ಯಾವನಾದರೂ ತನ್ನ ಶತ್ರು ವನ್ನು ಹಿಡಿದುಕೊಂಡರೆ ಅವನನ್ನು ಸುರಕ್ಷಿತವಾಗಿ ಬಿಟ್ಟುಬಿಡುವನೋ? ಆದದರಿಂದ ಈ ಹೊತ್ತು ನೀನು ನನಗೆ ಮಾಡಿದ್ದಕ್ಕೆ ಬದಲಾಗಿ ದೇವರು ನಿನಗೆ ಒಳ್ಳೇ ದನ್ನು ಮಾಡಲಿ.
Cross references
ಅವನು ತನ್ನ ತಾಯಿಗೆ--ನಿನ್ನ ಬಳಿಯಿಂದ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯು ತೆಗೆಯಲ್ಪಟ್ಟಾಗ ನೀನು ಆ ಬೆಳ್ಳಿಯನ್ನು ಕುರಿತು ಶಪಿಸಿ ನನ್ನ ಕಿವಿಗಳಲ್ಲಿ ಮಾತನಾಡಿದಿಯಲ್ಲಾ? ಇಗೋ, ಆ ಬೆಳ್ಳಿಯು ನನ್ನ ಬಳಿಯಲ್ಲಿ ಅದೆ; ನಾನು ಅದನ್ನು ತಕ್ಕೊಂಡೆನು ಅಂದನು. ಅದಕ್ಕೆ ಅವನ ತಾಯಿ--ನನ್ನ ಮಗನೇ, ನೀನು ಕರ್ತನಿಂದ ಆಶೀರ್ವದಿಸಲ್ಪಡುವಿ ಅಂದಳು.
ಆಗ ಸೌಲನು--ನೀವು ನನ್ನ ಮೇಲೆ ಕನಿಕರಪಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ.
ಆಗ ಸೌಲನು ದಾವೀದನಿಗೆ--ನನ್ನ ಮಗನಾದ ದಾವೀದನೇ, ನೀನು ಆಶೀರ್ವದಿಸಲ್ಪ ಡುವಿ; ನೀನು ಮಹತ್ಕಾರ್ಯಗಳನ್ನು ಮಾಡುವಿ, ಗೆದ್ದೇ ಗೆಲ್ಲುವಿ ಅಂದನು. ಹಾಗೆಯೇ ದಾವೀದನು ತನ್ನ ದಾರಿಹಿಡಿದು ಹೋದನು; ಸೌಲನು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.
ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು. ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲು ಕೊಟ್ಟನು.
ನಿನ್ನ ಶತ್ರು ಹಸಿದಿದ್ದರೆ ತಿನ್ನುವ ದಕ್ಕೆ ಅವನಿಗೆ ರೊಟ್ಟಿ ಕೊಡು; ಅವನು ಬಾಯಾರಿದ್ದರೆ ಕುಡಿಯುವದಕ್ಕೆ ನೀರು ಕೊಡು.