Home Bibles 1 ಸಮುವೇಲ 22:14 · ಕನ್ನಡ ಬೈಬಲ್
1 ಸಮುವೇಲ 22:14 · ಕನ್ನಡ ಬೈಬಲ್

ಅಹೀಮೆಲೆಕನು ಅರಸನಿಗೆ ಪ್ರತ್ಯುತ್ತರವಾಗಿ--ನಿನ್ನ ಎಲ್ಲಾ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾವನಿ ದ್ದಾನೆ? ಅವನು ಅರಸನಿಗೆ ಅಳಿಯನೂ ನಿನ್ನ ಆಜ್ಞೆಗಳ ಹಾಗೆ ಮಾಡಿಕೊಂಡು ಬರುವವನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ.

Cross references

1 ಸಮುವೇಲ 17:25

ಇಸ್ರಾಯೇಲ್‌ ಮನು ಷ್ಯರು--ಏರಿ ಬಂದ ಈ ಮನುಷ್ಯನನ್ನು ನೋಡಿ ದಿರೋ? ಇಸ್ರಾಯೇಲನ್ನು ಹೀಯಾಳಿಸಲು ಏರಿ ಬಂದಿದ್ದಾನಲ್ಲಾ. ಯಾವನು ಇವನನ್ನು ಕೊಂದುಬಿಡು ವನೋ ಅವನನ್ನು ಅರಸನು ಬಹಳ ಐಶ್ವರ್ಯ ವಂತನಾಗ ಮಾಡಿ ಅವನಿಗೆ ತನ್ನ ಮಗಳನ್ನು ಕೊಟ್ಟು ಅವನ ತಂದೆಯ ಮನೆಯನ್ನು ಇಸ್ರಾಯೇಲ್ಯರಲ್ಲಿ ಸರ್ವ ಮಾನ್ಯವನ್ನು ಕೊಡುವನು ಅಂದರು.

1 ಸಮುವೇಲ 18:13

ಆದದರಿಂದ ಸೌಲನು ಅವನನ್ನು ತನ್ನ ಬಳಿಯಿಂದ ಹೊರಡಿಸಿಬಿಟ್ಟು ಸಾವಿರ ಜನಕ್ಕೆ ಪ್ರಧಾನನನ್ನಾಗಿ ಮಾಡಿದನು. ಹಾಗೆಯೇ ಅವನು ಜನರ ಮುಂದೆ ಹೊರಟು ಹೋಗುತ್ತಾ ಬರುತ್ತಾ ಇದ್ದನು.

1 ಸಮುವೇಲ 18:27

ಆದದರಿಂದ ನೇಮಿಸಿದ ದಿವಸಗಳು ಈಡೇರುವದಕ್ಕಿಂತ ಮುಂಚೆ ಅವನು ಎದ್ದು ತನ್ನ ಜನರನ್ನು ಕರಕೊಂಡು ಹೋಗಿ ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಕೊಂದು ಅವರ ಮುಂದೊಗ ಲುಗಳನ್ನು ತಂದು ತಾನು ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಪೂರ್ಣವಾಗಿ ಒಪ್ಪಿಸಿದನು. ಆಗ ಸೌಲನು ತನ್ನ ಕುಮಾರ್ತೆಯಾದ ವಿಾಕಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.

1 ಸಮುವೇಲ 19:4

ಹಾಗೆಯೇ ಯೋನಾತಾನನು ತನ್ನ ತಂದೆಯಾದ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೇದನ್ನು ಮಾತನಾಡಿ ಅವನಿಗೆ--ಅರಸನು ತನ್ನ ಸೇವಕನಾದ ದಾವೀದನಿಗೆ ವಿರೋಧವಾಗಿ ಪಾಪಮಾಡದೆ ಇರಲಿ, ಅವನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ; ಅವನ ಕ್ರಿಯೆಗಳು ನಿನಗೆ ಬಹಳ ಉತ್ತಮವಾಗಿವೆ;

