Home Bibles 1 ಸಮುವೇಲ 21:8 · ಕನ್ನಡ ಬೈಬಲ್
1 ಸಮುವೇಲ 21:8 · ಕನ್ನಡ ಬೈಬಲ್

ಆಗ ದಾವೀದ ನು ಅಹೀಮೆಲೆಕನಿಗೆ--ನಿನ್ನ ಕೈಯಲ್ಲಿ ಈಟಿಯಾದರೂ ಕತ್ತಿಯಾದರೂ ಇಲ್ಲವೋ? ಯಾಕಂದರೆ ಅರಸನ ಕಾರ್ಯವು ಅವಸರವಾದದ್ದರಿಂದ ನಾನು ನನ್ನ ಕತ್ತಿ ಯನ್ನಾದರೂ ಆಯುಧಗಳನ್ನಾದರೂ ತಕ್ಕೊಂಡು ಬರಲಿಲ್ಲ ಅಂದನು.

Cross references

1 ಸಮುವೇಲ 22:9

ಆಗ ಸೌಲನ ಸೇವಕರಿಗೆ ಯಜಮಾನನಾಗಿದ್ದ ಎದೋಮ್ಯನಾದ ದೋಯೇಗನು ಪ್ರತ್ಯುತ್ತರವಾಗಿ--ಇಷಯನ ಮಗನು ನೋಬದ ಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ನಾನು ನೋಡಿದೆನು.

1 ಸಮುವೇಲ 22:22

ಆಗ ದಾವೀದನು ಎಬ್ಯಾತಾರನಿಗೆ--ಎದೋಮ್ಯನಾದ ದೋಯೇಗನು ಅಲ್ಲಿ ಇದ್ದದರಿಂದ ಅವನು ಸೌಲನಿಗೆ ನಿಶ್ಚಯವಾಗಿ ತಿಳಿಸುವನೆಂದು ನಾನು ಆ ಹೊತ್ತು ತಿಳಿದಿದ್ದೆನು. ನಿನ್ನ ತಂದೆಯ ಮನೆಯವರೆಲ್ಲರ ಪ್ರಾಣಹತ್ಯಕ್ಕೆ ಕಾರಣನಾದವನು ನಾನೇ.ನನ್ನ ಬಳಿಯಲ್ಲಿ ಇರು; ಭಯಪಡಬೇಡ; ಯಾಕಂದರೆ ನನ್ನ ಪ್ರಾಣವನ್ನು ತೆಗೆಯಬೇಕೆಂದಿರು ವವನೇ ನಿನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾನೆ; ಆದರೆ ನೀನು ನನ್ನ ಸಂಗಡ ಸುರಕ್ಷಿತನಾಗಿರುವಿ ಅಂದನು.

ಎಸ್ತೇರ್ 8:14

ಅಂಚೆಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಓಡಿಸಲ್ಪಟ್ಟ ಕಾರಣ ಹೇಸರ ಕತ್ತೆಗಳ ಮೇಲೆಯೂ ವೇಗವಾದ ಒಂಟೆಗಳ ಮೇಲೆಯೂ ಹೊರಟರು. ಈ ಆಜ್ಞೆಯು ಶೂಷನಿನ ಅರಮನೆಯಲ್ಲಿ ಕೊಡಲ್ಪಟ್ಟಿತು.

ಲೂಕ 10:4

ಹವ್ಮೆಾಣಿಯನ್ನಾಗಲೀ ಚೀಲವನ್ನಾಗಲೀ ಕೆರಗಳನ್ನಾಗಲೀ ತಕ್ಕೊಳ್ಳಬೇಡಿರಿ; ಮತ್ತು ದಾರಿಯಲ್ಲಿ ಯಾರನ್ನೂ ವಂದಿಸಬೇಡಿರಿ.

Interlinear

Choose Theme