Home Bibles 2 ದಿನವೃತ್ತಾಂತ 13:6 · ಕನ್ನಡ ಬೈಬಲ್
2 ದಿನವೃತ್ತಾಂತ 13:6 · ಕನ್ನಡ ಬೈಬಲ್

ಆದರೆ ದಾವೀದನ ಮಗನಾದ ಸೊಲೊ ಮೋನನ ಸೇವಕನಾಗಿದ್ದ ನೆಬಾಟನ ಮಗನಾದ ಯಾರೋಬ್ಬಾಮನು ಎದ್ದು ತನ್ನ ಯಜಮಾನನ ಮೇ ತಿರುಗಿಬಿದ್ದಿದ್ದಾನೆ.

Cross references

1 ಅರಸುಗಳು 11:26

ಇದಲ್ಲದೆ ಚರೇದ ಪಟ್ಟಣದ ಎಫ್ರಾತ್ಯನಾದ ನೆಬಾಟನ ಮಗನಾದ ಯಾರೊಬ್ಬಾಮನು ಇದ್ದನು; ಚೆರೂಯಳೆಂಬ ವಿಧವೆಯಾದ ಸ್ತ್ರೀ ಅವನಿಗೆ ತಾಯಿ ಯು; ಅವನು ಸೊಲೊಮೋನನ ಸೇವಕನು; ಇವನು ಅರಸನಿಗೆ ವಿರೋಧವಾಗಿ ತನ್ನ ಕೈಯನ್ನೆತ್ತಿದ್ದನು.

1 ಅರಸುಗಳು 12:20

ಯಾರೊಬ್ಬಾಮನು ತಿರುಗಿ ಬಂದಿದ್ದಾನೆಂದು ಕೇಳಿದಾಗ ಇಸ್ರಾಯೇಲ್ಯ ರೆಲ್ಲರು ಸಭೆಗೆ ಅವನನ್ನು ಕರೇಕಳುಹಿಸಿ ಸಮಸ್ತ ಇಸ್ರಾ ಯೇಲಿನ ಮೇಲೆ ಅವನನ್ನು ಅರಸನನ್ನಾಗಿ ಮಾಡಿದರು. ಯೆಹೂದನ ಗೋತ್ರ ಹೊರತಾಗಿ ದಾವೀದನ ಮನೆ ಯನ್ನು ಹಿಂಬಾಲಿಸುವವರು ಯಾರೂ ಇರಲಿಲ್ಲ.

1 ಅರಸುಗಳು 12:27

ಈ ಜನರು ಯೆರೂಸಲೇಮಿನಲ್ಲಿರುವ ಕರ್ತನ ಮಂದಿರಕ್ಕೆ ಬಲಿ ಅರ್ಪಿಸಲು ಹೋದರೆ ಆಗ ಈ ಜನರ ಹೃದಯವು ಯೆಹೂದದ ಅರಸನಾದ ರೆಹಬ್ಬಾಮನ ಕಡೆಗೆ ಅಂದರೆ ತಮ್ಮ ಯಜಮಾನನ ಕಡೆಗೆ ಮತ್ತೆ ತಿರುಗುವದು. ಅವರು ನನ್ನನ್ನು ಕೊಂದು ಹಾಕಿ ಯೆಹೂದದ ಅರಸನಾದ ರೆಹೆಬ್ಬಾಮನ ಕಡೆಗೆ ತಿರುಗಿ ಹೋದಾರು.

2 ದಿನವೃತ್ತಾಂತ 10:19

ಹೀಗೆ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಗೆ ವಿರೋಧವಾಗಿ ತಿರುಗಿಬಿದ್ದರು.

Interlinear

Choose Theme