Home Bibles 1 ಅರಸುಗಳು 18:27 · ಕನ್ನಡ ಬೈಬಲ್
1 ಅರಸುಗಳು 18:27 · ಕನ್ನಡ ಬೈಬಲ್

ಮಧ್ಯಾಹ್ನದಲ್ಲಿ ಎಲೀಯನು ಅವ ರನ್ನು ಗೇಲಿಮಾಡಿ ಅವರಿಗೆ--ದೊಡ್ಡ ಶಬ್ದದಿಂದ ಕೂಗಿರಿ, ಯಾಕಂದರೆ ಅವನು ಒಬ್ಬ ದೇವರು; ಇಲ್ಲವೆ ಮಾತನಾಡುತ್ತಿದ್ದಾನು; ಇಲ್ಲವೆ ಹಿಂದಟ್ಟುತ್ತಿದ್ದಾನು.; ಇಲ್ಲವೆ ಪ್ರಯಾಣದಲ್ಲಿದ್ದಾನು; ಇಲ್ಲವೆ ಅವನು ನಿದ್ರೆ ಮಾಡುತ್ತಿದ್ದಾನು; ಈಗ ಅವನು ಎಚ್ಚರಿಸಲ್ಪಡಬೇಕು ಅಂದನು.

Cross references

1 ಅರಸುಗಳು 22:15

ಅರಸನು ಅವನಿಗೆ--ವಿಾಕಾಯೆ ಹುವೇ, ನಾವು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆಹೋಗಬಹುದೋ ಹೋಗಬಾ ರದೋ ಅಂದನು. ಇವನು ಪ್ರತ್ಯುತ್ತರವಾಗಿ--ಹೋಗಿ ಸಾಫಲ್ಯ ಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.

2 ದಿನವೃತ್ತಾಂತ 25:8

ನೀನು ಹೋದರೆ ಹೋಗು ಅದನ್ನು ಮಾಡು; ಯುದ್ಧಕ್ಕೆ ಬಲಗೊಳ್ಳು. ದೇವರು ಶತ್ರುವಿನ ಮುಂದೆ ನಿನ್ನನ್ನು ಬೀಳಮಾಡುವನು; ಯಾಕಂದರೆ ಸಹಾಯ ಕೊಡುವದಕ್ಕೂ ಬೀಳಮಾಡುವದಕ್ಕೂ ದೇವರಿಗೆ ಶಕ್ತಿ ಉಂಟು ಅಂದನು.

ಕೀರ್ತನೆಗಳು 44:23

ಓ ಕರ್ತನೇ, ಎಚ್ಚರವಾಗು, ಯಾಕೆ ನಿದ್ರೆ ಮಾಡುತ್ತೀ? ಎದ್ದೇಳು; ಸದಾಕಾಲಕ್ಕೂ ನಮ್ಮನ್ನು ತಳ್ಳಿಬಿಡಬೇಡ.

ಕೀರ್ತನೆಗಳು 78:65

ಆಗ ಕರ್ತನು ನಿದ್ದೆಯಿಂದ ಎಚ್ಚತ್ತವನ ಹಾಗೆಯೂ ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆಯೂ ಎಚ್ಚತ್ತು,

ಕೀರ್ತನೆಗಳು 121:4

ಇಗೋ, ಇಸ್ರಾಯೇಲನ್ನು ಕಾಪಾಡುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ.

ಸಭಾಪ್ರಸಂಗಿ 11:9

ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.

ಯೆಶಾಯ 8:9

ಓ ಪ್ರಜೆಗಳೇ, ನೀವು ಕೂಡಿಕೊಳ್ಳಿರಿ; ನೀವು ಒಡೆದು ಚೂರುಚೂರಾಗುವಿರಿ; ಎಲ್ಲಾ ದೂರ ದೇಶದ ವರೇ, ಕಿವಿಗೊಡಿರಿ, ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ; ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ.

ಯೆಶಾಯ 41:23

ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ; ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದ ನ್ನಾಗಲಿ ಕೆಟ್ಟದ್ದನ್ನಾಗಲಿಮಾಡಿರಿ.

ಯೆಶಾಯ 44:15

ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು;

ಯೆಶಾಯ 51:9

ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?

ಯೆಹೆಜ್ಕೇಲ 20:39

ನಿಮ್ಮ ವಿಷಯ ವಾಗಿ ಓ ಇಸ್ರಾಯೇಲಿನ ಮನೆತನದವರೇ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ನನಗೆ ಕಿವಿಗೊಡದಿದ್ದರೆ ಹೋಗಿ ಇನ್ನು ಮೇಲೆಯೂ ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ; ಆದರೆ ನಿಮ್ಮ ದಾನಗ ಳಿಂದಲೂ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.

ಆಮೋಸ 4:4

ಬೇತೇಲಿಗೆ ಬಂದು ದ್ರೋಹಮಾಡಿರಿ, ಗಿಲ್ಗಾಲಿ ನಲ್ಲಿ ದ್ರೋಹಗಳನ್ನು ಮತ್ತಷ್ಟು ಮಾಡಿರಿ, ಪ್ರತಿ ಬೆಳಗಿನ ಜಾವದಲ್ಲಿ ನಿಮ್ಮ ಯಜ್ಞಗಳನ್ನು ತನ್ನಿರಿ; ಹತ್ತ ನೆಯ ಒಂದು ಪಾಲನ್ನು ಮೂರು ವರ್ಷವಾದ ಮೇಲೆ ತನ್ನಿರಿ.

ಮತ್ತಾಯ 26:45

ತರುವಾಯ ಆತನು ತನ್ನ ಶಿಷ್ಯರ ಬಳಿಗೆ ಬಂದು ಅವರಿಗೆ--ಈಗ ನಿದ್ದೆ ಮಾಡಿ ವಿಶ್ರಾಂತಿತಕ್ಕೊಳ್ಳಿರಿ; ಇಗೋ, ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹಿಡಿದು ಕೊಡಲ್ಪಡುವ ಸಮಯವು ಸವಿಾಪಿಸಿದೆ;

ಮಾರ್ಕ 4:38

ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ನಿದ್ರಿಸುತ್ತಿದ್ದನು. ಆಗ ಅವರು ಆತನನ್ನು ಎಬ್ಬಿಸಿ ಆತನಿಗೆ--ಒಡೆಯನೇ, ನಾವು ನಾಶವಾಗುತ್ತೇವೆಂದು ನಿನಗೆ ಚಿಂತೆಯಿಲ್ಲವೋ ಅಂದರು.

ಮಾರ್ಕ 7:9

ಆತನು ಅವರಿಗೆ--ನೀವು ನಿಮ್ಮ ಸಂಪ್ರ ದಾಯವನ್ನು ಕೈಕೊಳ್ಳುವಂತೆ ದೈವಾಜ್ಞೆಯನ್ನು ಸಂಪೂರ್ಣವಾಗಿ ಅಸಡ್ಡೆ ಮಾಡುತ್ತೀರಿ.

ಮಾರ್ಕ 14:41

ಆತನು ಮೂರನೆಯ ಸಾರಿ ಬಂದು ಅವರಿಗೆ-- ಈಗ ನಿದ್ರೆ ಮಾಡಿ ನಿಮ್ಮ ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ; ಇನ್ನು ಸಾಕು; ಗಳಿಗೆ ಬಂದಿದೆ; ಇಗೋ, ಮನುಷ್ಯ ಕುಮಾರನು ಪಾಪಿಗಳ ಕೈಗಳಿಗೆ ಹಿಡುಕೊಡಲ್ಪಡುತ್ತಾನೆ;

Interlinear

Choose Theme