Home Bibles 1 ಅರಸುಗಳು 5:15 · ಕನ್ನಡ ಬೈಬಲ್
1 ಅರಸುಗಳು 5:15 · ಕನ್ನಡ ಬೈಬಲ್

ಇದಲ್ಲದೆ ಸೊಲೊಮೋನನಿಗೆ ಹೊರೆಹೊರುವ ವರು ಎಪ್ಪತ್ತು ಸಾವಿರವೂ ಬೆಟ್ಟಗಳಲ್ಲಿ ಕಲ್ಲುಕುಟಿಗರು ಎಂಭತ್ತು ಸಾವಿರವೂ ಇದ್ದರು.

Cross references

ಯೆಹೋಶುವ 19:29

ರಾಮಕ್ಕೆ ಹೋಗಿ ತೂರ್‌ ಎಂಬ ಬಲವಾದ ಪಟ್ಟಣದ ವರೆಗೂ ತಿರುಗಿ ಅಲ್ಲಿಂದ ಹೋಸಾಕ್ಕೆ ಹೊರಟು ಸಮುದ್ರದ ಬಳಿಯ ಅಕ್ಜೀಬಿನ ಮೇರೆಯ ಅಂಚಿಗೆ ಮುಗಿಯುವದು.

2 ಸಮುವೇಲ 5:11

ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು.

1 ಅರಸುಗಳು 9:20

ಇಸ್ರಾಯೇಲಿನ ಮಕ್ಕಳಲ್ಲದೆ ಅಮೋರ್ಯರು ಹಿತ್ತೀಯರು ಪೆರಿಜ್ಜೀಯರು ಹಿವ್ವೀಯರು ಯೆಬೂಸಿ ಯರು ಇವರಲ್ಲಿ ಉಳಿದ ಸಮಸ್ತ ಜನರೂ

1 ದಿನವೃತ್ತಾಂತ 14:1

ತೂರಿನ ಅರಸನಾದ ಹೀರಾಮನು ದಾವೀದನಿಗೆ ಮನೆಯನ್ನು ಕಟ್ಟುವ ನಿಮಿತ್ತ ದೇವದಾರು ಮರಗಳನ್ನೂ ಕಲ್ಲು ಕುಟಿಗರನ್ನೂ ಬಡಗಿ ಯರನ್ನೂ ಅವನ ಬಳಿಗೆ ಕಳುಹಿಸಿದನು.

2 ದಿನವೃತ್ತಾಂತ 2:1

ಆದರೆ ಸೊಲೊಮೋನನು ಕರ್ತನ ಹೆಸರಿಗೋಸ್ಕರ ಮನೆಯನ್ನೂ ತನ್ನ ರಾಜ್ಯ ಕ್ಕೋಸ್ಕರ ಮನೆಯನ್ನೂ ಕಟ್ಟಿಸುವದಕ್ಕೆ ತೀರ್ಮಾ ನಿಸಿಕೊಂಡನು;

2 ದಿನವೃತ್ತಾಂತ 2:2

ಆದದರಿಂದ ಸೊಲೊಮೋನನು ಎಪ್ಪತ್ತು ಸಾವಿರ ಹೊರೆಹೊರುವವರನ್ನೂ ಬೆಟ್ಟದಲ್ಲಿ ಎಂಭತ್ತು ಸಾವಿರ ಕಡಿಯುವವರನ್ನೂ ಈ ಕೆಲಸದವರ ಮೇಲ್ವಿಚಾರಕರಾಗಿರಲು ಮೂರು ಸಾವಿರದ ಆರು ನೂರು ಮಂದಿಯನ್ನೂ ಲೆಕ್ಕಿಸಿ ನೇಮಿಸಿದನು.

2 ದಿನವೃತ್ತಾಂತ 2:17

ಸೊಲೊ ಮೋನನು ಇಸ್ರಾಯೇಲ್‌ ದೇಶದಲ್ಲಿದ್ದ ಅನ್ಯದೇಶ ಸ್ಥರನ್ನು ಲೆಕ್ಕಿಸಿದನು; ತನ್ನ ತಂದೆಯಾದ ದಾವೀದನು ಅವರನ್ನು ಲೆಕ್ಕಿಸಿದ ತರುವಾಯ ತಾನೂ ಲೆಕ್ಕಿಸಿದನು; ಅವರು ಲಕ್ಷದ ಐವತ್ತಮೂರು ಸಾವಿರದ ಆರುನೂರು ಮಂದಿ ಕಂಡುಬಂದರು.ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಹೊರೆಹೊರುವದಕ್ಕೂ ಎಂಭತ್ತು ಸಾವಿರ ಮಂದಿಯನ್ನು ಬೆಟ್ಟದಲ್ಲಿ ಕಲ್ಲು ಕಡಿಯುವ ದಕ್ಕೂ ಮೂರು ಸಾವಿರದ ಆರು ನೂರು ಮಂದಿ ಯನ್ನು ಕೆಲಸದವರ ಮೇಲೆ ಮೇಲ್ವಿಚಾರಣೆಗಾಗಿಯೂ ಇರಿಸಿದನು.

2 ದಿನವೃತ್ತಾಂತ 8:7

ಸೊಲೊಮೋನನು ಇಸ್ರಾಯೇಲಿನ ಮಕ್ಕಳಲ್ಲದ ಹಿತ್ತಿಯರೂ ಅಮೋರಿಯರೂ ಪೆರಜೀಯರೂ ಹಿವ್ವಿಯರೂ ಯೆಬೂಸಿಯರೂ ಇವರಲ್ಲಿ ಉಳಿದ ಸಮಸ್ತ ಜನರೂ

ಎಜ್ರಾ 2:58

ನೆತನಿಮಿನವರೂ ಸೊಲೊಮೋನನ ಸೇವಕ ಮಕ್ಕಳೂ--ಮುನ್ನೂರ ತೊಂಭತ್ತೆರಡು ಮಂದಿಯು.

ನೆಹೆಮ್ಯ 7:57

ಸೊಲೋಮೋನನ ಸೇವಕರ ಮಕ್ಕಳು ಯಾರಂದರೆ--ಸೋಟೈಯ ಮಕ್ಕಳು, ಸಫೆರತಳು ಮಕ್ಕಳು, ಪೆರೀದನ ಮಕ್ಕಳು

ನೆಹೆಮ್ಯ 7:60

ಅಮೋನನ ಮಕ್ಕಳುನೆತಿನಿಯರೂ ಸೊಲೊಮೋನನ ಸೇವಕರ ಮಕ್ಕಳೂ ಕೂಡ ಮುನ್ನೂರ ತೊಂಭತ್ತೆರಡು ಮಂದಿಯು.

ಕೀರ್ತನೆಗಳು 45:13

ಅರಸನ ಮಗಳು ತನ್ನಲ್ಲಿ ಪೂರ್ಣ ಘನವುಳ್ಳವ ಳಾಗಿದ್ದಾಳೆ; ಅವಳ ವಸ್ತ್ರವು ಚಿನ್ನದಿಂದ ನೆಯಿದದೆ.

Interlinear

Choose Theme