1 ಸಮುವೇಲ 19:5

ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡುಕೊಂಡು ಫಿಲಿಷ್ಟಿಯನನ್ನು ಕೊಂದನು. ಕರ್ತನು ಎಲ್ಲಾ ಇಸ್ರಾಯೇಲಿಗೋಸ್ಕರ ದೊಡ್ಡ ರಕ್ಷಣೆ ಯನ್ನುಂಟು ಮಾಡಿದನು. ನೀನೂ ನೋಡಿ ಸಂತೋಷ ಪಟ್ಟೆ; ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರಪರಾಧಿಯ ರಕ್ತಕ್ಕೆ ವಿರೋಧವಾಗಿ ಪಾಪವನ್ನು ಮಾಡುವದು ಯಾಕೆ ಅಂದನು.

1 ಸಮುವೇಲ 20:32

ಅದಕ್ಕೆ ಯೋನಾತಾನನು ತನ್ನ ತಂದೆಯಾದ ಸೌಲನಿಗೆ ಪ್ರತ್ಯು ತ್ತರವಾಗಿ--ಅವನನ್ನು ಯಾಕೆ ಕೊಲೆ ಮಾಡಬೇಕು? ಅವನು ಏನು ಮಾಡಿದನು ಅಂದನು.

1 ಸಮುವೇಲ 21:2

ದಾವೀದನು ಯಾಜಕನಾದ ಅಹೀಮೆಲೆಕನಿಗೆ--ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿ--ನಾನು ಕಳುಹಿಸಿದ ಕಾರ್ಯವು ನಿನಗೆ ಆಜ್ಞಾಪಿಸಿದ್ದು ಇಂಥಾದ್ದೆಂದು ಒಬ್ಬರಿಗೂ ತಿಳಿಯ ಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ.

1 ಸಮುವೇಲ 22:13

ಸೌಲನು ಅವನಿಗೆ--ನೀನೂ ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋ ಧವಾಗಿ ಏಳುವ ಹಾಗೆ ನೀನು ಅವನಿಗೆ ರೊಟ್ಟಿಯನ್ನೂ ಕತ್ತಿಯನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು ಅಂದನು.

1 ಸಮುವೇಲ 24:11

ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.

1 ಸಮುವೇಲ 26:23

ಆದರೆ ಕರ್ತನು ಪ್ರತಿಯೊ ಬ್ಬನಿಗೆ ಅವನ ನೀತಿಗೂ ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಕರ್ತನು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು. ಆದರೆ ನಾನು ಕರ್ತನ ಅಭಿಷಿಕ್ತನ ಮೇಲೆ ನನ್ನ ಕೈಚಾಚಲು ಮನಸ್ಸಿ ಲ್ಲದೆ ಇದ್ದೆನು.

2 ಸಮುವೇಲ 22:23

ಆತನ ನ್ಯಾಯಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನಿಯಮ ಗಳನ್ನು ನನ್ನಿಂದ ಹೋಗಲಿಲ್ಲ.

ಸಾಮೇತಿಗಳು 24:11

ಮರಣಕ್ಕೆ ಸೆಳೆಯ ಲ್ಪಟ್ಟವನನ್ನು ಬಿಡಿಸುವದಕ್ಕೂ ವಧಿಸಲ್ಪಡುವದಕ್ಕೆ ಸಿದ್ಧವಾದವರನ್ನು ನೀನು ರಕ್ಷಿಸಲೂ ಹಿಂದೆಗೆದರೆ

ಸಾಮೇತಿಗಳು 31:8

ಮೂಕರಿಗಾಗಿಯೂ ನಾಶವಾಗುವದಕ್ಕೆ ನೇಮಿಸಲ್ಪಟ್ಟ ವರೆಲ್ಲರಿಗಾಗಿಯೂ ನಿನ್ನ ಬಾಯನ್ನು ತೆರೆ.

Interlinear

Choose Theme