ಆದ ದರಿಂದ ನೀನೆದ್ದು ನಿನ್ನ ಮನೆಗೆ ಹೋಗು; ನೀನು ಪಟ್ಟಣದೊಳಗೆ ಪಾದಗಳನ್ನು ಇಡುವಷ್ಟರಲ್ಲಿ ನಿನ್ನ ಮಗನು ಸಾಯುವನು.
Cross references
ಇದಲ್ಲದೆ ನೀನು ನಿನ್ನ ಕೈಯಲ್ಲಿ ಹತ್ತು ರೊಟ್ಟಿಗಳನ್ನೂ ಭಕ್ಷ್ಯಗಳನ್ನೂ ಒಂದು ಮಡಕೆ ಜೇನು ತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಅವನು ಮಗುವಿಗೆ ಆಗುವದನ್ನು ನಿನಗೆ ತಿಳಿಸುವನು ಅಂದನು.
ಆತನು ಯಾರೊಬ್ಬಾಮನ ಪಾಪಗಳ ನಿಮಿತ್ತ ಇಸ್ರಾಯೇಲ್ಯರನ್ನು ಒಪ್ಪಿಸಿ ಬಿಡುವನು; ಅವನೇ ಪಾಪ ಮಾಡಿ ಪಾಪವನ್ನು ಮಾಡಲು ಇಸ್ರಾಯೇಲ್ಯರನ್ನು ಪ್ರೇರೇಪಿಸಿದನು ಅಂದನು.
ಅವರು ಅವನಿಗೆ ಹೇಳಿದ್ದೇನಂದರೆ--ಒಬ್ಬ ಮನು ಷ್ಯನು ಎದುರಾಗಿ ಬಂದು ನಮಗೆ--ನೀವು ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ತಿರುಗಿ ಹೋಗಿ-- ಇಸ್ರಾ ಯೇಲ್ಯರಲ್ಲಿ ದೇವರು ಇಲ್ಲದೆ ಇರುವದರಿಂದಲೋ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವದಕ್ಕೆ ಕಳುಹಿಸುವದೇನು? ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವಿ ಎಂದು ಕರ್ತನು ಹೇಳುತ್ತಾನೆಂಬದಾಗಿ ಅವನಿಗೆ ಹೇಳಿರಿ ಅಂದನು.
ಹಾಗೆಯೇ ಅವನು ಎದ್ದು ಅವನ ಸಂಗಡ ಅರಸನ ಬಳಿಗೆ ಇಳಿದು ಹೋಗಿ ಅವನಿಗೆ--ಆತನ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರು ಇಲ್ಲವೆಂದು ನೀನು ಎಕ್ರೋ ನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸಲು ಜನ ರನ್ನು ಕಳುಹಿಸಿದ ಕಾರಣ ನೀನು ಏರಿದ ಮಂಚ ದಿಂದ ಇಳಿಯದೆ ನಿಶ್ಚಯವಾಗಿ ಸಾಯುವಿ ಎಂದು ಕರ್ತನು ಹೇಳುತ್ತಾನೆ ಅಂದನು.
ಯೇಸು ಅವನಿಗೆ--ನೀನು ಹೋಗು, ನಿನ್ನ ಮಗನು ಬದುಕಿರುತ್ತಾನೆ ಅಂದನು. ಮತ್ತು ಆ ಮನುಷ್ಯನು ಯೇಸು ಹೇಳಿದ ಮಾತನ್ನು ನಂಬಿ ಹೊರಟುಹೋದನು.