1 ಅರಸುಗಳು 15:2 · ಕನ್ನಡ ಬೈಬಲ್
ಅವನು ಯೆರೂಸಲೇಮಿನಲ್ಲಿ ಮೂರು ವರುಷ ಆಳಿದನು. ಅವನ ತಾಯಿ ಅಬೀಷಾಲೋಮನ ಮಗ ಳಾಗಿದ್ದು ಮಾಕಾ ಎಂಬ ಹೆಸರುಳ್ಳವಳಾಗಿದ್ದಳು.
Cross references
1 ಅರಸುಗಳು 15:10
ನಾಲ್ವತ್ತೊಂದು ವರುಷ ಅವನು ಯೆರೂ ಸಲೇಮಿನಲ್ಲಿ ಆಳಿದನು. ಅವನ ತಾಯಿ ಅಬೀಷಾ ಲೋಮನ ಮಗಳಾಗಿದ್ದು ಮಾಕಾಳೆಂಬ ಹೆಸರುಳ್ಳವ ಳಾಗಿದ್ದಳು.
1 ಅರಸುಗಳು 15:13
ಇದಲ್ಲದೆ ಆಸನು ತನ್ನ ತಾಯಿಯಾದ ಮಾಕಾ ತೋಪಿನಲ್ಲಿ ಒಂದು ವಿಗ್ರಹವನ್ನು ಮಾಡಿಸಿ ಇಟ್ಟದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿ ಅವಳ ವಿಗ್ರಹ ವನ್ನು ಕಡಿದುಬಿಟ್ಟು ಕಿದ್ರೋನೆಂಬ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.
1 ಅರಸುಗಳು 22:42
ಯೆಹೋಷಾಫಾಟನು ಅರಸನಾಗುವಾಗ ಮೂವ ತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪತ್ತೈದು ವರುಷ ಆಳಿದನು. ಅವನ ತಾಯಿಯ ಹೆಸರು ಅಜೂಬಳು; ಅವಳು ಶಿಲ್ಹಿಯ ಮಗಳು.
2 ದಿನವೃತ್ತಾಂತ 11:20
ಇವಳ ತರು ವಾಯ ಅವನು ಅಬ್ಷಾಲೋಮನ ಮಗಳಾದ ಮಾಕ ಳನ್ನು ಹೆಂಡತಿಯಾಗಿ ತಕ್ಕೊಂಡನು. ಇವಳು ಅವನಿಗೆ ಅಬೀಯನ್ನೂ ಅತ್ತೈಯನ್ನೂ ಜೀಜನನ್ನೂ ಶೆಲೋ ವಿಾತನ್ನೂ ಹೆತ್ತಳು.
2 ದಿನವೃತ್ತಾಂತ 13:2
ಅವನು ಯೆರೂಸಲೇಮಿನಲ್ಲಿ ಮೂರು ವರುಷ ಆಳಿದನು. ಅವನ ತಾಯಿಯ ಹೆಸರು ವಿಾಕಾಯ, ಗಿಬೆಯದ ಊರೀಯೇಲನ ಮಗಳು.