Home Bibles 1 ಅರಸುಗಳು 8:41 · ಕನ್ನಡ ಬೈಬಲ್
1 ಅರಸುಗಳು 8:41 · ಕನ್ನಡ ಬೈಬಲ್

ಇದಲ್ಲದೆ ನಿನ್ನ ಜನರಾದ ಇಸ್ರಾಯೇಲಿನವ ನಲ್ಲದೆ ನಿನ್ನ ಹೆಸರಿನ ನಿಮಿತ್ತ ದೂರ ದೇಶದಿಂದ ಬಂದ ಪರದೇಶಸ್ಥನನ್ನು ಕುರಿತು ಏನಂದರೆ

Cross references

ನಿರ್ಗಮಕಾಂಡ 18:8

ಇಸ್ರಾಯೇಲ್ಯರಿಗೋಸ್ಕರ ಕರ್ತನು ಫರೋಹ ನಿಗೂ ಐಗುಪ್ತ್ಯರಿಗೂ ಮಾಡಿದ್ದೆಲ್ಲವನ್ನೂ ಅವರಿಗೆ ಒದಗಿದ ಎಲ್ಲಾ ಸಂಕಟವನ್ನೂ ಕರ್ತನು ತಮ್ಮನ್ನು ಹೇಗೆ ತಪ್ಪಿಸಿದನೆಂಬದನ್ನೂ ಮೋಶೆಯು ತನ್ನ ಮಾವ ನಿಗೆ ತಿಳಿಯಪಡಿಸಿದನು.

ಅಂಕೆಗಳ ಪುಸ್ತಕ 15:16

ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯನಿಗೂ ಒಂದೇ ಪ್ರಮಾಣವೂ ಒಂದೇ ನ್ಯಾಯವೂ ಇರಬೇಕು ಎಂದು ಹೇಳಿದನು.

ಅಂಕೆಗಳ ಪುಸ್ತಕ 15:29

ಇಸ್ರಾಯೇಲ್‌ ಮಕ್ಕಳಲ್ಲಿ ಹುಟ್ಟಿದವ ರಿಗೂ ಅವರಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ನಿಮ್ಮೆಲ್ಲರಿಗೂ ತಿಳಿಯದೆ ಪಾಪಮಾಡಿದವನಿಗೂ ಒಂದೇ ಆಜ್ಞೆ ಇರಬೇಕು.

ರೂತ 1:16

ಅದಕ್ಕೆ ರೂತಳು ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ನೀನು ಎಲ್ಲಿ ಹೋಗುವಿಯೋ ನಾನು ಅಲ್ಲಿಗೆ ಬರುವೆನು; ನೀನು ಎಲ್ಲಿ ಇಳುಕೊಳ್ಳುವಿಯೋ ನಾನು ಅಲ್ಲಿ ಇಳು ಕೊಳ್ಳುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.

ರೂತ 2:11

ಆಗ ಬೋವಜನು ಅವಳಿಗೆ ಪ್ರತ್ಯುತ್ತರವಾಗಿ ನಿನ್ನ ಗಂಡನು ಸತ್ತ ತರುವಾಯ ನೀನು ನಿನ್ನ ಅತ್ತೆಗೋಸ್ಕರ ಮಾಡಿ ದ್ದೆಲ್ಲವೂ ನಿನ್ನ ತಂದೆತಾಯಿಗಳನ್ನೂ ಹುಟ್ಟಿದ ದೇಶವನ್ನೂ ಎಂದಿಗೂ ಅರಿಯದ ಜನರ ಬಳಿಗೆ ಬಂದದ್ದೂ ನನಗೆ ಚೆನ್ನಾಗಿ ತಿಳಿಸಲ್ಪಟ್ಟಿದೆ.

1 ಅರಸುಗಳು 10:1

ಶೆಬದ ರಾಣಿಯು ಕರ್ತನ ನಾಮವನ್ನು ಕುರಿತೂ ಸೊಲೊಮೋನನ ಕೀರ್ತಿ ಯನ್ನೂ ಕೇಳಿದಾಗ ಒಗಟುಗಳಿಂದ ಅವನನ್ನು ಪರೀಕ್ಷಿ ಸಲು ಬಂದಳು.

2 ಅರಸುಗಳು 5:1

ಅರಾಮ್ಯರ ಅರಸನ ಸೈನ್ಯಾಧಿಪತಿಯಾದ ನಾಮಾನನು ತನ್ನ ಯಜಮಾನನ ಮುಂದೆ ದೊಡ್ಡವನಾಗಿಯೂ ಘನವುಳ್ಳವನಾಗಿಯೂ ಇದ್ದನು. ಕರ್ತನು ಅವನಿಂದ ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದನು; ಇದಲ್ಲದೆ ಅವನು ಪರಾಕ್ರಮ ಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾ ಗಿದ್ದನು.

2 ಅರಸುಗಳು 5:16

ಆದರೆ ಅವನುನಾನು ಯಾವಾತನ ಮುಂದೆ ನಿಲ್ಲುತ್ತೇನೋ ಆ ಕರ್ತನ ಜೀವದಾಣೆ, ನಾನು ಏನೂ ತಕ್ಕೊಳ್ಳುವದಿಲ್ಲ ಅಂದ ನು. ಅವನು ತಕ್ಕೊಳ್ಳಬೇಕೆಂದು ನಾಮಾನನು ಬಲವಂತ ಮಾಡಿದರೂ ಬೇಡ ಅಂದನು.

