2 ದಿನವೃತ್ತಾಂತ 1:17 · ಕನ್ನಡ ಬೈಬಲ್
ಹಾಗೆಯೇ ಐಗುಪ್ತದಿಂದ ಒಂದು ರಥಕ್ಕೆ ಆರು ನೂರು ಬೆಳ್ಳಿ ಶೇಕೆಲುಗಳ ಕ್ರಯವಾಗಿ ತಕ್ಕೊಂಡರು. ಒಂದು ಕುದುರೆಗೆ ನೂರೈವತ್ತು ಬೆಳ್ಳಿ ಶೇಕೆಲುಗಳ ಕ್ರಯವಾಗಿ ತರಿಸಿದರು. ಈ ಪ್ರಕಾರ ಹಿತ್ತಿಯರ ಅರಸುಗಳೆಲ್ಲರೂ ಅರಾಮಿನ ಅರಸುಗಳೆಲ್ಲರೂ ಅವರ ಮೂಲಕವಾಗಿ ತರಿಸಿಕೊಂಡರು.
Cross references
2 ಅರಸುಗಳು 10:29
ಆದರೆ ಬೇತೇಲ್, ದಾನ್‌ನಲ್ಲಿಯೂ ಇರುವ ಬಂಗಾರದ ಹೋರಿಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ.
2 ದಿನವೃತ್ತಾಂತ 9:28
ಇದಲ್ಲದೆ ಐಗುಪ್ತದಿಂದಲೂ ಸಮಸ್ತ ದೇಶಗಳಿಂದಲೂ ಸೊಲೊಮೋನನಿಗೆ ಕುದುರೆಗಳನ್ನು ತಕ್ಕೊಂಡು ಬಂದರು.