Home Bibles ☰ Books 2 ದಿನವೃತ್ತಾಂತ 18:22 · ಕನ್ನಡ ಬೈಬಲ್
2 ದಿನವೃತ್ತಾಂತ 18:22 · ಕನ್ನಡ ಬೈಬಲ್

ಆದದರಿಂದ ಇಗೋ, ಕರ್ತನು ಈ ಸಮಸ್ತವಾದ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮವನ್ನು ಇಟ್ಟಿದ್ದಾನೆ. ಕರ್ತನು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾನೆ ಅಂದನು.

Cross references

ನಿರ್ಗಮಕಾಂಡ 4:21

ಆಗ ಕರ್ತನು ಮೋಶೆಗೆ--ನೀನು ಐಗುಪ್ತದೇಶಕ್ಕೆ ಹಿಂತಿರುಗಿ ಹೋಗು ವಾಗ ನಾನು ನಿನ್ನ ಕೈಯಿಂದ ಮಾಡಿಸಿದ ಎಲ್ಲಾ ಸೂಚಕ ಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವದಿಲ್ಲ.

2 ದಿನವೃತ್ತಾಂತ 18:7

ಆಗ ಇಸ್ರಾಯೇ ಲಿನ ಅರಸನು ಯೊಹೋಷಾಫಾಟನಿಗೆ -- ನಾವು ಕರ್ತನಿಂದ ವಿಚಾರಿಸುವ ಹಾಗೆ ಇಮ್ಲನ ಮಗನಾದ ವಿಾಕಾಯೆಹುನೆಂಬವನು ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ; ಕೆಟ್ಟದ್ದನ್ನೇ, ಪ್ರವಾದಿಸುತ್ತಾನೆ ಅಂದನು. ಅದಕ್ಕೆ ಯೆಹೋಷಾಫಾಟನು--ಅರಸನು ಹಾಗೆ ಅನ್ನದಿರಲಿ ಅಂದನು.

2 ದಿನವೃತ್ತಾಂತ 18:17

ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ--ಇವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ ಅಂದನು.

2 ದಿನವೃತ್ತಾಂತ 18:21

ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದು--ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳು ಆತ್ಮವಾಗಿರುವೆನು ಅಂದಿತು. ಅದಕ್ಕೆ ಆತನು--ನೀನು ಅವನನ್ನು ಮರುಳು ಗೊಳಿಸುವಿ, ಮತ್ತು ಜಯಿಸುವಿ; ಹೊರಟುಹೋಗಿ ಹಾಗೆ ಮಾಡು ಅಂದನು.

2 ದಿನವೃತ್ತಾಂತ 25:18

ಆದರೆ ಇಸ್ರಾಯೇಲಿನ ಅರಸ ನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ--ಲೆಬನೋನಿನಲ್ಲಿದ್ದ ಒಂದು ಮುಳ್ಳು ಗಿಡವು ಲೆಬನೋನಿನಲ್ಲಿರುವ ದೇವದಾರಿಗೆ--ನೀನು ನನ್ನ ಮಗನಿಗೆ ಹೆಂಡತಿಯಾಗಿರಲು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋ ನಿನಲ್ಲಿದ್ದ ಅಡವಿಯ ಮೃಗವು ಹಾದುಹೋಗುತ್ತಿರು ವಾಗ ಆ ಮುಳ್ಳು ಗಿಡವನ್ನು ತುಳಿಯಿತು.

ಯೋಬ 12:16

ಬಲವೂ ಸುಜ್ಞಾ ನವೂ ಆತನಲ್ಲಿವೆ; ಮೋಸಹೋಗುವವನೂ ಮೋಸ ಗೊಳಿಸುವವನೂ ಆತನವರೇ.

ಯೆಶಾಯ 3:11

ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.

ಯೆಶಾಯ 19:14

ಕರ್ತನು ಅದರ ಮಧ್ಯದಲ್ಲಿ ವಕ್ರವಾದ ಆತ್ಮವನ್ನು ಕಲ್ಪಿಸಿದ್ದಾನೆ (ಬೆರೆಸಿದ್ದಾನೆ). ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾನೆ.

ಯೆರೆಮಿಯ 18:11

ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ಯಾವ ಪ್ರಕಾರ ಒಬ್ಬನು ಕುಂಬಾರನ ಪಾತ್ರೆಯನ್ನು ಅದು ತಿರಿಗಿ ಒಂದುಗೂಡದ ಹಾಗೆ ಒಡೆಯುತ್ತಾನೋ ಅದೇ ಪ್ರಕಾರ ನಾನು ಈ ಜನವನ್ನೂ ಈ ಪಟ್ಟಣ ವನ್ನೂ ಒಡೆದು ಬಿಡುವೆನು; ಆಗ ಹೂಣಿಡುವದಕ್ಕೆ ಸ್ಥಳವಿಲ್ಲದೆ ತೋಫೆತಿನಲ್ಲಿ ಅವರು ಹೂಣಿಡುವರು.

ಯೆಹೆಜ್ಕೇಲ 14:3

ಮನುಷ್ಯಪುತ್ರನೇ, ಈ ಮನು ಷ್ಯರು ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲೇ ಸ್ಥಾಪಿಸಿ ತಮ್ಮ ಅಕ್ರಮವಾದ ಎಡೆತಡೆಗಳನ್ನು ತಮ್ಮ ಮುಖದ ಮುಂದೆಯೇ ಇಟ್ಟುಕೊಂಡಿದ್ದಾರೆ. ಇವರೆಲ್ಲ ರನ್ನೂ ನಾನು ವಿಚಾರಿಸಬೇಕೇ?

ಯೆಹೆಜ್ಕೇಲ 14:9

ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ ಕರ್ತನಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ; ನಾನು ನನ್ನ ಕೈಯನ್ನು ಅವನ ಮೇಲೆ ಚಾಚಿ ನನ್ನ ಜನರಾದ ಇಸ್ರಾಯೇಲ್ಯರ ಮಧ್ಯ ದೊಳಗಿಂದ ನಾಶಪಡಿಸುವೆನು.

ಮೀಕ 2:3

ಆದದರಿಂದ ಕರ್ತನು ಹೇಳುವದೇನಂದರೆ--ಇಗೋ, ನಾನು ಈ ಕುಟುಂಬಕ್ಕೆ ವಿರೋಧವಾಗಿ ಕೆಟ್ಟದ್ದನ್ನು ಯೋಚಿಸು ತ್ತೇನೆ; ಆದದರಿಂದ ನೀವು ನಿಮ್ಮ ಕುತ್ತಿಗೆಗಳನ್ನು ಹಿಂತೆ ಗೆಯದೆ ಅಹಂಕಾರವಾಗಿ ನಡೆಯದೆ ಇರುವಿರಿ; ಇದು ಕೆಟ್ಟಕಾಲವೇ.

ಮತ್ತಾಯ 24:24

ಯಾಕಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯಲ್ಪಟ್ಟವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕ ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸು ವರು.

ಮತ್ತಾಯ 26:24

ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಅಂದನು.

ಮಾರ್ಕ 14:20

ಅದಕ್ಕಾತನು ಪ್ರತ್ಯುತ್ತರವಾಗಿ ಅವರಿಗೆ--ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು, ಅಂದರೆ ನನ್ನ ಸಂಗಡ ಪಾತ್ರೆಯಲ್ಲಿ ಅದ್ದುವವನೇ.

Interlinear

Choose Theme