Home Bibles ☰ Books 2 ದಿನವೃತ್ತಾಂತ 10:6 · ಕನ್ನಡ ಬೈಬಲ್
2 ದಿನವೃತ್ತಾಂತ 10:6 · ಕನ್ನಡ ಬೈಬಲ್

ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನು ಬದುಕಿರುವಾಗ ಅವನ ಮುಂದೆ ನಿಲ್ಲುತ್ತಿದ್ದ ಹಿರಿಯರ ಆಲೋಚನೆಯನ್ನು ಕೇಳಿ-- ಈ ಜನರಿಗೆ ಪ್ರತ್ಯುತ್ತರಕೊಡಲು ನೀವು ಏನು ಆಲೋಚನೆ ಹೇಳುತ್ತೀರಿ ಅಂದನು.

Cross references

2 ಸಮುವೇಲ 16:20

ಆಗ ಅಬ್ಷಾಲೋಮನು ಅಹೀತೋಫೆಲನಿಗೆ--ನಾವು ಮಾಡಬೇಕಾದದ್ದನ್ನು ನೀನು ಯೋಚನೆ ಮಾಡಿ ಹೇಳು ಅಂದನು.

2 ಸಮುವೇಲ 17:5

ಆದರೆ ಅಬ್ಷಾಲೋಮನು ಅರ್ಕೀಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ ಅಂದನು.

ಯೋಬ 8:8

ದಯಮಾಡಿ ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಂಡುಕೊಂಡದನ್ನು ಗಮನಿಸು.

ಯೋಬ 12:12

ಮುದುಕರಲ್ಲಿ ಜ್ಞಾನವೂ ದಿನಗಳುದ್ದಕ್ಕೂ ಗ್ರಹಿ ಕೆಯೂ ಇವೆ.

ಯೋಬ 32:7

ದಿನ ಗತಿಸಿದವರು ಮಾತನಾಡಲಿ, ಬಹಳ ವರುಷದವರು ಜ್ಞಾನವನ್ನು ಬೋಧಿಸಲಿ ಅಂದೆನು.

ಸಾಮೇತಿಗಳು 12:15

ಅವಿವೇಕಿಯ ಮಾರ್ಗ ವು ತನ್ನ ಕಣ್ಣುಗಳಿಗೆ ನೆಟ್ಟಗಾಗಿದೆ; ಆಲೋಚನೆಗೆ ಕಿವಿಗೊಡುವವನು ಜ್ಞಾನಿಯಾಗಿದ್ದಾನೆ.

ಸಾಮೇತಿಗಳು 19:20

ಆಲೋಚನೆಯನ್ನು ಕೇಳಿ ಶಿಕ್ಷಣವನ್ನು ಅಂಗೀಕರಿಸು. ಕಡೆಯಲ್ಲಿ ನೀನು ಜ್ಞಾನಿ ಯಾಗುವಿ.

ಸಾಮೇತಿಗಳು 27:10

ನಿನ್ನ ಸ್ನೇಹಿತನನ್ನೂ ನಿನ್ನ ತಂದೆಯ ಸ್ನೇಹಿತನನ್ನೂ ತ್ಯಜಿಸಬೇಡ; ಅಲ್ಲದೆ ನಿನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನ ಸಹೋದರನ ಮನೆಗೆ ಹೋಗಬೇಡ; ದೂರವಾಗಿರುವ ಸಹೋದರನಿಗಿಂತ ಹತ್ತಿರವಾಗಿರುವ ನೆರೆಯವನೇ ಲೇಸು.

ಯೆರೆಮಿಯ 42:2

ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಗರ್ವಿಷ್ಠ ಮನುಷ್ಯ ರೆಲ್ಲರೂ ಮಾತನಾಡಿ ಯೆರೆವಿಾಯನಿಗೆ ಹೇಳಿದ್ದೇ ನಂದರೆ-ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾ ಗಿರುವದಕ್ಕೆ ಐಗುಪ್ತಕ್ಕೆ ಹೋಗಬಾರದೆಂದು ಹೇಳುವದಕ್ಕೆ ನಮ್ಮ ದೇವರಾದ ಕರ್ತನು ನಿನ್ನನ್ನು ಕಳುಹಿಸಲಿಲ್ಲ.

Interlinear

Choose Theme