2 ದಿನವೃತ್ತಾಂತ 6:32

ನಿನ್ನ ದೊಡ್ಡ ಹೆಸರು, ನಿನ್ನ ಬಲವಾದ ಕೈ, ಚಾಚಿದ ನಿನ್ನ ತೋಳು ಇವುಗಳ ನಿಮಿತ್ತ ನಿನ್ನ ಜನ ವಾದ ಇಸ್ರಾಯೇಲಿನವನಲ್ಲದೆ ದೂರದೇಶದಿಂದ ಬಂದ ಪರದೇಶಸ್ಥರನ್ನು ಕುರಿತು ಏನಂದರೆ,

ಯೆಶಾಯ 56:3

ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.

ಯೆಶಾಯ 56:6

ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್‌ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ

ಯೆಶಾಯ 56:7

ನನ್ನ ಪರಿಶುದ್ಧ ಪರ್ವತಕ್ಕೆ ತರುತ್ತೇನೆ; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವ ನ್ನುಂಟು ಮಾಡುವೆನು; ನನ್ನ ಯಜ್ಞವೇದಿಯ ಮೇಲೆ ಅವರು ಅರ್ಪಿಸುವ ದಹನಬಲಿಗಳೂ, ಯಜ್ಞಗಳೂ ನನಗೆ ಒಪ್ಪಿಗೆಯಾಗುವವು; ಯಾಕಂದರೆ ನನ್ನ ಆಲ ಯವು ಸಮಸ್ತ ಜನಗಳಿಗೆ ಪ್ರಾರ್ಥನಾಲಯವು ಎಂದು ಕರೆಯಲ್ಪಡುವದು.

ಯೆಶಾಯ 60:1

ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು.

ಯೆರೆಮಿಯ 3:17

ಆ ಕಾಲದಲ್ಲಿ ಯೆರೂಸಲೇಮು ಕರ್ತನ ಸಿಂಹಾಸನವೆಂದು ಕರೆಯಲ್ಪಡುವದು; ಜನಾಂಗಗ ಳೆಲ್ಲಾ ಅದರ ಬಳಿಗೆ ಕರ್ತನ ಹೆಸರಿನ ಬಳಿಗೆ ಮತ್ತು ಯೆರೂಸಲೇಮಿನೊಳಗೆ ಕೂಡಿಸಲ್ಪಡುವವು; ಇನ್ನು ಮೇಲೆ ತಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳರು.

ಮತ್ತಾಯ 2:1

ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ, ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು --

ಮತ್ತಾಯ 8:5

ಇದಾದ ಮೇಲೆ ಯೇಸು ಕಪೆರ್ನೌಮಿನಲ್ಲಿ ಪ್ರವೇಶಿಸಿದಾಗ ಒಬ್ಬ ಶತಾಧಿಪತಿಯು ಆತನ ಬಳಿಗೆ ಬಂದು--

ಮತ್ತಾಯ 8:10

ಯೇಸು ಅದನ್ನು ಕೇಳಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿದ್ದವರಿಗೆ--ನಾನು ಇಂಥಾ ದೊಡ್ಡ ನಂಬಿಕೆಯನ್ನು ಕಾಣಲಿಲ್ಲ, ಇಸ್ರಾಯೇಲಿನಲ್ಲಿಯೂ ಕಾಣಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.

ಮತ್ತಾಯ 12:42

ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.

ಮತ್ತಾಯ 15:22

ಆಗ ಇಗೋ, ಕಾನಾನ್ಯಳಾದ ಒಬ್ಬ ಸ್ತ್ರೀಯು ಅದೇ ಪ್ರಾಂತ್ಯಗಳಿಂದ ಬಂದು ಆತನಿಗೆ--ಓ ಕರ್ತನೇ, ದಾವೀದನ ಕುಮಾ ರನೇ, ನನ್ನ ಮೇಲೆ ಕರುಣೆಯಿಡು; ನನ್ನ ಮಗಳು ದೆವ್ವದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ ಎಂದು ಕೂಗಿಕೊಂಡಳು.

ಲೂಕ 17:18

ದೇವ ರನ್ನು ಮಹಿಮೆಪಡಿಸುವದಕ್ಕೆ ಹಿಂದಿರುಗಿದವರಲ್ಲಿ ಈ ಅನ್ಯನ ಹೊರತು ಯಾರೂ ಕಾಣಿಸಲಿಲ್ಲ ಎಂದು ಹೇಳಿ

ಯೋಹಾನ 12:20

ಹಬ್ಬದಲ್ಲಿ ಆರಾಧಿಸುವದಕ್ಕೆ ಬಂದವರಲ್ಲಿ ಕೆಲ ವರು ಗ್ರೀಕರಿದ್ದರು.

ಅಪೋಸ್ತಲರ ಕೃತ್ಯಗಳು 8:27

ಅವನು ಎದ್ದು ಹೊರಟು ಹೋಗುತ್ತಿರುವಾಗ ಇಗೋ, ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾ ರಿಯೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದ ಐಥಿಯೋಪ್ಯದವನಾದ ಒಬ್ಬ ಕಂಚುಕಿಯು ಆರಾಧನೆಗೋಸ್ಕರ ಯೆರೂಸಲೇಮಿಗೆ ಬಂದು

ಅಪೋಸ್ತಲರ ಕೃತ್ಯಗಳು 10:1

ಕೈಸರೈಯದಲ್ಲಿ ಇತಾಲ್ಯದ ಪಟಾಲಮೆನಿಸಿ ಕೊಳ್ಳುವ ಒಂದು ಪಟಾಲಮಿನ ಶತಾ ಧಿಪತಿ ಯಾದ ಕೊರ್ನೇಲ್ಯನೆಂಬ ಒಬ್ಬ ಮನುಷ್ಯ ನಿದ್ದನು.

Interlinear

Choose Theme