ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಕರ್ತನು ಹೇಳಿದ ಒಳ್ಳೇದನ್ನೆಲ್ಲಾ ನಿನಗೆ ಮಾಡಿ ನಿನ್ನನ್ನು ಇಸ್ರಾಯೇಲ್ಯರ ಮೇಲೆ ನಾಯಕನಾಗಿ ನೇಮಿಸಿದಾಗ ಏನಾಗುವ ದಂದರೆ, ನೀನು ಸುಮ್ಮನೆ ರಕ್ತ ಚೆಲ್ಲಿದ್ದೂ ನನ್ನ ಒಡೆಯನು ತನಗೆ ತಾನೇ ಮುಯ್ಯಿ ತೀರಿಸಿಕೊಂಡದ್ದೂ ನಿನಗೆ ವ್ಯಥೆಯಾಗಿರುವದಿಲ್ಲ;
Cross references
ಆದರೆ ಈಗ ನಿನ್ನ ರಾಜ್ಯವು ನಿಲ್ಲಲಾರದು. ಕರ್ತನು ನಿನಗೆ ಆಜ್ಞಾಪಿಸಿ ದ್ದನ್ನು ನೀನು ಕೈಕೊಳ್ಳದೆ ಹೋದದರಿಂದ ಆತನು ತನ್ನ ಹೃದಯಕ್ಕೆ ಅನುಸರಣೆಯಾದ ಒಬ್ಬ ಮನುಷ್ಯ ನನ್ನು ಹುಡುಕಿ ಅವನನ್ನು ತನ್ನ ಜನರ ಮೇಲೆ ನಾಯಕನನ್ನಾಗಿ ನೇಮಿಸಿದ್ದಾನೆ ಅಂದನು.
ಆಗ ಸಮುವೇಲನು ಅವನಿಗೆನಿನ್ನ ಬಳಿಯಿಂದ ಇಸ್ರಾಯೇಲಿನ ರಾಜ್ಯವನ್ನು ಕರ್ತನು ಈ ಹೊತ್ತು ಕಿತ್ತು ನಿನಗಿಂತ ಒಳ್ಳೆಯವನಾಗಿರುವ ನಿನ್ನ ನೆರೆಯವನಿಗೆ ಅದನ್ನು ಕೊಟ್ಟನು.
ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ; ನಾನು ನಿನ್ನ ತರುವಾಯ ಇರುವೆನು. ಹೀಗೆ ಆಗುವದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ ಅಂದನು.
ಆದದರಿಂದ ನೀನು ನನ್ನ ತರುವಾಯ ನನ್ನ ಸಂತಾನವನ್ನು ನಿರ್ಮೂಲ ಮಾಡುವದಿಲ್ಲವೆಂದೂ ನನ್ನ ತಂದೆಯ ಮನೆಯಲ್ಲಿ ನನ್ನ ಹೆಸರನ್ನು ನಾಶ ಮಾಡುವದಿಲ್ಲವೆಂದೂ ನನಗೆ ಕರ್ತನ ಹೆಸರಿನಿಂದ ಪ್ರಮಾಣಮಾಡು ಅಂದನು.ಹಾಗೆಯೇ ದಾವೀ ದನು ಸೌಲನಿಗೆ ಪ್ರಮಾಣಮಾಡಿದನು. ಆಗ ಸೌಲನು ತನ್ನ ಮನೆಗೆ ಹೋದನು. ಆದರೆ ದಾವೀದನೂ ಅವನ ಜನರೂ ಭದ್ರವಾದ ಸ್ಥಳಕ್ಕೆ ಏರಿ ಹೋದರು.
ನನ್ನ ಸೇವಕನಾದ ದಾವೀದನನ್ನು ಕಂಡು ಕೊಂಡಿದ್ದೇನೆ; ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ.