ನೀನು ಮಾಡಿದ ಈ ಕಾರ್ಯ ಒಳ್ಳೇದಲ್ಲ. ಕರ್ತನ ಜೀವ ದಾಣೆ--ಕರ್ತನ ಅಭಿಷಿಕ್ತನಾದ ನಿಮ್ಮ ಒಡೆಯನನ್ನು ಕಾಯದೆ ಹೋದದರಿಂದ ಮರಣಕ್ಕೆ ನೀವು ಪಾತ್ರರು. ಈಗ ಅರಸನ ತಲೆದಿಂಬಿನ ಬಳಿಯಲ್ಲಿದ್ದ ಅವನ ಈಟಿಯೂ ನೀರಿನ ತಂಬಿಗೆಯೂ ಎಲ್ಲಿ ಇವೆಯೋ ನೋಡು ಅಂದನು.
Cross references
ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
ಅವನು ತನ್ನ ಮನುಷ್ಯರಿಗೆ--ಅವನು ಕರ್ತನ ಅಭಿಷಿಕ್ತನಾದದ್ದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ ಕರ್ತನಿಂದ ಅಭಿಷಿಕ್ತನಾದ ನನ್ನ ಒಡೆಯನಿಗೆ ಈ ಕಾರ್ಯಮಾಡುವದನ್ನು ಕರ್ತನು ತಡೆಯಲಿ ಅಂದನು.
ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು.
ನಾನು ನನ್ನ ಕೈಯನ್ನು ಕರ್ತನ ಅಭಿಷಿಕ್ತನ ಮೇಲೆ ಹಾಕದಹಾಗೆ ಕರ್ತನು ನನಗೆ ಆಟಂಕಮಾಡಲಿ. ಆದರೆ ನೀನು ಅವನ ತಲೆದಿಂಬಿನ ಬಳಿಯಲ್ಲಿರುವ ಈಟಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೋ;
ಆಗ ದಾವೀದನು ಆ ಮನುಷ್ಯನ ಮೇಲೆ ಬಹಳ ಕೋಪಿಸಿಕೊಂಡು ನಾತಾನನಿಗೆ--ಕರ್ತನ ಜೀವದಾಣೆ, ಇದನ್ನು ಮಾಡಿದ ಆ ಮನುಷ್ಯನು ನಿಜವಾಗಿಯೂ ಸಾಯಬೇಕು.
ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಮಾಡು. ಅರಸನಾದ ನನ್ನ ಒಡೆಯನಿಗೆ ನನ್ನ ತಂದೆಯ ಮನೆಯವರೆಲ್ಲರು ಸತ್ತ ವರ ಹಾಗೆ ಇದ್ದಾಗ್ಯೂ ನಿನ್ನ ಮೇಜಿನಲ್ಲಿ ಭೋಜನ ಮಾಡುವವರೊಳಗೆ ನಿನ್ನ ಸೇವಕನನ್ನು ಇಟ್ಟಿ. ನಾನು ಇನ್ನು ಅರಸನಿಗೆ ಹೆಚ್ಚು ಮೊರೆಯಿಡುವದಕ್ಕೆ ಯೋಗ್ಯನೋ ಅಂದನು. ಆಗ ಅರಸನು ಅವನಿಗೆಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡು ವದೇನು?
ಸೆರೆಯವನ ನಿಟ್ಟುಸಿರು ನಿನ್ನ ಮುಂದೆ ಬರಲಿ--ನಿನ್ನ ಮಹಾ ಶಕ್ತಿಯಿಂದ ಸಾಯುವದಕ್ಕಿರುವವರನ್ನು ಕಾಪಾಡು.
ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ.
ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು.