1 ಅರಸುಗಳು 15:9 · ಕನ್ನಡ ಬೈಬಲ್
ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಇಪ್ಪತ್ತನೇ ವರುಷದಲ್ಲಿ ಆಸನು ಯೆಹೂದದ ಮೇಲೆ ಆಳಿದನು.
Cross references
2 ದಿನವೃತ್ತಾಂತ 13:20
ಯಾರೊಬ್ಬಾಮನು ಅಬೀಯನ ದಿನಗಳಲ್ಲಿ ತಿರಿಗಿ ಶಕ್ತಿಯನ್ನು ಹೊಂದಲಿಲ್ಲ. ಕರ್ತನು ಅವನನ್ನು ಹೊಡೆ ದದ್ದರಿಂದ ಅವನು ಸತ್ತನು.
2 ದಿನವೃತ್ತಾಂತ 14:1
ಅಬೀಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನು ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗನಾದ ಆಸನು ಅವನಿಗೆ ಬದಲಾಗಿ ಆಳಿದನು. ಅವನ ದಿವಸಗಳಲ್ಲಿ ಹತ್ತು ವರುಷ ದೇಶವು ಶಾಂತವಾಗಿತ್ತು,
2 ದಿನವೃತ್ತಾಂತ 15:8
ಆಸನು ಈ ಮಾತುಗಳನ್ನೂ ಪ್ರವಾದಿಯಾದ ಓದೇದನ ಪ್ರವಾದನೆಯನ್ನೂ ಕೇಳಿದಾಗ ಅವನು ಬಲಗೊಂಡು ಯೆಹೂದ ಬೆನ್ಯಾವಿಾನನ ಸಮಸ್ತ ದೇಶದೊಳಗಿಂದಲೂ ಎಫ್ರಾಯಾಮಿನ ಬೆಟ್ಟದಲ್ಲಿ ತಾನು ಹಿಡಿದ ಪಟ್ಟಣಗಳೊಳಗಿಂದಲೂ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ ಕರ್ತನ ದ್ವಾರಾಂಗಳದ ಮುಂದೆ ಇದ್ದ ಕರ್ತನ ಬಲಿಪೀಠವನ್ನು ನೂತನ ಪಡಿಸಿದನು.