Home Bibles 1 ಸಮುವೇಲ 3:13 · ಕನ್ನಡ ಬೈಬಲ್
1 ಸಮುವೇಲ 3:13 · ಕನ್ನಡ ಬೈಬಲ್

ತನ್ನ ಕುಮಾರರು ತಮ್ಮ ಭ್ರಷ್ಟತ ನಕ್ಕೆ ಈಡಾದಾಗ ಅವರನ್ನು ಹತೋಟಿಗೆ ತರಲಿಲ್ಲ. ಆದದರಿಂದ ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯ ತೀರಿಸುವೆನು ಎಂದು ಹೇಳಿದ್ದೇನೆ.

Cross references

1 ಸಮುವೇಲ 2:12

ಆದರೆ ಏಲಿಯ ಕುಮಾರರು ಕರ್ತನನ್ನು ಅರಿಯದೆ ಬೆಲಿಯಾಳನ ಮಕ್ಕಳಾಗಿದ್ದರು.

1 ಸಮುವೇಲ 2:17

ಆ ಯೌವನಸ್ಥರ ಪಾಪವು ಕರ್ತನ ಸನ್ನಿಧಿಯಲ್ಲಿ ಅಧಿಕವಾಗಿತ್ತು. ಆದದರಿಂದ ಜನರು ಕರ್ತನ ಅರ್ಪಣೆಯನ್ನು ತುಚ್ಛ ವಾಗಿ ಕಂಡರು.

1 ಸಮುವೇಲ 2:22

ಆದರೆ ಏಲಿಯು ಬಹಳ ವೃದ್ಧನಾಗಿದ್ದನು. ತನ್ನ ಕುಮಾರರು ಇಸ್ರಾಯೇಲಿಗೆ ಮಾಡುವದೆಲ್ಲವನ್ನೂ ಅವರು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕೂಡಿ ಬರುವ ಸ್ತ್ರೀಯರ ಸಂಗಡ ಮಲಗಿದ್ದರೆಂಬದನ್ನೂ ಕೇಳಿ ಅವರಿಗೆ--

1 ಅರಸುಗಳು 1:6

ಅವನ ತಂದೆಯು ಎಂದಾದರೂ--ನೀನು ಯಾಕೆ ಹೀಗೆ ಮಾಡಿದಿ ಎಂದು ಹೇಳಿ ಅವನನ್ನು ಗದರಿಸಲಿಲ್ಲ. ಇದಲ್ಲದೆ ಅವನು ಬಹು ರೂಪವಂತನಾಗಿದ್ದನು.

1 ಅರಸುಗಳು 2:44

ಇದಲ್ಲದೆ ಅರಸನು ಶಿಮ್ಮಿಗೆ--ನೀನು ನನ್ನ ತಂದೆಯಾದ ದಾವೀ ದನಿಗೆ ಮಾಡಿದ ಕೆಟ್ಟತನವನ್ನೆಲ್ಲಾ ನಿನ್ನ ಹೃದಯಕ್ಕೆ ತಿಳಿದದೆ. ಕರ್ತನು ನಿನ್ನ ಕೆಟ್ಟತನವನ್ನು ನಿನ್ನ ತಲೆಯ ಮೇಲೆ ಬರಮಾಡುವನು.

2 ದಿನವೃತ್ತಾಂತ 20:12

ಓ ನಮ್ಮ ದೇವರೇ, ನೀನು ಅವರಿಗೆ ನ್ಯಾಯತೀರಿಸುವದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾಗುಂಪನ್ನು ಎದು ರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯಲಿಲ್ಲ. ಆದರೆ ನಮ್ಮ ಕಣ್ಣುಗಳು ನಿನ್ನ ಮೇಲೆ ಅವೆ ಅಂದರು.

ಸಾಮೇತಿಗಳು 19:18

ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಅಳುವಿಕೆಗೆ ನೀನು ಕನಿಕರಿಸದೆ ಇರು.

ಸಾಮೇತಿಗಳು 23:13

ಹುಡು ಗನ ಶಿಕ್ಷೆಗೆ ಹಿಂತೆಗೆಯಬೇಡ; ಅವನನ್ನು ಬೆತ್ತದಿಂದ ಹೊಡೆದರೆ ಅವನು ಸಾಯುವದಿಲ್ಲ.

ಸಾಮೇತಿಗಳು 29:15

ಬೆತ್ತ ಬೆದ ರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.

ಸಭಾಪ್ರಸಂಗಿ 7:22

ಅದೇ ಪ್ರಕಾರ ನೀನು ನೀನಾಗಿಯೇ ಅನೇಕಸಲ ಇತರರನ್ನು ಶಪಿಸಿದ್ದು ನಿನ್ನ ಹೃದಯಕ್ಕೆ ತಿಳಿದದೆ;

ಯೆಹೆಜ್ಕೇಲ 7:3

ಈಗ ನಿನ್ನ ಮೇಲೂ ಅಂತ್ಯವು ಬಂದಿದೆ ಮತ್ತು ನನ್ನ ಕೋಪವನ್ನು ನಿನ್ನ ಮೇಲೆ ಕಳುಹಿಸುತ್ತೇನೆ; ನಿನ್ನ ಮಾರ್ಗಗಳ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.

ಯೆಹೆಜ್ಕೇಲ 18:30

ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ.

ಯೋವೇಲ 3:12

ಜನಾಂಗಗಳು ಎಬ್ಬಿಸಲ್ಪಟ್ಟು ಯೆಹೋಷಾಫಾಟನ ತಗ್ಗಿಗೆ ಬರಲಿ; ಸುತ್ತಲಿನ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವದಕ್ಕೆ ನಾನು ಅಲ್ಲಿ ಕೂತುಕೊಳ್ಳುವೆನು.

ಮತ್ತಾಯ 10:37

ನನಗಿಂತ ಹೆಚ್ಚಾಗಿ ತಂದೆಯನ್ನಾಗಲೀ ತಾಯಿಯನ್ನಾಗಲೀ ಪ್ರೀತಿ ಮಾಡುವವನು ನನಗೆ ಯೋಗ್ಯನಲ್ಲ; ಮತ್ತು ಮಗನ ನ್ನಾಗಲೀ ಮಗಳನ್ನಾಗಲೀ ನನಗಿಂತ ಹೆಚ್ಚಾಗಿ ಪ್ರೀತಿ ಮಾಡುವವನು ನನಗೆ ಯೋಗ್ಯನಲ್ಲ.

1 ಯೋಹಾನ 3:20

ನಮ್ಮ ಹೃದಯವು ನಮ್ಮನ್ನು ಖಂಡಿಸದಿದ್ದರೆ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವ ನಾಗಿದ್ದಾನೆ.

Interlinear

Choose Theme