Home Bibles 1 ಅರಸುಗಳು 1:21 · ಕನ್ನಡ ಬೈಬಲ್
1 ಅರಸುಗಳು 1:21 · ಕನ್ನಡ ಬೈಬಲ್

ಇಲ್ಲದಿದ್ದರೆ ಅರಸನಾದ ನನ್ನ ಒಡೆಯನು ತನ್ನ ಪಿತೃಗಳ ಸಂಗಡ ಮಲಗಿಕೊಂಡಿರುವಾಗ ನಾನೂ ನನ್ನ ಮಗನಾದ ಸೊಲೊಮೋನನೂ ಅಪರಾಧಿಗಳಾಗಿ ಎಣಿಸಲ್ಪಟ್ಟೇವು ಅಂದಳು.

Cross references

ಆದಿಕಾಂಡ 15:15

ನೀನಾದರೋ ಸಮಾಧಾನದಿಂದ ನಿನ್ನ ತಂದೆಗಳ ಬಳಿಗೆ ಹೋಗುವಿ; ಬಹಳ ಮುದಿಪ್ರಾಯದವನಾಗಿ (ಮೃತಿ ಹೊಂದಿ) ಹೂಣಲ್ಪಡುವಿ.

ದ್ವಿತೀಯೋಪದೇಶಕಾಂಡ 31:16

ಆಗ ಕರ್ತನು ಮೋಶೆಗೆ--ನೀನು ನಿನ್ನ ಪಿತೃಗಳ ಸಂಗಡ ಮಲಗುವಿ; ಈ ಜನರು ಎದ್ದು ತಾವು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಜಾರತ್ವಮಾಡಿ ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ವಿಾರುವರು.

ನ್ಯಾಯಾಧಿಪತಿಗಳು 9:5

ಅವನು ಒಫ್ರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ತನ್ನ ಸಹೋದರರಾದ ಯೆರುಬ್ಬಾಳನ ಎಪ್ಪತ್ತು ಮಂದಿ ಕುಮಾರರನ್ನು ಒಂದು ಕಲ್ಲಿನ ಮೇಲೆ ಕೊಂದು ಹಾಕಿದನು. ಆದರೆ ಯೆರುಬ್ಬಾಳನ ಚಿಕ್ಕ ಮಗನಾದ ಯೋತಾಮನು ಒಬ್ಬನೇ ಉಳಿದನು; ಯಾಕಂದರೆ ಅವನು ಅಡಗಿಕೊಂಡನು.

2 ಸಮುವೇಲ 7:12

ಇದಲ್ಲದೆ ಕರ್ತನು ನಿನಗೆ ತಿಳಿಸುವದೇನಂದರೆ, ನಾನು ನಿನಗೆ ಮನೆಯನ್ನು ಕಟ್ಟುವೆನು. ನಿನ್ನ ದಿವಸಗಳು ಪೂರ್ತಿ ಯಾಗಿ ನೀನು ನಿನ್ನ ಪಿತೃಗಳ ಸಂಗಡ ಮಲಗಿಕೊಂಡಿ ರುವಾಗ ನಿನ್ನ ಕರುಳುಗಳಿಂದ ಹೊರಡುವ ನಿನ್ನ ಸಂತತಿಯನ್ನು ನಿನ್ನ ತರುವಾಯ ಎಬ್ಬಿಸಿ ನಾನು ಅವನ ರಾಜ್ಯವನ್ನು ಸ್ಥಿರಮಾಡುವೆನು.

1 ಅರಸುಗಳು 1:12

ಆದದರಿಂದ ನೀನು ನಿನ್ನ ಪ್ರಾಣವನ್ನೂ ನಿನ್ನ ಮಗ ನಾದ ಸೊಲೊಮೋನನ ಪ್ರಾಣವನ್ನೂ ರಕ್ಷಿಸಿಕೊಳ್ಳುವ ಹಾಗೆ ಅಪ್ಪಣೆಯಾದರೆ ನಿನಗೆ ಆಲೋಚನೆ ಹೇಳು ತ್ತೇನೆ.

1 ಅರಸುಗಳು 2:10

ಹೀಗೆಯೇ ದಾವೀದನು ತನ್ನ ಪಿತೃಗಳ ಸಂಗಡ ಮಲಗಿಕೊಂಡನು; ಅವನು ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು.

1 ಅರಸುಗಳು 2:15

ಆಗ ಅವನು--ರಾಜ್ಯವು ನನ್ನದಾಗಿತ್ತೆಂದು ನಾನು ಆಳುವ ಹಾಗೆ ಸಮಸ್ತ ಇಸ್ರಾಯೇಲ್ಯರು ನನ್ನ ಮೇಲೆ ಕಣ್ಣಿಟ್ಟಿದ್ದರೆಂದು ನೀನು ಬಲ್ಲೆ.

1 ಅರಸುಗಳು 2:22

ಅರಸನಾದ ಸೊಲೊಮೋನನು ತನ್ನ ತಾಯಿಗೆ ಪ್ರತ್ಯುತ್ತರವಾಗಿಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷ ಗೈಳನ್ನು ನೀನು ಕೇಳುವದೇನು? ಅವನಿಗೋಸ್ಕರ ರಾಜ್ಯ ವನ್ನು ಕೇಳು, ಅವನು ನನ್ನ ಅಣ್ಣ. ಅವನಿಗೋಸ್ಕರವೂ ಯಾಜಕನಾದ ಎಬ್ಯಾತಾರನಿಗೋಸ್ಕರವೂ ಚೆರೂ ಯಳ ಮಗನಾದ ಯೋವಾಬನಿಗೋಸ್ಕರವೂ ಕೇಳು ಅಂದನು.

2 ದಿನವೃತ್ತಾಂತ 22:10

ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತನೆಂದು ಕಂಡಾಗ ಅವಳು ಎದ್ದು ಯೆಹೂದನ ಮನೆಯ ರಾಜ್ಯದ ಸಂತಾನವನ್ನೆಲ್ಲಾ ನಾಶಮಾಡಿದಳು.

Interlinear

Choose Theme