ನೀವು ಕರ್ತನ ಮಾತಿಗೆ ವಿರೋಧವಾಗಿ ತಿರುಗಿ ಬೀಳದೆ ಕರ್ತನಿಗೆ ಭಯಪಟ್ಟು ಆತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾದರೆ ನೀವೂ ನಿಮ್ಮ ಮೇಲೆ ಆಳುವ ಅರಸನೂ ನಿಮ್ಮ ದೇವರಾದ ಕರ್ತನನ್ನು ತಪ್ಪದೆ ಹಿಂಬಾಲಿಸುವಿರಿ.
Cross references
ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಅಂಥ ಪ್ರವಾದಿಯನ್ನಾದರೂ ಕನಸು ಕಾಣುವವನ ನ್ನಾದರೂ ಕೊಂದುಹಾಕಬೇಕು; ಐಗುಪ್ತದೇಶದೊಳ ಗಿಂದ ನಿನ್ನನ್ನು ಹೊರಗೆ ಬರಮಾಡಿ, ದಾಸತ್ವದ ಮನೆ ಯೊಳಗಿಂದ ನಿನ್ನನ್ನು ವಿಮೋಚಿಸಿದ ನಿನ್ನ ಕರ್ತನಾದ ದೇವರಿಂದ ತಿರುಗುವಂತೆ ಮತ್ತು ನಿನ್ನ ದೇವರಾದ ಕರ್ತನು ನಿನಗೆ ನಡೆಯಲು ಆಜ್ಞಾಪಿಸಿದ ಮಾರ್ಗ ದಿಂದ ನಿನ್ನನ್ನು ದೂಡುವಂತೆ ಮಾತನಾಡಿದ್ದಾನೆ. ಹೀಗೆ ನೀನು ಕೆಟ್ಟದ್ದನ್ನು ನಿನ್ನ ಮಧ್ಯದಿಂದ ತೆಗೆದುಹಾಕಬೇಕು.
ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಎಚ್ಚರಿಕೆಯಿಂದ ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಂಡರೆ ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಎಲ್ಲಾ ಜನಾಂಗಗಳಿಗಿಂತ ಉನ್ನತದಲ್ಲಿರಿಸುವನು.
ಆದದರಿಂದ ಈಗ ಕರ್ತನಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಆತನನ್ನು ಸೇವಿಸಿರಿ. ನಿಮ್ಮ ತಂದೆಗಳು ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಸೇವಿ ಸಿದ ದೇವರುಗಳನ್ನು ತೊರೆದುಬಿಟ್ಟು ಕರ್ತನನ್ನೇ ನೀವು ಸೇವಿಸಿರಿ.
ಕರ್ತನನ್ನು ಬಿಟ್ಟು ಅನ್ಯ ದೇವರುಗಳನ್ನು ಸೇವಿಸಿದರೆ ಒಳ್ಳೇದನ್ನು ಮಾಡದೆ ಆತನು ನಿಮಗೆ ಕೇಡುಮಾಡಿ ನಿಮ್ಮನ್ನು ದಹಿಸಿಬಿಡುವನು ಎಂದು ಹೇಳಿದನು.
ಆಸನೇ, ಯೆಹೂದ ಬೆನ್ಯಾವಿಾನನ ಸಮಸ್ತರೇ, ನನ್ನ ಮಾತನ್ನು ಕೇಳಿರಿ. ನೀವು ಕರ್ತನ ಸಂಗಡ ಇರುವ ವರೆಗೂ ಆತನು ನಿಮ್ಮ ಸಂಗಡ ಇರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು;
ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.
ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ.
ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
ಯಾರು ಒಳ್ಳೆಯದನ್ನು ಮಾಡುವದರಲ್ಲಿ ತಾಳ್ಮೆಯಿಂದಿದ್ದು ಮಹಿಮೆ ಮಾನ ಮತ್ತು ನಿರ್ಲಯತ್ವವನ್ನು ಹುಡುಕು ತ್ತಾರೋ ಅವರಿಗೆ ನಿತ್ಯಜೀವವನ್ನೂ