Home Bibles 1 ಅರಸುಗಳು 18:1 · ಕನ್ನಡ ಬೈಬಲ್
1 ಅರಸುಗಳು 18:1 · ಕನ್ನಡ ಬೈಬಲ್

ಅನೇಕ ದಿವಸಗಳು ಹೋದ ತರುವಾಯ ಮೂರನೇ ವರುಷದಲ್ಲಿ ಏನಾಯಿತಂದರೆ, ಕರ್ತನ ವಾಕ್ಯವು ಎಲೀಯನಿಗೆ ಉಂಟಾಗಿ--ನೀನು ಹೋಗಿ ಅಹಾಬನಿಗೆ ನಿನ್ನನ್ನು ತೋರಿಸಿಕೋ. ಆಗ ನಾನು ಭೂಮಿಯ ಮೇಲೆ ಮಳೆಯನ್ನು ಕಳುಹಿಸುವೆನು ಅಂದನು.

Cross references

ಲೇವ್ಯಕಾಂಡ 26:4

ನಿಮಗೆ ಮಳೆಯನ್ನು ತಕ್ಕಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವದು. ಹೊಲದ ಮರಗಳು ಅವುಗಳ ಫಲವನ್ನು ಕೊಡುವವು.

ದ್ವಿತೀಯೋಪದೇಶಕಾಂಡ 28:12

ಕರ್ತನು ಆಕಾಶ ವೆಂಬ ತನ್ನ ಒಳ್ಳೆ ಉಗ್ರಾಣವನ್ನು ನಿನಗೆ ತೆರೆದು ನಿನ್ನ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು ನಿನ್ನ ಕೈಕೆಲಸವನ್ನೆಲ್ಲಾ ಆಶೀರ್ವದಿಸುವನು; ನೀನು ಸಾಲ ತಕ್ಕೊಳ್ಳದೆ ಬಹಳ ಜನಾಂಗಗಳಿಗೆ ಸಾಲ ಕೊಡುವಿ.

1 ಅರಸುಗಳು 17:1

ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.

1 ಅರಸುಗಳು 17:7

ಸ್ವಲ್ಪ ಕಾಲವಾದ ಮೇಲೆ ಏನಾಯಿ ತಂದರೆ, ದೇಶದಲ್ಲಿ ಮಳೆ ಇಲ್ಲದ್ದರಿಂದ ಆ ಹಳ್ಳವು ಬತ್ತಿಹೋಯಿತು.

1 ಅರಸುಗಳು 17:15

ಆಗ ಅವಳು ಹೋಗಿ ಎಲೀಯನ ಮಾತಿನ ಹಾಗೆಯೇ ಮಾಡಿ, ಅವಳೂ ಇವನೂ ಅವಳ ಮನೆಯವರೂ ಅನೇಕ ದಿವಸ ತಿಂದರು.

1 ಅರಸುಗಳು 18:2

ಆಗ ಎಲೀಯನು ಅಹಾಬನಿಗೆ ತನ್ನನ್ನು ತೋರಿಸಲು ಹೋದನು. ಆದರೆ ಸಮಾರ್ಯದಲ್ಲಿ ಬರ ಘೋರವಾಗಿತ್ತು.

1 ಅರಸುಗಳು 18:15

ಅದಕ್ಕೆ ಎಲೀಯನು--ಯಾವನ ಮುಂದೆ ನಾನು ನಿಲ್ಲುತ್ತೇನೋ, ಆ ಸೈನ್ಯಗಳ ಕರ್ತನ ಜೀವ ದಾಣೆ, ಇಂದು ನನ್ನನ್ನು ಅವನಿಗೆ ತೋರಿಸಿಕೊಳ್ಳುವೆನು ಅಂದನು.

ಕೀರ್ತನೆಗಳು 65:9

ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.

ಯೆಶಾಯ 5:6

ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.

ಯೆರೆಮಿಯ 10:13

ಓ ಯೆಹೂದವೇ, ನಿನ್ನ ಪಟ್ಟಣಗಳಷ್ಟು ನಿನ್ನ ದೇವರುಗಳು ಇದ್ದವು; ಯೆರೂಸಲೇಮಿಗೆ ಎಷ್ಟು ಬೀದಿಗಳೋ ಅಷ್ಟು ಬಲಿಪೀಠಗಳನ್ನು ನಾಚಿಕೆಗೆ ಅಂದರೆ ಅಷ್ಟು ಬಲಿ ಪೀಠಗಳನ್ನು ಬಾಳನಿಗೆ ಧೂಪವನ್ನರ್ಪಿಸುವದಕ್ಕೆ ಇಟ್ಟಿ ದ್ದೀರಿ.

ಯೋವೇಲ 2:23

ಹಾಗಾದರೆ ಚೀಯೋನಿನ ಮಕ್ಕಳೇ, ನಿಮ್ಮ ದೇವ ರಾದ ಕರ್ತನಲ್ಲಿ ಉಲ್ಲಾಸಿಸಿ, ಸಂತೋಷವಾಗಿರ್ರಿ; ನಿಮಗೆ ಮುಂಗಾರು ಮಳೆಯನ್ನು ಸರಿಯಾಗಿ ಕೊಡು ತ್ತಾನೆ; ಮುಂಗಾರು ಹಿಂಗಾರು ಮಳೆಗಳನ್ನು ಮುಂಚಿನ ಹಾಗೆ ನಿಮಗೆ ಸುರಿಸುತ್ತಾನೆ.

ಆಮೋಸ 4:7

ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ ಮಳೆಯನ್ನು ನಿಮ್ಮಿಂದ ನಾನು ಹಿಂತೆಗೆದಿದ್ದೇನೆ; ಒಂದು ಪಟ್ಟಣದ ಮೇಲೆ ಮಳೆ ಸುರಿಸಿ ಮತ್ತೊಂದು ಪಟ್ಟಣದ ಮೇಲೆ ಮಳೆ ಸುರಿಸದ ಹಾಗೆ ಮಾಡಿದೆನು; ಮಳೆ ಸುರಿಯದ ಭಾಗವು ಒಣಗಿ ಹೋಯಿತು.

ಲೂಕ 4:25

ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಎಲೀಯನ ದಿವಸಗಳಲ್ಲಿ ಮೂರು ವರುಷ ಆರು ತಿಂಗಳು ಆಕಾಶವು ಮುಚ್ಚಲ್ಪಟ್ಟು ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರೂ

ಯಾಕೋಬ 5:17

ಎಲೀಯನು ನಮ್ಮಂಥ ಸ್ವಭಾವವುಳ್ಳವ ನಾಗಿದ್ದನು; ಅವನು ಮಳೆ ಬರಬಾರದೆಂದು ಆಸಕ್ತಿ ಯಿಂದ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳ ವರೆಗೂ ಮಳೆ ಬೀಳಲಿಲ್ಲ.

ಪ್ರಕಟನೆ 11:2

ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು; ಯಾಕಂದರೆ ಅದು ಅನ್ಯ ಜನರಿಗೆ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಾಲ್ವತ್ತೆರಡು ತಿಂಗಳು ತುಳಿದಾಡುವರು.

ಪ್ರಕಟನೆ 11:6

ಅವರ ಪ್ರವಾದನೆಯ ದಿನ ಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು. ಇದಲ್ಲದೆ ಇವರಿಗೆ ಇಷ್ಟ ಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹೊಡೆಯುವದಕ್ಕೂ ಅಧಿಕಾರ ಉಂಟು.

Interlinear

Choose Theme