ಎದೋಮನು.

ದ್ವಿತೀಯೋಪದೇಶಕಾಂಡ 2:5

ಅವರ ಸಂಗಡ ಜಗಳವಾಡಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದದಷ್ಟೂ ಸ್ಥಳ ಕೊಡುವದಿಲ್ಲ; ಸೇಯಾರ್‌ ಬೆಟ್ಟವನ್ನು ಏಸಾವನಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ.

ಯೆಹೋಶುವ 24:4

ಅವನಿಗೆ ಇಸಾಕನನ್ನು ಕೊಟ್ಟೆನು; ಇಸಾಕನಿಗೆ ಯಾಕೋಬನನ್ನೂ ಏಸಾವನನ್ನೂ ಕೊಟ್ಟು ಏಸಾವನಿಗೆ ಸೇಯಾರ್‌ ಪರ್ವತದ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟೆನು. ಆದರೆ ಯಾಕೋಬನೂ ಅವನ ಮಕ್ಕಳೂ ಐಗುಪ್ತಕ್ಕೆ ಹೋದರು.

ನ್ಯಾಯಾಧಿಪತಿಗಳು 7:22

ಮುನ್ನೂರು ಜನರು ತುತೂರಿಗಳನ್ನು ಊದುವಾಗ ಕರ್ತನು ದಂಡಿನಲ್ಲಿ ಎಲ್ಲೆಲ್ಲಿಯೂ ಒಬ್ಬನ ಕತ್ತಿಯನ್ನು ಒಬ್ಬನ ಮೇಲೆ ಬರಮಾಡಿದನು. ದಂಡು ಚೆರೇರಿನಲ್ಲಿರುವ ಬೇತ್ಷಿಟ್ಟದ ಮಟ್ಟಿಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾದ ಮೇರೆಯ ವರೆಗೂ ಓಡಿಹೋಯಿತು.

1 ಸಮುವೇಲ 14:20

ಆಗ ಸೌಲನೂ ಅವನ ಸಂಗಡ ಇದ್ದ ಜನರೆಲ್ಲರೂ ಕೂಡಿಕೊಂಡು ಯುದ್ಧಕ್ಕೆ ಬಂದಾಗ ಇಗೋ, ಪ್ರತಿಯೊಬ್ಬನು ತನ್ನ ಜೊತೆಗಾರನನ್ನು ಕತ್ತಿ ಯಿಂದ ಕೊಂದುಬಿಟ್ಟದ್ದರ ಪರಿಣಾಮವಾಗಿ ಅಲ್ಲಿ ಬಹು ದೊಡ್ಡ ಸೋಲು ಉಂಟಾಯಿತು.

ಯೆಹೆಜ್ಕೇಲ 35:2

ಮನುಷ್ಯಪುತ್ರನೇ, ನೀನು ಸೇಯಾರ್‌ ಪರ್ವತಕ್ಕೆ ಅಭಿಮುಖವಾಗಿ ಅದಕ್ಕೆ ವಿರೋಧವಾಗಿ ಪ್ರವಾದಿಸು;

Interlinear

Choose Theme