Home Bibles ☰ Books 1 ಸಮುವೇಲ 25:19 · ಕನ್ನಡ ಬೈಬಲ್
1 ಸಮುವೇಲ 25:19 · ಕನ್ನಡ ಬೈಬಲ್

ತನ್ನ ಸೇವಕರಿಗೆ--ನನಗೆ ಮುಂದಾಗಿ ಹೋಗಿರಿ; ಇಗೋ, ನಾನು ನಿಮ್ಮ ಹಿಂದೆ ಬರುವೆನೆಂದು ಹೇಳಿದಳು; ಆದರೆ ತನ್ನ ಗಂಡನಾದ ನಾಬಾಲನಿಗೆ ತಿಳಿಸಲಿಲ್ಲ.

Cross references

ಆದಿಕಾಂಡ 32:16

ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನು ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ ಅವರಿಗೆ--ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳಬಿಡಿರಿ ಅಂದನು.

ಆದಿಕಾಂಡ 32:19

ಎರಡನೆಯ ವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು.

ಆದಿಕಾಂಡ 32:20

ಇದಲ್ಲದೆ--ನಿನ್ನ ದಾಸನಾದ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು ಎಂದು ಆಜ್ಞಾಪಿಸಿದನು. ಯಾಕಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ನೋಡುವೆನು; ಅವನು ನನ್ನನ್ನು ಅಂಗೀಕರಿಸುವನೇನೋ ಎಂದು ಅಂದು ಕೊಂಡನು.

ಆದಿಕಾಂಡ 32:21

ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಗುಂಪಿನಲ್ಲಿ ಇಳುಕೊಂಡನು.

1 ಸಮುವೇಲ 14:1

ಆ ಕಾಲದಲ್ಲಿ ಏನಾಯಿತಂದರೆ, ಸೌಲನಮಗನಾದ ಯೋನಾತಾನನು ತನ್ನ ಆಯು ಧಗಳನ್ನು ಹಿಡಿಯುವವನಾದ ಯೌವನಸ್ಥನಿಗೆ--ನಾವು ನಮಗೆದುರಾಗಿ ಆಚೆಯಲ್ಲಿರುವ ಫಿಲಿಷ್ಟಿಯರ ಠಾಣಕ್ಕೆ ಹೋಗೋಣ ಬಾ ಅಂದನು; ಆದರೆ ಅವನು ತನ್ನ ತಂದೆಗೆ ತಿಳಿಸಲಿಲ್ಲ.

ಸಾಮೇತಿಗಳು 31:11

ತನಗೆ ಯಾವ ನಷ್ಟವೂ ಇರದಂತೆ ಅವಳ ಪತಿಯ ಹೃದಯವು ತನ್ನಲ್ಲಿ ನಿರ್ಭಯವಾಗಿ ಭರವಸೆ ಇಡುತ್ತದೆ.

ಸಾಮೇತಿಗಳು 31:27

ಆಕೆಯು ತನ್ನ ಗೃಹಕೃತ್ಯಗಳ ನ್ನೆಲ್ಲಾ ಚೆನ್ನಾಗಿ ನೋಡಿಕೊಂಡವಳಾಗಿ ಸೋಮಾರಿ ತನದ ರೊಟ್ಟಿಯನ್ನು ತಿನ್ನುವದಿಲ್ಲ.

Interlinear

Choose Theme