Home Bibles 1 ಸಮುವೇಲ 25:13 · ಕನ್ನಡ ಬೈಬಲ್
1 ಸಮುವೇಲ 25:13 · ಕನ್ನಡ ಬೈಬಲ್

ದಾವೀದನು ತನ್ನ ಮನುಷ್ಯ ರಿಗೆ--ನೀವು ಒಬ್ಬೊಬ್ಬನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ ಅಂದನು. ಪ್ರತಿಯೊಬ್ಬನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡನು; ಹಾಗೆಯೇ ದಾವೀದನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡನು. ದಾವೀದನ ಹಿಂದೆ ಹೆಚ್ಚು ಕಡಿಮೆ ನಾನೂರು ಮಂದಿ ಹೋದರು; ಆದರೆ ಇನ್ನೂರು ಮಂದಿ ಸಾಮಗ್ರಿಗಳ ಬಳಿಯಲ್ಲಿ ನಿಂತರು.

Cross references

ಯೆಹೋಶುವ 9:14

ಆಗ ಇವರು ಕರ್ತನಿಂದ ಆಲೋಚನೆ ಯನ್ನು ಕೇಳದೆ ಅವರ ಆಹಾರದಲ್ಲಿ ತೆಗೆದುಕೊಂಡರು.

1 ಸಮುವೇಲ 22:2

ಇದಲ್ಲದೆ ಶ್ರಮೆಪಟ್ಟವರೂ ಸಾಲಗಾರರೂ ತೃಪ್ತಿಯಿಲ್ಲದವರೂ ಅವನ ಸಂಗಡ ಕೂಡಿಕೊಂಡರು. ಆಗ ಅವರಿಗೆ ದಾವೀದನು ಅಧಿಪತಿಯಾದನು, ಹೆಚ್ಚು ಕಡಿಮೆ ನಾನೂರು ಜನರು ಅವನ ಬಳಿಯಲ್ಲಿ ಇದ್ದರು.

1 ಸಮುವೇಲ 23:13

ಆದದರಿಂದ ದಾವೀದನು ಹೆಚ್ಚು ಕಡಿಮೆ ಆರು ನೂರು ಮಂದಿಯಾದ ತನ್ನ ಜನರು ಎದ್ದು ಕೆಯಾಲಾವನ್ನು ಬಿಟ್ಟು ಹೊರಟು ತಾವು ಹೋಗಬೇಕಾದಲ್ಲಿಗೆ ಹೋದರು. ದಾವೀದನು ಕೆಯಾಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ತಿಳಿಸಲ್ಪಟ್ಟಾಗ ಅವನು ಹೊರಡುವದನ್ನು ನಿಲ್ಲಿಸಿಬಿಟ್ಟನು.

1 ಸಮುವೇಲ 24:5

ಹಾಗೆ ಮಾಡಿದ ಮೇಲೆ ಅವನು ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿ ಕೊಂಡದ್ದರಿಂದ ದಾವೀದನ ಹೃದಯವು ಬಡು ಕೊಂಡಿತು.

1 ಸಮುವೇಲ 27:2

ಆದದರಿಂದ ದಾವೀದನು ಎದ್ದು ತನ್ನ ಸಂಗಡವಿದ್ದ ಆರು ನೂರು ಜನರೊಡನೆ ಗತ್‌ ಊರಿನ ಅರಸನಾಗಿರುವ ಮಾವೋಕಿನ ಮಗನಾದ ಆಕೀಷನ ಬಳಿಗೆ ಹೋದನು.

1 ಸಮುವೇಲ 30:9

ಆಗ ದಾವೀದನೂ ಅವನ ಸಂಗಡ ಇದ್ದ ಆರು ನೂರು ಜನರೂ ಹೋದರು; ಅವರು ಬೆಸೋರ್‌ ಎಂಬ ಹಳ್ಳದ ಬಳಿಗೆ ಬಂದಾಗ ಹಿಂದುಳಿದವರು ಅಲ್ಲಿ ನಿಂತರು.

