ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತು ಇಲ್ಲವಾದರೂ ನಾನು ಹೇಳುವದೇನಂದರೆ--ಒಬ್ಬ ಸಹೋದರನಿಗೆ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆಯು ಅವನೊಂದಿಗೆ ಇರುವದಕ್ಕೆ ಸಮ್ಮತಿಸದರೆ ಅವನು ಆಕೆಯನ್ನು ಬಿಡಬಾರದು.
Cross references
ಆಗ ಎಲಾಮನ ಕುಮಾರರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕೆನ್ಯನು ಎಜ್ರನಿಗೆ ಪ್ರತ್ತ್ಯುತ್ತರವಾಗಿ--ನಾವು ದೇಶದ ಜನಗಳಲ್ಲಿ ಅನ್ಯ ಸ್ತ್ರೀಯರನ್ನು ತೆಗೆದು ಕೊಂಡದ್ದರಿಂದ ನಮ್ಮ ದೇವರಿಗೆ ವಿರೋಧವಾಗಿ ಅಕೃತ್ಯಮಾಡಿದ್ದೇವೆ. ಆದಾಗ್ಯೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲ್ಯರಲ್ಲಿ ನಿರೀಕ್ಷೆ ಉಂಟು.
ಆದದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಕರ್ತನ ಮುಂದೆ ಅರಿಕೆಮಾಡಿ, ಆತನ ಚಿತ್ತದ ಪ್ರಕಾರ ಮಾಡಿ, ಈ ದೇಶದ ಜನರಿಂದಲೂ ಅನ್ಯಸ್ತ್ರೀಯ ರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಅಂದನು.
ಹೀಗೆ ನಾನು ಅನುಮತಿಯಿಂದಲೇ ಮಾತನಾಡುತ್ತೇನೆ, ಆದರೆ ಆಜ್ಞೆಯಲ್ಲ.
ಕನ್ನಿಕೆಯರನ್ನು ಕುರಿತು ನನಗೆ ಕರ್ತನಿಂದ ಯಾವ ಆಜ್ಞೆಯೂ ಇಲ್ಲ; ಆದರೆ ನಂಬಿಗಸ್ತನಾಗಿರುವದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ನಿರ್ಣಯವನ್ನು ಹೇಳುತ್ತೇನೆ.
ಹೆಂಡತಿಯನ್ನು ಕಟ್ಟಿಕೊಂಡಿ ದ್ದೀಯೋ? ಬಿಡುಗಡೆಗಾಗಿ ಪ್ರಯತ್ನಿಸಬೇಡ; ಹೆಂಡತಿಯನ್ನು ಬಿಟ್ಟವನಾಗಿದ್ದೀಯೋ? ಹೆಂಡತಿಗಾಗಿ ಪ್ರಯತ್ನಿಸಬೇಡ.
ನಾನು ಈಗ ಆಡುವ ಮಾತುಗಳನ್ನು ಕರ್ತನ ಮಾತಿನ ಪ್ರಕಾರ ಹೇಳದೆ ಭರವಸದಿಂದ ಹೊಗಳಿಕೊಳ್ಳುವ ಬುದ್ಧಿ ಹೀನನಂತೆ ಆಡುತ್ತೇನೆ.