ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.
Cross references
ಆದರೆ ಓ ಕರ್ತನೇ, ನೀನು ಎಂದೆಂದಿಗೂ ಇರುವವನಾಗಿದ್ದೀ, ನಿನ್ನ ಸ್ಮರಣೆಯು ತಲತಲಾಂತ ರಕ್ಕೂ ಅದೆ.
ಅವು ನಾಶವಾಗುವವು; ಆದರೆ ನೀನು ಸ್ಥಿರ ವಾಗಿರುತ್ತೀ; ಹೌದು, ಅವುಗಳೆಲ್ಲಾ ವಸ್ತ್ರದ ಹಾಗೆ ಜೀರ್ಣವಾಗುವವು; ಉಡುಪಿನ ಹಾಗೆ ಅವುಗ ಳನ್ನು ಬದಲಾಯಿಸುವಿ; ಆಗ ಅವು ಬದಲಾಗುವವು.
ಓ ಕರ್ತನೇ, ಎಂದೆಂದಿಗೂ ನಿನ್ನ ವಾಕ್ಯವು ಪರಲೋಕದಲ್ಲಿ ಸ್ಥಿರವಾಗಿದೆ.
ಹುಲ್ಲು ಒಣಗಿಹೋಗುವದು ಹೂವು ಬಾಡಿಹೋಗುವದು. ಆದರೆ ನಮ್ಮ ದೇವರ ವಾಕ್ಯವು ಸದಾಕಾಲ ನಿಲ್ಲುವದು ಎಂದು ಉತ್ತರವಾಯಿತು.
ಆಕಾಶವೂ ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ನ್ಯಾಯಪ್ರಮಾಣದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
ನ್ಯಾಯಪ್ರಮಾಣದ ಒಂದು ಗುಡುಸಾದರೂ ಬಿದ್ದು ಹೋಗುವದಕ್ಕಿಂತ ಆಕಾಶವೂ ಭೂಮಿಯೂ ಅಳಿದು ಹೋಗುವದು ಸುಲಭ.
ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು.
ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).
ಯಾಕಂದರೆ ದೇವರ ಜ್ಞಾನದಲ್ಲಿ ಲೋಕವು(ತನ್ನ) ಜ್ಞಾನದ ಮೂಲಕ ದೇವರನ್ನು ತಿಳಿದುಕೊಳ್ಳಲಿಲ್ಲವಾದ ದರಿಂದ ಪ್ರಸಂಗದ ಹುಚ್ಚುತನದಿಂದಲೇ ನಂಬುವ ವರನ್ನು ರಕ್ಷಿಸುವದು ದೇವರಿಗೆ ಇಷ್ಟವಾಗಿತ್ತು.
ಶಿಲುಬೆಗೆ ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯ ಕೂಡದೆಂದು ನಾನು ನಿಮ್ಮಲ್ಲಿ ತಿರ್ಮಾನಿಸಿ ಕೊಂಡೆನು.
ಇದಲ್ಲದೆ ಸಹೋದರರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನು ತಿಳಿಯಪಡಿ ಸುತ್ತೇನೆ; ನೀವು ಅದನ್ನು ಅಂಗೀಕರಿಸಿದಿರಿ ಮತ್ತು ಅದರಲ್ಲಿ ನಿಂತಿದ್ದೀರಿ.
ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು.
ಕ್ರಿಸ್ತನ ಶೋಧಿಸಲ ಶಕ್ಯವಾದ ಐಶ್ವರ್ಯದ ವಿಷಯವಾಗಿ ಅನ್ಯಜನರಿಗೆ ನಾನು ಸಾರುವ ಹಾಗೆ ಪರಿಶುದ್ಧರೊಳಗೆ ಅತ್ಯಲ್ಪ ನಾದ ನನಗೆ ಅನುಗ್ರಹಿಸೋಣವಾಯಿತು.
ತನ್ನ ವಾಕ್ಯ ಸಾರೋಣದ ಮೂಲಕ ತಕ್ಕ ಕಾಲದಲ್ಲಿ ಪ್ರಕಟಿಸಿ ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರ ಆ ಸಾರೋಣ ವನ್ನು ಒಪ್ಪಿಸಿದನು.
ಪರಲೋಕದಿಂದ ಕಳುಹಿಸಲ್ಪಟ್ಟ ಪರಿಶುದ್ಧಾತ್ಮನಿಂದ ನಿಮಗೆ ಸುವಾರ್ತೆಯನ್ನು ಸಾರಿದವರು ಈಗ ನಿಮಗೆ ತಿಳಿಸುವಂಥ ಮತ್ತು ದೂತರು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುವಂಥ ಕಾರ್ಯಗಳಲ್ಲಿ ತಮಗೋಸ್ಕರವಲ್ಲ ನಮಗೋಸ್ಕರವೇ ಸೇವೆ ಮಾಡಿದರೆಂದು ಅವರಿಗೆ ಪ್ರಕಟವಾಯಿತು.
ೀವು ತಿರಿಗಿ ಹುಟ್ಟಿದವರಾಗಿದ್ದೀರಲ್ಲಾ; ಆ ಜನ್ಮವು ನಾಶವಾಗುವ ಬೀಜದಿಂದ ಉಂಟಾದದ್ದಲ್ಲ. ನಾಶವಾಗದ ಬೀಜ ದಿಂದಲೇ ಉಂಟಾದದ್ದು ಅದು ದೇವರ ಸದಾ ಜೀವವುಳ್ಳ ವಾಕ್ಯದ ಮೂಲಕವಾಗಿ ಉಂಟಾಯಿತು.
ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ಬೆಳೆಯುವ ಹಾಗೆ ವಾಕ್ಯವೆಂಬ ಶುದ್ಧ ಹಾಲನ್ನು ಬಯಸಿರಿ.
ನಮಗೂ ಬಹು ದೃಢವಾದ ಪ್ರವಾದನೆಯ ವಾಕ್ಯವು ಇರುತ್ತದೆ; ಆ ದಿನವು ಬೆಳಗುವವರೆಗೆ ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವ ತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪ ವೆಂದೆಣಿಸಿ ಅದಕ್ಕೆ ನೀವು ಲಕ್ಷ್ಯಕೊಡುವದು ಒಳ್ಳೇದು.
ಆದಿಯಿಂದ ಇದ್ದದ್ದನ್ನೂ ಆ ಜೀವ ವಾಕ್ಯದ ವಿಷಯವಾಗಿ ಕೇಳಿದ್ದನ್ನೂ ಕಣ್ಣಾರೆ ಕಂಡು ನೋಡಿದ್ದನ್ನೂ ನಾವು ಕೈಯಿಂದ ಮುಟ್ಟಿದ್ದೇವೆ.
ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಇರ ಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಸಿದ್ಧಿ ಪಡಿಸುತ್ತೇವೆ. ನಿಜವಾಗಿಯೂ ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರು ವಂಥದ್ದು.