Home Bibles 1 ಅರಸುಗಳು 9:16 · ಕನ್ನಡ ಬೈಬಲ್
1 ಅರಸುಗಳು 9:16 · ಕನ್ನಡ ಬೈಬಲ್

ಐಗುಪ್ತದ ಅರಸನಾದ ಫರೋಹನು ಹೊರಟುಹೋಗಿ ಗೆಜೆರನ್ನು ತೆಗೆದುಕೊಂಡು ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು ಪಟ್ಟಣದಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಕೊಂದು ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಬಹುಮಾನವಾಗಿ ಕೊಟ್ಟನು.

Cross references

ಯೆಹೋಶುವ 16:10

ಗೆಜೆರಿನಲ್ಲಿ ವಾಸ ವಾಗಿದ್ದ ಕಾನಾನ್ಯರನ್ನು ಅವರು ಹೊರಡಿಸಿ ಬಿಡದೆ ಹೋದದ್ದರಿಂದ ಕಾನಾನ್ಯರು ಈ ವರೆಗೂ ಅವರಲ್ಲಿ ವಾಸವಾಗಿದ್ದು ಕಪ್ಪಕೊಡುವ ಸೇವಕರಾಗಿದ್ದಾರೆ.

1 ಅರಸುಗಳು 3:1

ಸೊಲೊಮೋನನು ಐಗುಪ್ತದ ಅರಸ ನಾದ ಫರೋಹನ ಸಂಗಡ ಬಂಧುತ್ವ ಮಾಡಿ ಫರೋಹನ ಮಗಳನ್ನು ತಕ್ಕೊಂಡನು. ಅವನು ತನ್ನ ಮನೆಯನ್ನೂ ಕರ್ತನ ಆಲಯವನ್ನೂ ಯೆರೂಸ ಲೇಮಿಗೆ ಸುತ್ತಲೂ ಗೋಡೆಯನ್ನೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.

1 ಅರಸುಗಳು 7:8

ತಾನು ವಾಸವಾಗಿರುವ ತನ್ನ ಮನೆಯಲ್ಲಿ ದ್ವಾರಾಂಗ ಳದ ಒಳಭಾಗದಲ್ಲಿ ಈ ಕೆಲಸದ ಹಾಗೆ ಮಾಡಲ್ಪಟ್ಟ ಬೇರೆ ಒಂದು ಅಂಗಳ ಇತ್ತು. ಇದಲ್ಲದೆ ಸೊಲೊ ಮೋನನು ತಾನು ತಕ್ಕೊಂಡ ಫರೋಹನ ಮಗಳಿಗೂ ಈ ದ್ವಾರಾಂಗಳದ ಹಾಗೆ ಒಂದು ಮನೆಯನ್ನು ಮಾಡಿ ದನು.

1 ಅರಸುಗಳು 9:24

ಆದರೆ ಫರೋಹನ ಮಗಳು ದಾವೀದನ ಪಟ್ಟಣ ದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.

Interlinear

Choose Theme