Home Bibles 2 ದಿನವೃತ್ತಾಂತ 15:17 · ಕನ್ನಡ ಬೈಬಲ್
2 ದಿನವೃತ್ತಾಂತ 15:17 · ಕನ್ನಡ ಬೈಬಲ್

ಇಸ್ರಾಯೇಲಿನೊಳಗಿಂದ ಉನ್ನತ ಸ್ಥಳಗಳು ತೆಗೆದುಹಾಕಲ್ಪಡಲಿಲ್ಲ. ಆದರೂ ಆಸನ ಹೃದಯವು ತನ್ನ ಸಮಸ್ತ ದಿವಸಗಳಲ್ಲಿ ದೋಷ ವಿಲ್ಲದ್ದಾಗಿತ್ತು.

Cross references

ದ್ವಿತೀಯೋಪದೇಶಕಾಂಡ 12:13

ನೀನು ಕಂಡ ಎಲ್ಲಾ ಸ್ಥಳಗಳಲ್ಲಿ ನಿನ್ನ ದಹನ ಬಲಿಗಳನ್ನು ಅರ್ಪಿಸದ ಹಾಗೆ ನೋಡಿಕೋ;

1 ಅರಸುಗಳು 3:2

ಆದರೆ ಆ ಕಾಲದ ವರೆಗೂ ಕರ್ತನ ಹೆಸರಿಗೆ ಆಲಯ ಕಟ್ಟಲ್ಪಡದೆ ಇದ್ದದರಿಂದ ಜನರು ಎತ್ತರದ ಸ್ಥಳಗಳಲ್ಲಿ ಬಲಿ ಅರ್ಪಿಸುತ್ತಿದ್ದರು.

1 ಅರಸುಗಳು 3:3

ಸೊಲೊ ಮೋನನು ಕರ್ತನನ್ನು ಪ್ರೀತಿಮಾಡಿ ತನ್ನ ತಂದೆ ಯಾದ ದಾವೀದನ ಕಟ್ಟಳೆಗಳಲ್ಲಿ ನಡೆಯುತ್ತಾ ಇದ್ದರೂ ತಾನು ಎತ್ತರ ಸ್ಥಳಗಳಲ್ಲಿ ಬಲಿಯನ್ನೂ ಧೂಪವನ್ನೂ ಅರ್ಪಿಸುತ್ತಾ ಇದ್ದನು.

1 ಅರಸುಗಳು 11:4

ಸೊಲೊಮೋನನು ಮುದುಕನಾದ ಕಾಲದಲ್ಲಿ ಏನಾಯಿತಂದರೆ, ಅವನ ಪತ್ನಿಯರು ಅನ್ಯದೇವರುಗಳ ಕಡೆಗೆ ಅವನ ಹೃದಯವನ್ನು ತಿರುಗ ಮಾಡಿದರು. ಅವನ ಹೃದಯವು ತನ್ನ ತಂದೆಯಾದ ದಾವೀದನ ಹೃದಯದ ಹಾಗೆ ತನ್ನ ದೇವರಾದ ಕರ್ತನ ಸಂಗಡ ಪರಿಪೂರ್ಣವಾಗಿ ಇರಲಿಲ್ಲ.

1 ಅರಸುಗಳು 22:43

ಅವನು ತನ್ನ ತಂದೆಯಾದ ಆಸನ ಎಲ್ಲಾ ಮಾರ್ಗ ಗಳಲ್ಲಿ ನಡೆದು ಅದನ್ನು ಬಿಟ್ಟು ತೊಲಗದೆ ಕರ್ತನ ಸಮ್ಮುಖದಲ್ಲಿ ಯಥಾರ್ಥವಾದದ್ದನ್ನು ಮಾಡಿದನು. ಆದರೂ ಉನ್ನತ ಸ್ಥಳಗಳನ್ನು ತೆಗೆದುಹಾಕಲಿಲ್ಲ; ಜನರು ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುತ್ತಿದ್ದರು.

