1 ಅರಸುಗಳು 10:20 · ಕನ್ನಡ ಬೈಬಲ್
ಹನ್ನೆರಡು ಸಿಂಹಗಳು ಆರು ಮೆಟ್ಟಲುಗಳ ಮೇಲೆ ಎರಡು ಪಾರ್ಶ್ವಗಳಲ್ಲಿ ನಿಂತಿದ್ದವು. ಯಾವ ರಾಜ್ಯದಲ್ಲಿಯೂ ಅಂಥದ್ದು ಇದ್ದದ್ದಿಲ್ಲ.
Cross references
ಆದಿಕಾಂಡ 49:9
ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಕೊಳ್ಳೆಯಿಂದ ಮೇಲಕ್ಕೆ ಬಂದಿ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕು ವವರು ಯಾರು?
ಅಂಕೆಗಳ ಪುಸ್ತಕ 23:24
ಇಗೋ, ಜನವು ದೊಡ್ಡ ಸಿಂಹದ ಹಾಗೆ ಏಳುವದು; ಸಿಂಹದ ಮರಿಯ ಹಾಗೆ ಎದ್ದೇಳುವದು; ಅದು ಬೇಟೆಯನ್ನು ತಿಂದು ಹತವಾದವರ ರಕ್ತವನ್ನು ಕುಡಿಯುವ ವರೆಗೆ ಮಲಗದು ಅಂದನು.
ಅಂಕೆಗಳ ಪುಸ್ತಕ 24:9
ಅವನು ಸಿಂಹದ ಹಾಗೆಯೂ ದೊಡ್ಡ ಸಿಂಹದ ಹಾಗೆಯೂ ಬಾಗಿ ಮಲಗುತ್ತಾನೆ; ಅವನನ್ನು ಎಬ್ಬಿಸುವವರು ಯಾರು? ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದ, ನಿನ್ನನ್ನು ಶಪಿಸುವವರಿಗೆ ಶಾಪ ಉಂಟು.
ಪ್ರಕಟನೆ 5:5
ಆಗ ಹಿರಿಯರಲ್ಲಿ ಒಬ್ಬನು ನನಗೆ--ಅಳಬೇಡ; ಅಗೋ, ಯೂದಾ ಗೋತ್ರದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಆ ಪುಸ್ತಕವನ್ನು ತೆರೆಯುವದಕ್ಕೂ ಅದರ ಏಳು ಮುದ್ರೆ ಗಳನ್ನು ಬಿಚ್ಚುವದಕ್ಕೂ ಜಯಹೊಂದಿದ್ದಾನೆ ಎಂದು ಹೇಳಿದನು.