ನನ್ನ ಯಜ್ಞ ವೇದಿಯ ಬಳಿಯಿಂದ ನಾನು ಕಡಿದು ಬಿಡದ ಮನು ಷ್ಯನು ನಿನ್ನ ಕಣ್ಣುಗಳನ್ನು ಕಳೆದು ನಿನ್ನ ಹೃದಯವನ್ನು ವೇದನೆಪಡಿಸುವದಕ್ಕೆ ಇರುವನು; ನಿನ್ನ ಮನೆಯವ ರೆಲ್ಲಾ ಯೌವನಸ್ಥರಾದಾಗಲೇ ಸಾಯುವರು.
Cross references
ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು.
ಸೌಲನು ಕರ್ತನ ಯಾಜಕರನ್ನು ಕೊಂದುಹಾಕಿದ ವರ್ತಮಾನವನ್ನು ಎಬ್ಯಾತಾರನು ದಾವೀದನಿಗೆ ತಿಳಿಸಿ ದನು.
ಅಬ್ಷಾಲೋಮನ ತರು ವಾಯ ಅವನ ತಾಯಿ ಅವನನ್ನು ಹೆತ್ತಳು. ಅವನು ಚೆರೂಯಳ ಮಗನಾದ ಯೋವಾಬನ ಸಂಗಡಲೂ ಯಾಜಕನಾದ ಎಬ್ಯಾತಾರನ ಸಂಗಡಲೂ ಮಾತನಾ ಡಿದನು; ಅವರು ಅದೋನೀಯನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾಗಿದ್ದರು.
ಇದಲ್ಲದೆ ಅವನು ಬಹಳ ಎತ್ತುಗಳನ್ನೂ ಕೊಬ್ಬಿದ ಪಶುಗಳನ್ನೂ ಕುರಿಗಳನ್ನೂ ಕೊಲ್ಲಿಸಿ ಅರಸನ ಮಕ್ಕಳೆಲ್ಲರನ್ನೂ ಯಾಜಕನಾದ ಎಬ್ಯಾತಾರನನ್ನೂ ಸೈನ್ಯಾಧಿಪತಿಯಾದ ಯೋವಾಬನನ್ನೂ ಕರೆದಿದ್ದಾನೆ.
ಯಾಜಕನಾದ ಎಬ್ಯಾತಾರನಿಗೆ ಅರಸನು-- ನೀನು ಅಣತೋತಿಗೆ ನಿನ್ನ ಹೊಲಗಳಿಗೆ ಹೋಗು; ಯಾಕಂದರೆ ನೀನು ಸಾವಿಗೆ ಪಾತ್ರನಾಗಿದ್ದೀ; ಆದರೆ ನೀನು ಕರ್ತನಾದ ಯೆಹೋವನ ಮಂಜೂಷವನ್ನು ನನ್ನ ತಂದೆಯಾದ ದಾವೀದನ ಮುಂದೆ ಹೊತ್ತದ್ದ ರಿಂದಲೂ ನನ್ನ ತಂದೆಯ ಸಮಸ್ತ ಶ್ರಮೆಗಳಲ್ಲಿ ನೀನು ಶ್ರಮೆಪಟ್ಟದ್ದರಿಂದಲೂ ನಾನು ಈಗ ನಿನ್ನನ್ನು ಸಾಯಿ ಸುವದಿಲ್ಲ ಅಂದನು.
ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