1 ಅರಸುಗಳು 15:16 · ಕನ್ನಡ ಬೈಬಲ್
ಆಸನಿಗೂ ಇಸ್ರಾಯೇಲಿನ ಅರಸನಾದ ಬಾಷ ನಿಗೂ ಅವರ ಜೀವಾಂತ್ಯದ ವರೆಗೆ ಯುದ್ಧ ನಡೆಯು ತ್ತಿತ್ತು.
Cross references
1 ಅರಸುಗಳು 14:30
ರೆಹಬ್ಬಾಮ ನಿಗೂ ಯಾರೊಬ್ಬಾಮನಿಗೂ ಅವರ ಜೀವನದ ಪರಿಯಂತರ ಯುದ್ಧಉಂಟಾಗಿತ್ತು.ರೆಹಬ್ಬಾಮನು ತನ್ನ ಪಿತೃಗಳ ಸಂಗಡ ಮಲಗಿದನು. ದಾವೀದನ ಪಟ್ಟಣದಲ್ಲಿ ಅವನು ಹೂಣಿಡಲ್ಪಟ್ಟನು. ಅವನ ತಾಯಿ ಅಮ್ಮೋನ್ಯಳಾದ ನಯಮಾಳೆಂಬ ಹೆಸರುಳ್ಳವಳಾ ಗಿದ್ದಳು. ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಆಳಿದನು.
1 ಅರಸುಗಳು 15:6
ಅಬೀಯಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟವಲ್ಲವೋ?
1 ಅರಸುಗಳು 15:32
ಇದಲ್ಲದೆ ಆಸನಿಗೂ ಇಸ್ರಾಯೇಲಿನ ಅರಸನಾದ ಬಾಷನಿಗೂ ಅವರ ಜೀವಾಂತ್ಯದ ವರೆಗೆ ಯುದ್ಧವಿತ್ತು.
2 ದಿನವೃತ್ತಾಂತ 15:19
ಆಸನ ಆಳ್ವಿಕೆಯಲ್ಲಿ ಮೂವತ್ತೈದನೇ ವರುಷದ ಪರಿಯಂತರ ಯುದ್ಧವಿಲ್ಲದೆ ಇತ್ತು.
2 ದಿನವೃತ್ತಾಂತ 16:1
ಆಸನ ಆಳ್ವಿಕೆಯ ಮೂವತ್ತಾರನೇ ವರುಷದಲ್ಲಿ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂ ದದ ಅರಸನಾದ ಆಸನ ಬಳಿಗೆ ಯಾರೂ ಹೊರಟು ಹೋಗುವದಕ್ಕೂ ಒಳಗೆ ಬರುವದಕ್ಕೂ ಆಗದ ಹಾಗೆ ರಾಮವನ್ನು ಕಟ್ಟಿಸಿದನು.