2 ಅರಸುಗಳು 12:3

ಉನ್ನತ ಸ್ಥಳಗಳು ಮಾತ್ರ ಕೆಡವಲ್ಪಡದೆ ಇದ್ದವು; ಜನರು ಉನ್ನತ ಸ್ಥಳಗಳ ಮೇಲೆ ಬಲಿಯನ್ನೂ ಧೂಪವನ್ನೂ ಅರ್ಪಿಸುತ್ತಾ ಇದ್ದರು.

2 ಅರಸುಗಳು 14:4

ಆದರೆ ಉನ್ನತ ಸ್ಥಳಗಳನ್ನು ತೆಗೆದು ಹಾಕಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಯರ್ಪಿಸಿ ಧೂಪವನ್ನು ಸುಡುತ್ತಿದ್ದರು.

2 ದಿನವೃತ್ತಾಂತ 14:3

ಅವನು ಅನ್ಯದೇವರು ಗಳ ಬಲಿಪೀಠಗಳನ್ನೂ ಉನ್ನತ ಸ್ಥಳಗಳನ್ನೂ ತೆಗೆದು ಹಾಕಿ ವಿಗ್ರಹಗಳನ್ನು ಒಡೆದುಬಿಟ್ಟು ಅವುಗಳ ತೋಪು ಗಳನ್ನು ಕಡಿದುಹಾಕಿ,

2 ದಿನವೃತ್ತಾಂತ 16:7

ಅದೇ ಕಾಲದಲ್ಲಿ ಪ್ರವಾದಿಯಾದ ಹನಾನಿಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ -- ನೀನು ನಿನ್ನ ದೇವರಾದ ಕರ್ತನ ಮೇಲೆ ಆತುಕೊಳ್ಳದೆ ಅರಾಮಿನ ಅರಸನ ಮೇಲೆ ಆತು ಕೊಂಡದ್ದರಿಂದ ಅರಾಮಿನ ಅರಸನ ಸೈನ್ಯವು ನಿನ್ನ ಕೈಯಿಂದ ತಪ್ಪಿಸಿಕೊಂಡಿತು.

2 ದಿನವೃತ್ತಾಂತ 20:32

ಅವನು ತನ್ನ ತಂದೆಯಾದ ಆಸನ ಮಾರ್ಗ ದಲ್ಲಿ ನಡೆದು ಅದನ್ನು ಬಿಟ್ಟುಬಿಡದೆ ಕರ್ತನ ಸಮ್ಮುಖ ದಲ್ಲಿ ಸರಿಯಾದದ್ದನ್ನು ಮಾಡಿದನು.

2 ದಿನವೃತ್ತಾಂತ 20:33

ಆದರೆ ಉನ್ನತ ಸ್ಥಳಗಳು ಇನ್ನೂ ತೆಗೆದುಹಾಕಲ್ಪಡಲಿಲ್ಲ. ಜನರು ತಮ್ಮ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸಿದ್ಧಮಾಡಿರಲಿಲ್ಲ;

2 ದಿನವೃತ್ತಾಂತ 28:4

ಹಾಗೆಯೇ ಅವನು ಬೆಟ್ಟಗಳಲ್ಲಿಯೂ ಮೇಡುಗಳ ಮೇಲೆಯೂ ಎಲ್ಲಾ ಹಸುರು ಗಿಡಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು.

2 ದಿನವೃತ್ತಾಂತ 33:17

ಆದಾಗ್ಯೂ ಜನರು ಇನ್ನೂ ಉನ್ನತ ಸ್ಥಳ ಗಳಲ್ಲಿಯೇ ತಮ್ಮ ದೇವರಾದ ಕರ್ತನಿಗೆ ಮಾತ್ರ ಬಲಿಯನ್ನರ್ಪಿಸುತ್ತಾ ಇದ್ದರು.

Interlinear

Choose Theme