Home Bibles ☰ Books 1 ಸಮುವೇಲ 20:13 · ಕನ್ನಡ ಬೈಬಲ್
1 ಸಮುವೇಲ 20:13 · ಕನ್ನಡ ಬೈಬಲ್

ಆದರೆ ನಿನಗೆ ಕೇಡುಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ ಅದನ್ನು ನಿನಗೆ ತಿಳಿಸಿ ನೀನು ಸಮಾಧಾನ ದಿಂದ ಹೋಗುವ ಹಾಗೆ ನಿನ್ನನ್ನು ಕಳುಹಿಸುವೆನು.

Cross references

ಯೆಹೋಶುವ 1:5

ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ.

ರೂತ 1:17

ನೀನು ಎಲ್ಲಿ ಸಾಯುತ್ತೀಯೋ ಅಲ್ಲಿಯೇ ನಾನು ಸತ್ತುಹೂಣಲ್ಪಡುವೆನು. ಮರಣವು ಮಾತ್ರ ನಮ್ಮನ್ನು ಅಗಲಿಸದ ಹೊರತು ನಾನು ಅಗಲಿದರೆ ಕರ್ತನು ನನಗೆ ಬೇಕಾದದ್ದನ್ನು ಮಾಡಲಿ ಅಂದಳು.

1 ಸಮುವೇಲ 3:17

ಅದಕ್ಕವನು--ಇಗೋ, ಇದ್ದೇನೆ ಅಂದನು. ಏಲಿ ಯು ಅವನಿಗೆ--ಕರ್ತನು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಕರ್ತನು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವದನ್ನಾದರೂ ನನಗೆ ಮರೆಮಾಡಿದರೆ ದೇವರು ನಿನಗೆ ಅದಕ್ಕಿಂತ ಅಧಿಕವಾಗಿ ಮಾಡಲಿ ಅಂದನು.

1 ಸಮುವೇಲ 10:7

ಈ ಗುರುತು ಗಳೆಲ್ಲಾ ನಿನಗೆ ಸಂಭವಿಸಿದಾಗ ದೇವರು ನಿನ್ನ ಸಂಗಡ ಇರುವದರಿಂದ ನೀನು ಆ ವೇಳೆಯಲ್ಲಿ ನಿನಗೆ ಅನು ಕೂಲವಾದದ್ದನ್ನು ಮಾಡು.

1 ಸಮುವೇಲ 11:6

ಸೌಲನು ಈ ಮಾತು ಗಳನ್ನು ಕೇಳಿದಾಗ ದೇವರ ಆತ್ಮನು ಅವನ ಮೇಲೆ ಬಂದನು; ಅವನು ಬಹು ಕೋಪೋದ್ರೇಕಗೊಂಡವ ನಾಗಿ

1 ಸಮುವೇಲ 14:47

ಹೀಗೆ ಸೌಲನು ಇಸ್ರಾಯೇಲಿನ ಮೇಲೆ ದೊರೆ ತನ ತಕ್ಕೊಂಡು ಸುತ್ತಲಿರುವ ತನ್ನ ಸಮಸ್ತ ಶತ್ರುಗ ಳಾದ ಮೋವಾಬ್ಯರ ಮೇಲೆಯೂ ಅಮ್ಮೋನನ ಮಕ್ಕಳ ಮೇಲೆಯೂ ಎದೋಮ್ಯರ ಮೇಲೆಯೂ ಚೋಬದ ಅರಸುಗಳ ಮೇಲೆಯೂ ಫಿಲಿಷ್ಟಿಯರ ಮೇಲೆಯೂ ಯುದ್ಧಮಾಡಿದನು. ಯಾರ ಮೇಲೆ ತಿರುಗಿದನೋ ಅವರನ್ನು ಪೀಡಿಸಿದನು.

1 ಸಮುವೇಲ 17:37

ಇದಲ್ಲದೆ ದಾವೀದನು--ನನ್ನನ್ನು ಸಿಂಹದ ಕೈಗೂ ಕರಡಿಯ ಕೈಗೂ ತಪ್ಪಿಸಿ ಬಿಟ್ಟ ಕರ್ತನು ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವನು ಅಂದನು. ಆಗ ಸೌಲನು ದಾವೀದ ನಿಗೆ--ನೀನು ಹೋಗು; ಕರ್ತನು ನಿನ್ನ ಸಂಗಡ ಇರಲಿ ಅಂದನು.

1 ಸಮುವೇಲ 18:12

ಸೌಲನು ದಾವೀದನಿಗೆ ಭಯಪಟ್ಟನು; ಕರ್ತನು ಅವನ ಸಂಗಡ ಇದ್ದನು. ಕರ್ತನು ಸೌಲನ ಕಡೆಯಿಂದ ಹೊರಟು ಹೋಗಿದ್ದನು;

1 ಸಮುವೇಲ 25:22

ಅವನಿಗೆ ಇರುವವ ರೆಲ್ಲರಲ್ಲಿ ಉದಯವಾಗುವವರೆಗೆ ನಾನು ಒಬ್ಬ ಗಂಡ ಸನ್ನು ಉಳಿಸಿದರೆ ದೇವರು ದಾವೀದನ ಶತ್ರುಗಳಿಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ ಅಂದನು.

2 ಸಮುವೇಲ 3:35

ಇನ್ನೂ ಹೊತ್ತಿರು ವಾಗಲೇ ಜನರೆಲ್ಲರು ಬಂದು-- ಊಟಮಾಡು ಎಂದು ದಾವೀದನಿಗೆ ಹೇಳಿದಾಗ ದಾವೀದನು--ಸೂರ್ಯನು ಅಸ್ತಮಿಸುವದಕ್ಕಿಂತ ಮುಂಚೆ ನಾನು ರೊಟ್ಟಿಯನ್ನಾ ದರೂ ಮತ್ತೇನಾದರೂ ರುಚಿ ನೋಡಿದರೆ ದೇವರು ನನಗೆ ಹಾಗೇ ಮಾಡಲಿ, ಅಧಿಕವಾಗಿಯೂ ಮಾಡ ಲೆಂದು ಆಣೆಇಟ್ಟು ಹೇಳಿದನು.

2 ಸಮುವೇಲ 7:15

ಆದರೆ ನಾನು ನಿನ್ನ ಮುಂದೆ ತೊರೆದುಬಿಟ್ಟ ಸೌಲ ನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ.

2 ಸಮುವೇಲ 19:13

ಇದಲ್ಲದೆ ನೀವು ಅಮಾಸನಿಗೆ--ನೀನು ನನ್ನ ಎಲುಬೂ ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ ದೇವರು ನನಗೆ ಹಾಗೆಯೇ ಮಾಡಲಿ ಎಂದು ಹೇಳಿರಿ ಅಂದನು.

Interlinear

Choose Theme