Home Bibles ☰ Books 1 ಸಮುವೇಲ 23:6 · ಕನ್ನಡ ಬೈಬಲ್
1 ಸಮುವೇಲ 23:6 · ಕನ್ನಡ ಬೈಬಲ್

ಆದರೆ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯಾಲಾದಲ್ಲಿ ಇರುವ ದಾವೀದನ ಬಳಿಗೆ ಓಡಿಬಂದಾಗ ಅವನ ಕೈಯಲ್ಲಿ ಎಫೋದು ಇತ್ತು.

Cross references

ನಿರ್ಗಮಕಾಂಡ 28:6

ಎಫೋದನ್ನು ಬಂಗಾರದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಕುಶಲ ಕಲೆಯಿಂದಲೂ ಮಾಡಬೇಕು.

ನಿರ್ಗಮಕಾಂಡ 28:30

ನ್ಯಾಯದ ಎದೆಪದಕದಲ್ಲಿ ಊರೀಮ್‌ ತುವ್ಮೆಾಮ್‌ ಗಳನ್ನು ಇಡಬೇಕು. ಆರೋನನು ಕರ್ತನ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಕರ್ತನ ಮುಂದೆ ಯಾವಾಗಲೂ ಇಸ್ರಾಯೇಲ್‌ ಮಕ್ಕಳ ನ್ಯಾಯವನ್ನು ತನ್ನ ಹೃದಯದ ಮೇಲೆ ಹೊರಬೇಕು.

1 ಸಮುವೇಲ 14:3

ಆಗ ಏಲಿಯ ಮಗನಾಗಿರುವ ಫೀನೆ ಹಾಸನ ಮಗನಾದ ಈಕಾಬೋದನ ಸಹೋದರನಾದ ಅಹೀಟೂಬನ ಮಗನಾದ ಅಹೀಯನು ಶೀಲೋವಿ ನಲ್ಲಿ ಎಫೋದನ್ನು ಧರಿಸಿಕೊಂಡು ಕರ್ತನ ಯಾಜಕ ನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.

1 ಸಮುವೇಲ 14:18

ಆಗ ಸೌಲನು ಅಹೀಯನಿಗೆ -- ನೀನು ದೇವರ ಮಂಜೂಷವನ್ನು ತಕ್ಕೊಂಡು ಬಾ ಅಂದನು. ಯಾಕಂದರೆ ದೇವರ ಮಂಜೂಷವು ಆ ಕಾಲದಲ್ಲಿ ಇಸ್ರಾಯೇಲ್‌ ಮಕ್ಕಳ ಬಳಿಯಲ್ಲಿತ್ತು.

1 ಸಮುವೇಲ 14:36

ಸೌಲನು ಜನರಿಗೆ--ನಾವು ಈ ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿಹೋಗಿ ಉದಯಕಾಲದ ವರೆಗೆ ಅವರನ್ನು ಸುಲುಕೊಂಡು ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು ಅಂದನು. ಅದಕ್ಕೆ ಜನರು--ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವದನ್ನೆಲ್ಲಾ ಮಾಡು ಅಂದರು. ಆಗ ಯಾಜಕನು--ದೇವರ ಸನ್ನಿಧಿಗೆ ಹೋಗೋಣ ಅಂದನು.

1 ಸಮುವೇಲ 22:20

ಆದರೆ ಅಹೀಟೂಬನ ಮಗನಾಗಿರುವ ಅಹೀಮೆ ಲೆಕನ ಮಕ್ಕಳಲ್ಲಿ ಒಬ್ಬನಾದ ಎಬ್ಯಾತಾರನು ತಪ್ಪಿಸಿ ಕೊಂಡು ದಾವೀದನ ಬಳಿಗೆ ಓಡಿಹೋದನು.

Interlinear

Choose Theme