Home Bibles ☰ Books 1 ತಿಮೋಥೆಯ 5:6 · ಕನ್ನಡ ಬೈಬಲ್
1 ತಿಮೋಥೆಯ 5:6 · ಕನ್ನಡ ಬೈಬಲ್

ಆದರೆ ಭೋಗಿಯಾಗಿರುವ ವಿಧವೆಯು ಬದುಕಿರು ವಾಗಲೂ ಸತ್ತವಳೇ.

Cross references

ದ್ವಿತೀಯೋಪದೇಶಕಾಂಡ 28:54

ನಿನ್ನಲ್ಲಿ ಮೃದುವಾದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಯಾವನೋ ಅವನ ಕಣ್ಣು ತನ್ನ ಸಹೋದರನ ಕಡೆಗೂ ತನ್ನ ಮಗ್ಗುಲಲ್ಲಿರುವ ತನ್ನ ಹೆಂಡತಿಯ ಕಡೆಗೂ ಅವನು ಉಳಿಸಿಕೊಳ್ಳುವ ಮಕ್ಕಳ ಕಡೆಗೂ ಕಠಿಣವಾಗುವದು.

ದ್ವಿತೀಯೋಪದೇಶಕಾಂಡ 28:56

ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ

1 ಸಮುವೇಲ 15:32

ಸಮುವೇಲನು--ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ತನ್ನಿರಿ ಅಂದನು. ಅಗಾಗನು ಆನಂದವಾಗಿ ಅವನ ಬಳಿಗೆ ಹೋಗಿ--ನಿಶ್ಚಯವಾಗಿ ಮರಣದ ಕಹಿ ತಪ್ಪಿಹೋಯಿತೆಂದು ಅಂದು ಕೊಂಡನು.

1 ಸಮುವೇಲ 25:6

ಅಭಿವೃದ್ಧಿಯಲ್ಲಿ ಬಾಳುವವನಾದ ಅವನಿಗೆ ಹೇಳ ಬೇಕಾದದ್ದೇನಂದರೆ--ನಿನಗೆ ಸಮಾಧಾನವೂ ನಿನ್ನ ಮನೆಗೆ ಸಮಾಧಾನವೂ ನಿನಗೆ ಉಂಟಾದ ಎಲ್ಲಕ್ಕೂ ಸಮಾಧಾನವೂ ಆಗಲಿ.

ಯೋಬ 21:11

ತಮ್ಮ ಚಿಕ್ಕವರನ್ನು ಮಂದೆಯ ಹಾಗೆ ಕಳುಹಿಸು ತ್ತಾರೆ; ಅವರ ಮಕ್ಕಳು ಕುಣಿದಾಡುತ್ತಾರೆ.

ಕೀರ್ತನೆಗಳು 73:5

ಬೇರೆ ಮನುಷ್ಯರಂತೆ ಅವರು ಕಷ್ಟದಲ್ಲಿಲ್ಲ. ಇಲ್ಲವೆ ಬೇರೆ ಮನುಷ್ಯರ ಹಾಗೆ ಅವರಿಗೆ ವ್ಯಾಧಿಯೂ ಇಲ್ಲ;

ಸಾಮೇತಿಗಳು 29:21

ಬಾಲ್ಯದಿಂದ ತನ್ನ ಸೇವಕನನ್ನು ಕೋಮಲವಾಗಿ ಸಾಕುವವನು ತರುವಾಯ ತನಗೆ ಮಗನಂತೆ ಆಗುವನು.

ಯೆಶಾಯ 22:13

ಆದರೆ ಇಗೋ, ಉತ್ಸಾ ಹವು ಸಂತೋಷವು, ದನಕೊಯ್ಯುವದು ಕುರಿಕಡಿಯು ವದು ಮಾಂಸವನ್ನು ತಿನ್ನುವದು, ದ್ರಾಕ್ಷಾರಸ ಕುಡಿ ಯುವದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯು ವದೇ (ಇವೆ, ನಿಮ್ಮ ಕಾರ್ಯ).

ಯೆಶಾಯ 47:1

ಬಾಬೆಲಿನ ಕುಮಾರ್ತೆಯಾದ ಓ ಕನ್ಯಾ ಸ್ತ್ರೀಯೇ, ಕೆಳಕ್ಕೆ ಇಳಿದು ಬಂದು ದೂಳಿ ನಲ್ಲಿ ಕುಳಿತುಕೋ, ಓ ಕಸ್ದೀಯರ ಕುಮಾರಿಯೇ ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ. ಯಾಕಂದರೆ ಇನ್ನು ಮೇಲೆ ನೀನು ಕೋಮಲೆ ಮತ್ತು ನಾಜೂಕಾದವಳು ಎಂದು ಕರೆಯಲ್ಪಡುವದಿಲ್ಲ.

ಯೆರೆಮಿಯ 6:2

ಕರ್ತನ ಆಲಯದ ಬಾಗಿಲಿನಲ್ಲಿ ನಿಂತುಕೊಂಡು ಈ ವಾಕ್ಯವನ್ನು ಅಲ್ಲಿ ಸಾರು, ಏನಂದರೆ ಯೆಹೂದದವರೆಲ್ಲರೇ, ಕರ್ತನನ್ನು ಆರಾಧಿಸುವದಕ್ಕೆ ಈ ಬಾಗಿಲುಗಳಲ್ಲಿ ಸೇರುವವರೇ, ಕರ್ತನ ವಾಕ್ಯವನ್ನು ಕೇಳಿರಿ.

ವಿಲಾಪಗಳು 4:5

ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ.

ಆಮೋಸ 6:5

ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ.

ಮತ್ತಾಯ 8:22

ಆದರೆ ಯೇಸು ಅವನಿಗೆ--ನನ್ನನ್ನು ಹಿಂಬಾಲಿಸು; ಸತ್ತವರು ತಮ್ಮ ಸತ್ತವರನ್ನು ಹೂಣಿಡಲಿ ಎಂದು ಹೇಳಿದನು.

Interlinear

Choose Theme