Home Bibles 1 ಅರಸುಗಳು 8:54 · ಕನ್ನಡ ಬೈಬಲ್
1 ಅರಸುಗಳು 8:54 · ಕನ್ನಡ ಬೈಬಲ್

ಆಕಾಶದ ಕಡೆಗೆ ಕೈಯೆತ್ತಿ ಕರ್ತನ ಯಜ್ಞವೇದಿಯ ಮುಂದೆ ಮೊಣಕಾಲೂರಿದ್ದ ಸೊಲೊಮೋ ನನು ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡಿ ಮುಗಿಸಿದ ನಂತರ ಎದ್ದು ನಿಂತನು.

Cross references

1 ಅರಸುಗಳು 8:22

ಆಗ ಸೊಲೊಮೋನನು ಇಸ್ರಾಯೇಲಿನ ಸಭೆ ಯವರ ಸಮ್ಮುಖದಲ್ಲಿ ದೇವರ ಬಲಿಪೀಠದ ಮುಂದೆ ನಿಂತು ಆಕಾಶದ ಕಡೆಗೆ ತನ್ನ ಕೈಗಳನ್ನು ಎತ್ತಿ ಹೇಳಿದ್ದೇ ನಂದರೆ--

2 ದಿನವೃತ್ತಾಂತ 6:12

ಆಗ ಇಸ್ರಾಯೇಲಿನ ಸಭೆಯ ಸಮ್ಮುಖದಲ್ಲಿ ದೇವರ ಬಲಿಪೀಠದ ಮುಂದೆ ಅವನು ನಿಂತು ತನ್ನ ಕೈಗಳನ್ನು ಚಾಚಿದನು.

2 ದಿನವೃತ್ತಾಂತ 7:1

ಸೊಲೊಮೋನನು ಪ್ರಾರ್ಥಿಸಿ ತೀರಿಸಿದಾಗ ಬೆಂಕಿಯು ಆಕಾಶದಿಂದ ಇಳಿದು ದಹನ ಬಲಿಗಳನ್ನೆಲ್ಲಾ ದಹಿಸಿಬಿಟ್ಟಿತು.

ಕೀರ್ತನೆಗಳು 95:6

ಬನ್ನಿರಿ, ನಮ್ಮನ್ನು ಉಂಟುಮಾಡಿದ ಕರ್ತನ ಮುಂದೆ ಮೊಣಕಾಲು ಊರೋಣ ಆತನಿಗೆ ಎರಗಿ ಆರಾಧಿಸೋಣ.

ಲೂಕ 11:1

ಇದಾದ ಮೇಲೆ ಆತನು ಒಂದಾನೊಂದು ಸ್ಥಳದಲ್ಲಿ ಪ್ರಾರ್ಥನೆ ಮಾಡಿ ಮುಗಿಸಿದ ಮೇಲೆ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ--ಕರ್ತನೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆಯೇ ನಮಗೂ ಪ್ರಾರ್ಥನೆ ಮಾಡುವದಕ್ಕೆ ಕಲಿಸು ಎಂದು ಕೇಳಲು

ಲೂಕ 22:41

ಆತನು ಅವ ರಿಂದ ಒಂದು ಕಲ್ಲೆಸೆಯುವಷ್ಟು ದೂರಹೋಗಿ ಮೊಣ ಕಾಲೂರಿ--

ಲೂಕ 22:45

ಆತನು ಪ್ರಾರ್ಥನೆ ಮಾಡಿ ಎದ್ದಮೇಲೆ ತನ್ನ ಶಿಷ್ಯರ ಕಡೆಗೆ ಬಂದು ಅವರು ದುಃಖದ ನಿಮಿತ್ತವಾಗಿ ನಿದ್ರೆ ಮಾಡುತ್ತಿರುವದನ್ನು ಕಂಡು ಅವರಿಗೆ--

ಅಪೋಸ್ತಲರ ಕೃತ್ಯಗಳು 20:36

ಈ ಮಾತುಗಳನ್ನು ಅವನು ಹೇಳಿದ ಮೇಲೆ ಮೊಣಕಾಲೂರಿಕೊಂಡು ಅವರೆಲ್ಲರ ಸಂಗಡ ಪ್ರಾರ್ಥನೆ ಮಾಡಿದನು.

ಅಪೋಸ್ತಲರ ಕೃತ್ಯಗಳು 21:5

ಆ ದಿವಸಗಳು ಕಳೆದ ಮೇಲೆ ನಾವು ಹೊರಟು ಹೋಗುತ್ತಿರುವಾಗ ಅವರು ತಮ್ಮ ಹೆಂಡತಿಯರು ಮಕ್ಕಳ ಸಹಿತವಾಗಿ ನಮ್ಮನ್ನು ಪಟ್ಟಣದ ಹೊರಗೆ ಸಾಗಕಳುಹಿಸಿದರು; ನಾವು ಸಮುದ್ರದ ತೀರದಲ್ಲಿ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.

Interlinear

Choose Theme