1 ಅರಸುಗಳು 6:37 · ಕನ್ನಡ ಬೈಬಲ್
ನಾಲ್ಕನೇ ವರುಷದ ಜೀಪ್ ತಿಂಗಳಲ್ಲಿ ಕರ್ತನ ಆಲಯದ ಅಸ್ತಿವಾರವು ಹಾಕಲ್ಪಟ್ಟಿತು.ಹನ್ನೊಂದನೇ ವರುಷದ ಎಂಟನೇ ತಿಂಗಳಾದ ಬೂಲ್ ತಿಂಗಳಲ್ಲಿ ಆ ಮನೆಯು ಅದರ ಎಲ್ಲಾ ಭಾಗಗಳಲ್ಲಿಯೂ ಎಲ್ಲಾ ನ್ಯಾಯದ ಪ್ರಕಾರ ಕಟ್ಟಿ ತೀರಿಸಲ್ಪಟ್ಟಿತು. ಹೀಗೆ ಅವನು ಏಳು ವರುಷಗಳಲ್ಲಿ ಅದನ್ನು ಕಟ್ಟಿಸಿದನು.
Cross references
1 ಅರಸುಗಳು 6:1
ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದಿಂದ ಬಂದ ನಾನೂರ ಎಂಭತ್ತನೆಯ ವರುಷದಲ್ಲಿ ಇಸ್ರಾಯೇಲಿನ ಮೇಲೆ ಸೊಲೊಮೋ ನನ ಆಳಿಕೆಯ ನಾಲ್ಕನೇ ವರುಷದ ಎರಡನೇ ತಿಂಗಳಾದ ಜೀಪ್ ಎಂಬ ತಿಂಗಳಲ್ಲಿ ಅವನು ಕರ್ತನ ಮನೆಯನ್ನು ಕಟ್ಟಿಸಲು ಪ್ರಾರಂಭಿಸಿದನು.
1 ಅರಸುಗಳು 9:1
ಸೊಲೊಮೋನನು ಕರ್ತನ ಮಂದಿರ ವನ್ನೂ ಅರಮನೆಯನ್ನೂ ಕಟ್ಟಲು ಆಶೆ ಯಿಂದ ಇಚ್ಚೈಸಿದ್ದನ್ನೆಲ್ಲಾ ಕಟ್ಟಿಸಿ ತೀರಿಸಿದ ಮೇಲೆ ಏನಾಯಿತಂದರೆ,
2 ದಿನವೃತ್ತಾಂತ 3:2
ಅವನು ತನ್ನ ಆಳಿಕೆಯ ನಾಲ್ಕನೇ ವರುಷದ ಎರಡನೇ ತಿಂಗಳಿನ ಎರಡನೇ ದಿವಸದಲ್ಲಿ ಕಟ್ಟುವದಕ್ಕೆ ಆರಂಭಿಸಿದನು.
2 ದಿನವೃತ್ತಾಂತ 8:16
ಆದರೆ ಸೊಲೊಮೋನನ ಕೆಲಸವೆಲ್ಲಾ ಕರ್ತನ ಆಲಯದ ಅಸ್ತಿವಾರ ಹಾಕಿದ ದಿವಸದ ವರೆಗೂ ಅದನ್ನು ಕಟ್ಟಿಸಿ ತೀರಿಸುವ ಮಟ್ಟಿಗೂ ಸಿದ್ಧಮಾಡಲ್ಪಟ್ಟಿತು. ಹೀಗೆಯೇ ಕರ್ತನ ಆಲಯವು ಸಿದ್ಧವಾಯಿತು.