Home Bibles 1 ತೆಸಲೋನಿಕದವರಿಗೆ 3:1 · ಕನ್ನಡ ಬೈಬಲ್
1 ತೆಸಲೋನಿಕದವರಿಗೆ 3:1 · ಕನ್ನಡ ಬೈಬಲ್

ಆದದರಿಂದ ಇನ್ನು ತಡೆಯಲಾರದೆ ನಾವು ಅಥೇನೆಯಲ್ಲಿ ಒಬ್ಬಂಟಿಗರಾಗಿಯೇ ಇರುವದು ಒಳ್ಳೇದೆಂದು ಯೋಚಿಸಿದೆವು;

Cross references

ಯೆರೆಮಿಯ 20:9

ಈ ಪಟ್ಟಣದಲ್ಲಿ ನಿಲ್ಲು ವವನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಸಾಯುವನು; ಆದರೆ ಹೊರಗೆ ಹೋಗಿ ನಿಮಗೆ ಮುತ್ತಿಗೆ ಹಾಕುವ ಕಸ್ದೀಯರ ಕಡೆಗೆ ಸೇರು ವವನು ಬದುಕುವನು;

ಅಪೋಸ್ತಲರ ಕೃತ್ಯಗಳು 17:15

ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡು ಹೋಗಿ ಸೀಲ ನನ್ನೂ ತಿಮೊಥೆಯನನ್ನೂ ಬೇಗ ತನ್ನ ಬಳಿಗೆ ಬರ ಬೇಕೆಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಹೋದರು.

2 ಕೊರಿಂಥದವರಿಗೆ 2:13

ಆದರೂ ನನ್ನ ಸಹೋದರನಾದ ತೀತನು ನನಗೆ ಸಿಕ್ಕಲಿಲ್ಲವಾದ ಕಾರಣ ನನ್ನ ಆತ್ಮಕ್ಕೆ ಉಪಶಮನವಿಲ್ಲದೆ ಅಲ್ಲಿದ್ದವರಿಂದ ಕಳುಹಿಸಿ ಕೊಂಡವನಾಗಿ ಹೊರಟು ಮಕೆದೋನ್ಯಕ್ಕೆ ಬಂದೆನು.

2 ಕೊರಿಂಥದವರಿಗೆ 11:29

ಯಾರಾದರೂ ಬಲವಿಲ್ಲದವನಾದರೆ ನಾನು ಬಲವಿಲ್ಲದವನಾಗದೆ ಇರುವೆನೋ? ಯಾರಾದರೂ ಮುಗ್ಗರಿಸಿದರೆ ನಾನು ತಾಪಪಡದೆ ಇರುವೆನೋ?

1 ತೆಸಲೋನಿಕದವರಿಗೆ 2:17

ಸಹೋದರರೇ, ನಾವಂತೂ ದೇಹದಲ್ಲಿ ಮಾತ್ರ ನಿಮ್ಮನ್ನು ಸ್ವಲ್ಪ ಕಾಲ ಅಗಲಿದರು ಹೃದಯದಲ್ಲಿ ಅಗಲದೆ ನಿಮ್ಮ ಮುಖವನ್ನು ನೋಡುವದಕ್ಕೆ ಅತ್ಯಾಶೆಯಿಂದ ಬಹಳ ಪ್ರಯತ್ನ ಮಾಡಿದೆವು.

1 ತೆಸಲೋನಿಕದವರಿಗೆ 3:5

ಈ ಕಾರಣದಿಂದ ನಮ್ಮ ಪ್ರಯಾಸವು ವ್ಯರ್ಥವಾಗುವಂತೆ ಶೋಧಕನು ನಿಮ್ಮನ್ನು ಯಾವದಾದರೂ ಒಂದು ರೀತಿಯಲ್ಲಿ ಶೋಧಿ ಸುವನೋ ಎಂದು ನಾನು ತಡೆಯಲಾರದೆ ನಿಮ್ಮ ನಂಬಿಕೆಯ ವಿಷಯದಲ್ಲಿ ತಿಳುಕೊಳ್ಳುವದಕ್ಕೆ ಕಳುಹಿಸಿ ದೆನು.

Interlinear

Choose Theme