Home Bibles 1 ಸಮುವೇಲ 2:4 · ಕನ್ನಡ ಬೈಬಲ್
1 ಸಮುವೇಲ 2:4 · ಕನ್ನಡ ಬೈಬಲ್

ಪರಾಕ್ರಮ ಶಾಲಿಗಳ ಬಿಲ್ಲುಗಳು ಮುರಿಯಲ್ಪಟ್ಟವು; ಎಡವಿದವರು ಬಲದಿಂದ ನಡುಕಟ್ಟಲ್ಪಟ್ಟಿದ್ದಾರೆ.

Cross references

ಕೀರ್ತನೆಗಳು 37:15

ಅವರ ಕತ್ತಿಯು ಅವರ ಹೃದಯವನ್ನೇ ಇರಿಯುವದು; ಅವರ ಬಿಲ್ಲುಗಳು ಮುರಿದುಹೋಗುವವು.

ಕೀರ್ತನೆಗಳು 37:17

ದುಷ್ಟರ ತೋಳುಗಳು ಮುರಿದು ಹೋಗು ವವು; ಆದರೆ ನೀತಿವಂತರನ್ನು ಕರ್ತನು ಉದ್ಧಾರ ಮಾಡುತ್ತಾನೆ.

ಕೀರ್ತನೆಗಳು 46:9

ಯುದ್ಧಗಳನ್ನು ಭೂಮಿಯ ಅಂತ್ಯದ ವರೆಗೆ ನಿಲ್ಲಿಸಿ ಬಿಲ್ಲನ್ನು ಮುರಿದು ಭಲ್ಲೆಯನ್ನು ಕಡಿದು ತುಂಡುಮಾಡಿ ರಥಗಳನ್ನು ಬೆಂಕಿಯಿಂದ ಸುಡುತ್ತಾನೆ.

ಕೀರ್ತನೆಗಳು 46:10

ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.

ಕೀರ್ತನೆಗಳು 76:3

ಅಲ್ಲಿಯೇ ಬಿಲ್ಲಿನ ಬಾಣಗಳನ್ನೂ ಗುರಾಣಿಯನ್ನೂ ಕತ್ತಿಯನ್ನೂ ಯುದ್ಧವನ್ನೂ ಮುರಿದುಬಿಟ್ಟನು. ಸೆಲಾ.

ಯೆಶಾಯ 10:4

ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವದೇ ಇವರ ಗತಿ. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.

ಯೆಶಾಯ 40:29

ಆತನು ದಣಿದವನಿಗೆ ಶಕ್ತಿಯನ್ನೂ ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ.

ಯೆರೆಮಿಯ 37:10

ಪಟ್ಟಣದಲ್ಲಿ ಇನ್ನು ಮೇಲೆ ರೊಟ್ಟಿ ಇಲ್ಲ ಅಂದನು. ಆಗ ಅರಸನು ಕೂಷ್ಯನಾದ ಎಬೆದ್ಮೆಲೆಕನಿಗೆ ನೀನು ಇಲ್ಲಿಂದ ಮೂವತ್ತು ಮಂದಿ ಮನುಷ್ಯರನ್ನು ಕರಕೊಂಡು ಹೋಗಿ ಪ್ರವಾದಿಯಾದ ಯೆರೆವಿಾಯನನ್ನು ಅವನು ಸಾಯುವದಕ್ಕಿಂತ ಮುಂಚೆ ಕುಣಿಯೊಳಗಿಂದ ಎತ್ತೆಂದು ಆಜ್ಞಾಪಿಸಿದನು.

2 ಕೊರಿಂಥದವರಿಗೆ 4:9

ಹಿಂಸೆ ಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟ ವರಾಗಿದ್ದರೂ ನಾಶವಾದವರಲ್ಲ.

2 ಕೊರಿಂಥದವರಿಗೆ 12:9

ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು.

ಎಫೆಸದವರಿಗೆ 6:14

ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ಎದೆಕವಚವನ್ನು ಧರಿಸಿಕೊಳ್ಳಿರಿ.ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.

ಫಿಲಿಪ್ಪಿಯವರಿಗೆ 4:13

ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು.

ಹೆಬ್ರಿಯರಿಗೆ 11:34

ಬೆಂಕಿಯ ಬಲವನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿರ್ಬಲರಾಗಿದ್ದು ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಪರರ ದಂಡುಗಳನ್ನು ಓಡಿಸಿಬಿಟ್ಟರು.

Interlinear

Choose Theme