Home Bibles ☰ Books 1 ಅರಸುಗಳು 15:33 · ಕನ್ನಡ ಬೈಬಲ್
1 ಅರಸುಗಳು 15:33 · ಕನ್ನಡ ಬೈಬಲ್

ಯೆಹೂದದ ಅರಸನಾದ ಆಸನ ಮೂರನೇ ವರುಷದಲ್ಲಿ ಅಹೀಯನ ಮಗನಾದ ಬಾಷನು ಸಮಸ್ತ ಇಸ್ರಾಯೇಲ್ಯರ ಮೇಲೆ ತಿರ್ಚದಲ್ಲಿ ಆಳಲು ಆರಂಭಿಸಿ ಇಪ್ಪತ್ತನಾಲ್ಕು ವರುಷ ಆಳಿದನು.ಆದರೆ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಯಾರೊ ಬ್ಬಾಮನ ಮಾರ್ಗದಲ್ಲಿಯೂ ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ಲ್ಲಿಯೂ ನಡೆದನು.

Cross references

1 ಅರಸುಗಳು 14:17

ಆಗ ಯಾರೊಬ್ಬಾಮನ ಪತ್ನಿ ಎದ್ದು ಹೊರಟು ತಿರ್ಚಕ್ಕೆ ಬಂದಳು. ಕರ್ತನು ಪ್ರವಾದಿಯಾದ ತನ್ನ ಸೇವಕನಾಗಿರುವ ಅಹೀಯನ ಮುಖಾಂತರ ತಿಳಿಸಿದ ವಾಕ್ಯದ ಪ್ರಕಾರವೇ ಅವಳು ಬಾಗಿಲ ಹೊಸ್ತಿಲ ಬಳಿಗೆ ಬಂದಾಗ ಮಗನು ಸತ್ತನು.

1 ಅರಸುಗಳು 16:8

ಯೆಹೂದದ ಅರಸನಾದ ಆಸನ ಇಪ್ಪತ್ತಾರನೇ ವರುಷದಲ್ಲಿ ಬಾಷನ ಮಗನಾದ ಏಲನು ಇಸ್ರಾಯೇ ಲಿನ ಮೇಲೆ ತಿರ್ಚದಲ್ಲಿ ಎರಡು ವರುಷ ಆಳಲಾರಂಭಿ ಸಿದನು.

2 ದಿನವೃತ್ತಾಂತ 15:19

ಆಸನ ಆಳ್ವಿಕೆಯಲ್ಲಿ ಮೂವತ್ತೈದನೇ ವರುಷದ ಪರಿಯಂತರ ಯುದ್ಧವಿಲ್ಲದೆ ಇತ್ತು.

Interlinear

Choose Theme