ಹಾಗೆಯೆ ಅವನೆದ್ದು ಚಾರೆಪ್ತಾಕ್ಕೆ ಹೋಗಿ ಪಟ್ಟಣದ ಬಾಗಿಲ ಬಳಿಗೆ ಬಂದಾಗ ಇಗೋ, ಅಲ್ಲಿ ಒಬ್ಬ ವಿಧವೆಯು ಕಟ್ಟಿಗೆಗಳನ್ನು ಆರಿಸಿಕೊಳ್ಳುತ್ತಾ ಇದ್ದಳು. ಅವನು ಅವಳನ್ನು ಕರೆದು--ನೀನು ದಯಮಾಡಿ ಕುಡಿ ಯುವದಕ್ಕೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತಕ್ಕೊಂಡುಬಾ ಅಂದನು.
Cross references
ತಿತ್ತಿಯೊಳಗಿನ ನೀರು ಮುಗಿದಾಗ ಆಕೆಯು ಮಗುವನ್ನು ಗಿಡಗಳಲ್ಲಿ ಒಂದರ ಕೆಳಗೆ ಮಲಗಿಸಿ
ಆಗ ಆ ಸೇವಕನು ಅವಳೆದುರಿಗೆ ಓಡಿಹೋಗಿ--ನಿನ್ನ ಕೊಡದೊಳಗಿನಿಂದ ಸ್ವಲ್ಪ ನೀರು ನನಗೆ ಕುಡಿಯುವದಕ್ಕೆ ಕೊಡು ಎಂದು ಕೇಳಿಕೊಂಡನು.
ಆಗ ಸಮಾರ್ಯದ ಒಬ್ಬ ಸ್ತ್ರೀಯು ನೀರು ಸೇದುವದಕ್ಕಾಗಿ ಬಂದಳು; ಯೇಸು ಆಕೆಗೆ--ನನಗೆ ಕುಡಿಯುವದಕ್ಕೆ ಕೊಡು ಅಂದನು.
ಪ್ರಯಾಸ ಪರಿಶ್ರಮಗಳಿಂದ ಆನೇಕ ಸಾರಿ ನಿದ್ದೆಗೆಟ್ಟು ಹಸಿವೆ ಬಾಯಾರಿಕೆಗಳನ್ನ ನುಭವಿಸಿ ಅನೇಕ ಸಾರಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ.
ಕೆಲವರನ್ನು ಕಲ್ಲೆಸೆ ದರು; ಕೆಲವರನ್ನು ಗರಗಸದಿಂದ ಕೊಯ್ದುಕೊಂದರು. ಕೆಲವರನ್ನು ಪರಿಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು; ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮ ಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು.