Home Bibles 1 ಸಮುವೇಲ 24:1 · ಕನ್ನಡ ಬೈಬಲ್
1 ಸಮುವೇಲ 24:1 · ಕನ್ನಡ ಬೈಬಲ್

ಸೌಲನು ಫಿಲಿಷ್ಟಿಯರನ್ನು ಹಿಂದಟ್ಟಿ ತಿರಿಗಿ ಬಂದಾಗ ಇಗೋ, ದಾವೀದನು ಏಂಗೆ ದಿಯ ಅರಣ್ಯದಲ್ಲಿ ಇದ್ದಾನೆಂದು ಅವನಿಗೆ ತಿಳಿಸಲ್ಪಟ್ಟಿತು.

Cross references

ಯೆಹೋಶುವ 15:62

ನಿಬ್ಷಾನ್‌, ಉಪ್ಪಿನಪಟ್ಟಣವು, ಏಂಗೆದೀ ಎಂಬ ಆರು ಪಟ್ಟಣಗಳು; ಮತ್ತು ಅವು ಗಳ ಗ್ರಾಮಗಳು.ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೂದನ ಮಕ್ಕಳು ಹೊರಡಿಸಿ ಬಿಡುವದಕ್ಕಾಗಲಿಲ್ಲ. ಆದದರಿಂದ ಈ ದಿವಸದ ವರೆಗೂ ಯೆಬೂಸಿಯರು ಯೂದನ ಮಕ್ಕಳ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.

1 ಸಮುವೇಲ 23:19

ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದುದಾವೀದನು ನಮ್ಮ ಪಕ್ಷವಾಗಿಯೇ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯ ದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದಾನಲ್ಲವೇ?

1 ಸಮುವೇಲ 23:28

ಸೌಲನು ದಾವೀದನನ್ನು ಹಿಂದಟ್ಟುವದನ್ನು ಬಿಟ್ಟು ಫಿಲಿಷ್ಟಿಯ ರಿಗೆ ಎದುರಾಗಿ ಹೋದನು. ಆದಕಾರಣ ಆ ಸ್ಥಳಕ್ಕೆ ಶಿಲಾಹಮಹ್ಲೆಕೋತ್‌ ಎಂದು ಹೆಸರಿಟ್ಟರು.ದಾವೀದನು ಆ ಸ್ಥಳವನ್ನು ಬಿಟ್ಟುಹೋಗಿ ಏಂಗೆದಿ ಯಲ್ಲಿರುವ ಬಲವಾದ ಗವಿಗಳಲ್ಲಿ ವಾಸಿಸಿದನು.

ಸಾಮೇತಿಗಳು 25:5

ಅರಸನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ಸಿಂಹಾಸನವು ನೀತಿಯಲ್ಲಿ ಸ್ಥಿರವಾಗುವದು.

ಸಾಮೇತಿಗಳು 29:12

ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ.

ಯೆಹೆಜ್ಕೇಲ 22:9

ನಿನ್ನಲ್ಲಿ ರಕ್ತಚೆಲ್ಲುವ ಹಾಗೆ ಚಾಡಿ ಹೇಳುವ ಜನ ಇದ್ದಾರೆ; ಬೆಟ್ಟಗಳ ಮೇಲೆ ತಿನ್ನುವವರಿದ್ದಾರೆ; ದುರಾ ಚಾರಿಗಳು ನಿನ್ನ ಮಧ್ಯದಲ್ಲಿದ್ದಾರೆ.

ಹೊಶೇಯ 7:3

ಅವರು ತಮ್ಮ ಕೆಟ್ಟತನದಿಂದ ಅರಸನನ್ನೂ ಸುಳ್ಳುಗ ಳಿಂದ ಪ್ರಧಾನರನ್ನೂ ಸಂತೋಷಪಡಿಸುತ್ತಾರೆ.

Interlinear

Choose Theme