1 ಸಮುವೇಲ 30:21

ದಾವೀದನ ಹಿಂದೆ ಬರಲಾರದೆ ದಣಿದಿದ್ದರಿಂದ ಬೆಸೋರಿನ ಹಳ್ಳದ ಬಳಿಯಲ್ಲಿ ಬಿಟ್ಟುಹೋಗಿದ್ದ ಇನ್ನೂರು ಜನರ ಬಳಿಗೆ ದಾವೀದನು ಬಂದಾಗ ಅವರು ದಾವೀದನನ್ನೂ ಅವನ ಸಂಗಡ ಇದ್ದ ಜನ ರನ್ನೂ ಎದುರುಗೊಳ್ಳಲು ಹೋದರು. ದಾವೀದನು ಆ ಜನರ ಬಳಿಗೆ ಸೇರಿ ಅವರ ಕ್ಷೇಮಸಮಾಚಾರವನ್ನು ಕೇಳಿದನು.

ಸಾಮೇತಿಗಳು 14:29

ಕೋಪಕ್ಕೆ ನಿಧಾನಿಸು. ದೀರ್ಘಶಾಂತನು ದೊಡ್ಡವಿವೇಕಿ; ಆತ್ಮದಲ್ಲಿ ಆತುರಪಡುವವನು ಮೂಢ ತೆಯನ್ನು ವೃದ್ಧಿಮಾಡುವನು.

ಸಾಮೇತಿಗಳು 16:32

ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠನು, ತನ್ನ ಮನಸ್ಸನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.ಉಡಿಲಲ್ಲಿ ಚೀಟು ಹಾಕಬಹುದು; ಅದನ್ನು ಸ್ಥಿತಿಗೆ ತರುವಂತದ್ದು ಕರ್ತನದೇ.

ಸಾಮೇತಿಗಳು 19:2

ತಿಳುವಳಿಕೆಯಿಲ್ಲದ ಪ್ರಾಣವು ಯುಕ್ತವಲ್ಲ; ತನ್ನ ಪಾದಗಳಿಂದ ದುಡುಕುವ ವನು ಪಾಪಮಾಡುತ್ತಾನೆ.

ಸಾಮೇತಿಗಳು 19:11

ಮನುಷ್ಯನ ವಿವೇಕವು ಅವನ ಕೋಪವನ್ನು ಅಡ್ಡಿಮಾಡುತ್ತದೆ. ದೋಷವನ್ನು ಲಕ್ಷಿ ಸದೆ ಇರುವದು ಅವನಿಗೆ ಘನತೆಯಾಗಿದೆ.

ಸಾಮೇತಿಗಳು 20:22

ನೀನು--ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಕರ್ತನನ್ನು ನಿರೀಕ್ಷಿಸು; ಆಗ ಆತನು ನಿನ್ನನ್ನು ರಕ್ಷಿಸುವನು.

ಸಾಮೇತಿಗಳು 25:8

ನಿನ್ನ ನೆರೆಯವನು ನಿನ್ನನ್ನು ಅವಮಾನಕ್ಕೆ ಗುರಿಮಾಡಿದಾಗ ಕಡೆಯಲ್ಲಿ ಏನು ಮಾಡಬೇಕೆಂಬದು ನೀನು ತಿಳಿಯ ದಂತೆ ದುಡುಕಿನಿಂದ ಕಲಹಮಾಡುವದಕ್ಕಾಗಿ ಹೋಗ ಬೇಡ.

ರೋಮಾಪುರದವರಿಗೆ 12:19

ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.

ಯಾಕೋಬ 1:19

ಆದದರಿಂದ ನನ್ನ ಪ್ರಿಯ ಸಹೋದರರೇ, ಪ್ರತಿ ಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತನಾಡುವದರಲ್ಲಿ ಮತ್ತು ಕೋಪಿಸುವದರಲ್ಲಿ ನಿಧಾನವಾಗಿಯೂ ಇರಲಿ.

Interlinear

Choose Theme