Home Bibles ☰ Books 1 ಅರಸುಗಳು 11:19 · ಕನ್ನಡ ಬೈಬಲ್
1 ಅರಸುಗಳು 11:19 · ಕನ್ನಡ ಬೈಬಲ್

ಇದಲ್ಲದೆ ಹದದನು ಫರೋಹನ ದೃಷ್ಟಿಯಲ್ಲಿ ಅತಿ ಕೃಪೆಯನ್ನು ಹೊಂದಿ ದನು. ಏನಂದರೆ, ಅವನು ರಾಣಿಯಾಗಿರುವ ತನ್ನ ಹೆಂಡತಿಯಾದ ತಖ್ಪೆನೇಸ್‌ಯೆಂಬವಳ ಸಹೋ ದರಿಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.

Cross references

ಆದಿಕಾಂಡ 39:4

ಆದದರಿಂದ ಯೋಸೇಫನು ಅವನ ದೃಷ್ಟಿಯಲ್ಲಿ ಕೃಪೆಹೊಂದಿ ಅವನ ಸೇವೆಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು.

ಆದಿಕಾಂಡ 39:21

ಆದರೆ ಕರ್ತನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕರುಣೆಯಿಟ್ಟು ಸೆರೆಮನೆಯ ಯಜಮಾನನು ಅವನ ಮೇಲೆ ದಯೆತೋರಿಸುವಂತೆ ಮಾಡಿದನು.

ಆದಿಕಾಂಡ 41:45

ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್‌ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಆಗ ಯೋಸೇಫನು ಐಗುಪ್ತದೇಶದಲ್ಲೆಲ್ಲಾ ಹೊರಟು ಸಂಚರಿಸಿದನು.

ಯೆರೆಮಿಯ 43:7

ಆದದರಿಂದ ಈಗ ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರೂ ಆಗಿರುವ ಕರ್ತನು ಹೀಗೆ ಹೇಳುತ್ತಾನೆ--ಯಾಕೆ ನಿಮಗೆ ಉಳಿದಿರುವ ವರನ್ನು ಮಿಗಿಸದ ಹಾಗೆ ನೀವು ಗಂಡಸರನ್ನೂ ಹೆಂಗಸರನ್ನೂ ಮಗುವನ್ನೂ ಮೊಲೆ ಕೂಸನ್ನೂ ಯೆಹೂದದೊಳಗಿಂದ ಕಡಿದುಬಿಟ್ಟು ನಿಮ್ಮ ಪ್ರಾಣ ಗಳಿಗೆ ದೊಡ್ಡ ಕೇಡನ್ನು ಮಾಡಿಕೊಳ್ಳು ತ್ತೀರಿ?

ಅಪೋಸ್ತಲರ ಕೃತ್ಯಗಳು 7:10

ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತ ದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾ ಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿ ಸಿದನು. ಫರೋಹನು ಅವನನ್ನು ಐಗುಪ್ತ ದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯನ್ನಾಗಿ ನೇಮಿಸಿದನು.

ಅಪೋಸ್ತಲರ ಕೃತ್ಯಗಳು 7:21

ಆಮೇಲೆ ಅವನನ್ನು ಹೊರಗೆ ಹಾಕಿ ದಾಗ ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಮಗನಾಗಿ ಸಾಕಿದಳು.

Interlinear

Choose Theme