ಆದರೆ ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ ಅರಮನೆಯ ಬಾಗಿಲನ್ನು ಕಾಯುವ ಕಾವಲಿ ನವರ ಅಧಿಪತಿಯ ಕೈಯಲ್ಲಿ ಒಪ್ಪಿಸಿದನು.
Cross references
ನಿಮ್ಮನ್ನು ಆಳುವ ಅರಸನ ಅಧಿಕಾರ ಏನಂದರೆ--ಅವನು ನಿಮ್ಮ ಕುಮಾರರನ್ನು ತನಗೋಸ್ಕರ ತನ್ನ ರಥ ಸವಾರರಾ ಗಿಯೂ ರಾಹುತರಾಗಿಯೂ ತಕ್ಕೊಳ್ಳುವನು.
ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆನೀವು ತಿರುಗಿಕೊಂಡು ಕರ್ತನ ಯಾಜಕರನ್ನು ಕೊಂದು ಹಾಕಿರಿ. ಅವರ ಕೈ ದಾವೀದನ ಸಂಗಡ ಸಹಾಯ ವಾಗಿದೆ. ಅವನು ಓಡಿಹೋಗುವದನ್ನು ಅವರು ತಿಳಿದಿದ್ದು ಅದನ್ನು ನನಗೆ ತಿಳಿಸದೆ ಹೋದರು ಅಂದನು. ಆದರೆ ಅರಸನ ಸೇವಕರು ಕರ್ತನ ಯಾಜಕರ ಮೇಲೆ ಬೀಳಲು ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು.
ತರುವಾಯ ಅಬ್ಷಾಲೋಮನು ತನ ಗೋಸ್ಕರ ರಥಗಳನ್ನೂ ಕುದುರೆಗಳನ್ನೂ ತನ್ನ ಮುಂದೆ ಓಡುವದಕ್ಕೆ ಐವತ್ತು ಮಂದಿಯನ್ನೂ ಸಿದ್ಧಮಾಡಿಕೊಂಡನು.
ಅದೇ ಕಾಲದಲ್ಲಿ ಯಾರೊಬ್ಬಾಮನ ಮಗನಾದ ಅಭೀಯನು ರೋಗದಲ್ಲಿ ಬಿದ್ದನು. ಆದದರಿಂದ ಯಾರೊಬ್ಬಾಮನು ತನ್ನ ಪತ್ನಿಗೆ--ನೀನೆದ್ದು
ಆದರೆ ಕರ್ತನು ಅಹೀಯನಿಗೆಇಗೋ, ಯಾರೊಬ್ಬಾಮನ ಪತ್ನಿಯು ತನ್ನ ಮಗನಿ ಗೋಸ್ಕರ ನಿನ್ನನ್ನು ವಿಚಾರಿಸುವುದಕ್ಕಾಗಿ ಬರುತ್ತಾಳೆ. ಯಾಕಂದರೆ ಅವನು ರೋಗದಲ್ಲಿದ್ದಾನೆ. ನೀನು ಅವ ಳಿಗೆ ಹೀಗೆ ಹೇಳು, ಅವಳು ಒಳಗೆ ಬರುವಾಗ ಮತ್ತೊ ಬ್ಬಳ ಹಾಗೆ ವೇಷ ಹಾಕಿಕೊಂಡು ಬರುವಳು ಅಂದನು.
ಆದರೆ ಕರ್ತನ ಕೈ ಎಲೀಯನ ಮೇಲೆ ಇದ್ದದರಿಂದ ಅವನು ತನ್ನ ನಡುವನ್ನು ಕಟ್ಟಿಕೊಂಡು ಇಜ್ರೇಲಿನ ವರೆಗೂ ಅಹಾಬನಿಗೆ ಮುಂದಾಗಿ ಓಡಿದನು.
ಆದರೆ ಏಳನೇ ವರುಷದಲ್ಲಿ ಯೆಹೋಯಾದಾ ವನು ನೂರಕ್ಕೆ ಅಧಿಪತಿಯಾದವರನ್ನೂ ರಾಣುವೆಯ ಅಧಿಪತಿಗಳನ್ನೂ ಕಾವಲುಗಾರರ ಸಹಿತವಾಗಿ ಕರೆಯ ಕಳುಹಿಸಿ ತನ್ನ ಬಳಿಗೆ ಕರ್ತನ ಮನೆಗೆ ಕರಕೊಂಡು ಅವರ ಸಂಗಡ ಒಡಂಬಡಿಕೆಯನ್ನು ಮಾಡಿ ಕರ್ತನ ಮನೆಯಲ್ಲಿ ಅವರಿಂದ ಪ್ರಮಾಣ ತೆಗೆದುಕೊಂಡು ಅವರಿಗೆ ಅರಸನ ಮಗನನ್ನು ತೋರಿಸಿ
ಆಗ ಅವನು ನೂರಕ್ಕೆ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಕಾವಲುಗಾರರನ್ನೂ ದೇಶದ ಜನ ರೆಲ್ಲರನ್ನೂ ತನ್ನ ಬಳಿಗೆ ಕರಕೊಂಡ ಮೇಲೆ ಅವರು ಅರಸನನ್ನು ಕರ್ತನ ಮನೆಯಿಂದ ಕಾವಲುಗಾರರ ಬಾಗಲ ಮಾರ್ಗವಾಗಿ ಅರಮನೆಗೆ ಕರಕೊಂಡು ಬಂದು ಅರಸುಗಳ ಸಿಂಹಾಸನದ ಮೇಲೆ ಕೂಡ್ರಿಸಿದರು.
ಬಂಗಾರವು ಹೇಗೆ ಮುಸುಕಾಯಿತು! ಬಹಳ ಶುದ್ಧವಾದ ಬಂಗಾರವು ಹೇಗೆ ಬದಲಾಯಿತು! ಪರಿಶುದ್ಧ ಸ್ಥಳದ ಕಲ್ಲುಗಳು ಪ್ರತಿಯೊಂದು ಬೀದಿಯ ಬದಿಯಲ್ಲಿ ಸುರಿಯಲ್ಪಟ್ಟಿವೆ.