ಇದಲ್ಲದೆ ಸೌಲನ ಮಗಳಾದ ವಿಾಕಲಳು ದಾವೀದನನ್ನು ಪ್ರೀತಿಮಾಡಿದಳು. ಅದು ಸೌಲನಿಗೆ ತಿಳಿಸಲ್ಪಟ್ಟಾಗ ಆ ಕಾರ್ಯ ಅವನಿಗೆ ಯುಕ್ತವಾಗಿ ತೋರಿತು.
Cross references
ಸೌಲನ ಕುಮಾರರ ಹೆಸರುಗಳು ಯೋನಾ ತಾನ್ ಇಷ್ವಿ ಮಲ್ಕೀಷೂವ ಎಂಬಿವುಗಳು; ಹಿರಿಯ ವಳಾದ ಮೇರಾಬ್, ಚಿಕ್ಕವಳಾದ ವಿಾಕಲ್ ಎಂಬ ಇಬ್ಬರು ಕುಮಾರ್ತೆಯರು ಇದ್ದರು.
ಆದರೆ ಕರ್ತನು ದಾವೀದನ ಸಂಗಡ ಇದ್ದಾನೆಂದೂ ತನ್ನ ಮಗಳಾದ ವಿಾಕಲಳು ಅವನನ್ನು ಪ್ರೀತಿಮಾಡಿದ್ದಾಳೆಂದೂ ಸೌಲನು ತಿಳುಕೊಂಡನು;
ಆದರೆ ಕರ್ತನ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ ಸೌಲನ ಮಗಳಾದ ವಿಾಕಲಳು ಕಿಟಿಕಿಯಿಂದ ನೋಡಿ ಅರಸನಾದ ದಾವೀ ದನು ಕರ್ತನ ಮುಂದೆ ಜಿಗಿಯುತ್ತಾ ನಾಟ್ಯವಾಡು ವದನ್ನು ಕಂಡು ತನ್ನ ಹೃದಯದಲ್ಲಿ ಅವನನ್ನು ತಿರಸ್ಕ ರಿಸಿದಳು.
ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವದಕ್ಕೆ ಹೋದಾಗ ಸೌಲನ ಮಗಳಾದ ವಿಾಕಲಳು ದಾವೀದನಿಗೆ ಎದುರಾಗಿ ಬಂದು--ನಿಷ್ಪ್ರ ಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ ಹಾಗೆಯೇ ಈಹೊತ್ತು ತನ್ನ ಸೇವಕರ ದಾಸಿಗಳ ಕಣ್ಣುಮುಂದೆ ತನ್ನ ವಸ್ತ್ರ ಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಪಟ್ಟನು ಅಂದಳು.