Home Bibles 1 ಸಮುವೇಲ 5:4 · ಕನ್ನಡ ಬೈಬಲ್
1 ಸಮುವೇಲ 5:4 · ಕನ್ನಡ ಬೈಬಲ್

ಆಗ ಅವರು ದಾಗೋನನನ್ನು ತೆಗೆದು ಅದನ್ನು ಅದರ ಸ್ಥಳದಲ್ಲಿ ತಿರಿಗಿ ಇಟ್ಟರು. ಅವರು ಮಾರನೆ ದಿವಸ ಬೆಳಿಗ್ಗೆ ಬಂದಾಗ ಇಗೋ, ದಾಗೋನ್‌ ಕರ್ತನ ಮಂಜೂಷದ ಮುಂದೆ ಬೋರಲು ಬಿದ್ದಿತ್ತು; ದಾಗೋನನ ತಲೆಯೂ ಅದರ ಎರಡು ಕೈಗಳೂ ಹೊಸ್ತಿಲ ಮೇಲೆ ಕಡಿಯಲ್ಪಟ್ಟು ಬಿದ್ದಿದ್ದವು; ಮುಂಡ ಮಾತ್ರ ಅದಕ್ಕೆ ಉಳಿದಿತ್ತು.

Cross references

ಯೆಶಾಯ 2:18

ಆತನು ವಿಗ್ರಹಗಳನ್ನು ಸಂಪೂರ್ಣ ವಾಗಿ ಇಲ್ಲದಂತೆ ಮಾಡಿಬಿಡುವನು.

ಯೆಶಾಯ 27:9

ಹೀಗಿರಲು (ಈ ಕಾರಣದಿಂದ) ಯಾಕೋಬು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಒಡೆದುಹೋದ ಸುಣ್ಣದ ಕಲ್ಲುಗಳಂತೆ ಮಾಡುವಾಗ ವಿಗ್ರಹಸ್ತಂಭಗಳೂ ಸೂರ್ಯಸ್ತಂಭ ಗಳೂ ಏಳುವದಿಲ್ಲ ಮತ್ತು ಅದರ ಪಾಪಪರಿಹಾರಕ್ಕೆ ಗುರುತಾದ ಪೂರ್ಣಫಲವು ಇದೇ.

ಯೆರೆಮಿಯ 10:11

ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವರು ತಪ್ಪಿಸಿಕೊಳ್ಳ ಲಾರದ ಕೇಡನ್ನು ಅವರ ಮೇಲೆ ತರುವೆನು; ಅವರು ನನ್ನನ್ನು ಕೂಗಿದರೂ ನಾನು ಅದನ್ನು ಕೇಳುವದಿಲ್ಲ,

ಯೆರೆಮಿಯ 10:14

ಆದದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ; ಅವರಿಗೋಸ್ಕರ ಮೊರೆ ಯನ್ನೂ ಪ್ರಾರ್ಥನೆಯನ್ನೂ ಎತ್ತಬೇಡ; ಅವರು ತಮ್ಮ ಕೇಡಿನ ನಿಮಿತ್ತ ನನ್ನನ್ನು ಕೂಗುವ ಸಮಯದಲ್ಲಿ ನಾನು ಕೇಳೆನು.

ಯೆರೆಮಿಯ 10:15

ನನ್ನ ಪ್ರಿಯಳಿಗೆ ನನ್ನ ಮನೆಯಲ್ಲಿ ಏನು ಕೆಲಸ, ಅವಳು ಬಹಳ ಮಂದಿಯ ಸಂಗಡ ಕುಯುಕ್ತಿಯನ್ನು ನಡಿಸಿದ್ದಾಳೆ; ಪರಿಶುದ್ಧ ಮಾಂಸವು ನಿನ್ನನ್ನು ಬಿಟ್ಟು ಹೋಯಿತು; ನೀನು ಕೆಟ್ಟತನ ಮಾಡುವಾಗ ಉಲ್ಲಾಸ ಪಡುತ್ತೀ.

ಯೆರೆಮಿಯ 50:2

ಬಾಬೆಲಿಗೆ ತೂರುವವರನ್ನು ಕಳುಹಿಸುವೆನು; ಅವರು ಅದನ್ನು ತೂರಿ ಅದರ ದೇಶವನ್ನು ಬರಿದುಮಾಡುವರು; ದುರ್ದಿನದಲ್ಲಿ ಸುತ್ತಲಾಗಿ ಅದಕ್ಕೆ ವಿರೋಧವಾಗಿರುವರು.

ಯೆಹೆಜ್ಕೇಲ 6:4

ನಿಮ್ಮ ಯಜ್ಞವೇದಿಗಳು ಹಾಳಾಗುವವು; ನಿಮ್ಮ ಪ್ರತಿಮೆಗಳು ಮುರಿಯಲ್ಪಡು ವವು; ನಿಮ್ಮಲ್ಲಿ ಹತರಾದ ಮನುಷ್ಯರನ್ನು ನಿಮ್ಮ ವಿಗ್ರ ಹಗಳ ಮುಂದೆ ನಾನು ಬಿಸಾಡುವೆನು.

ದಾನಿಯೇಲ 11:8

ಅವರ ದೇವರು ಗಳನ್ನೂ ಅವರ ಪ್ರಧಾನರನ್ನೂ ಬೆಳ್ಳಿಬಂಗಾರಗಳ ಪಾತ್ರೆಗಳನ್ನೂ ಸೂರೆಮಾಡಿ ಐಗುಪ್ತದೇಶಕ್ಕೆ ಬಂದು ಉತ್ತರದ ಅರಸನಿಗಿಂತ ಹೆಚ್ಚು ವರುಷಗಳು ಆಳುವನು.

ಮೀಕ 1:7

ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು.

Interlinear

Choose Theme