Home Bibles 1 ಕೊರಿಂಥದವರಿಗೆ 15:41 · ಕನ್ನಡ ಬೈಬಲ್
1 ಕೊರಿಂಥದವರಿಗೆ 15:41 · ಕನ್ನಡ ಬೈಬಲ್

ಸೂರ್ಯನ ಮಹಿಮೆ ಒಂದು ವಿಧ, ಚಂದ್ರನ ಮಹಿಮೆ ಮತ್ತೊಂದು ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚು ಕಡಿಮೆಯುಂಟಷ್ಟೆ.

Cross references

ಆದಿಕಾಂಡ 1:14

ದೇವರು--ಹಗಲನ್ನು ರಾತ್ರಿಯಿಂದ ಬೇರೆ ಮಾಡುವದಕ್ಕೆ ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ; ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ;

ದ್ವಿತೀಯೋಪದೇಶಕಾಂಡ 4:19

ನೀನು ನಿನ್ನ ಕಣ್ಣು ಗಳನ್ನು ಆಕಾಶದ ಕಡೆಗೆ ಎತ್ತಿ ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ ನಿನ್ನ ದೇವರಾದ ಕರ್ತನು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಹಂಚಿಕೊಟ್ಟ ಇವುಗಳಿಗೆ ಅಡ್ಡಬಿದ್ದು ಇವುಗಳನ್ನು ಸೇವಿಸುವದಕ್ಕೆ ನಡಿಸಲ್ಪಡದಂತೆಯೂ ನೋಡಿಕೊಳ್ಳಿರಿ.

ಯೋಬ 31:26

ಸೂರ್ಯನು ಹೊಳೆಯುವದನ್ನು ಚಂದ್ರನು ಪ್ರಭೆಯಲ್ಲಿ ನಡೆಯುವದನ್ನು ನಾನು ನೋಡಲಾಗಿ,

ಕೀರ್ತನೆಗಳು 8:3

ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ

ಕೀರ್ತನೆಗಳು 19:4

ಭೂಮಿಯ ಮೇಲೆಲ್ಲಾ ಅವು ಗಳ ಪ್ರಭುತ್ವವೂ ಭೂಲೋಕದ ಅಂತ್ಯದ ವರೆಗೆ ಅವುಗಳ ನುಡಿಗಳೂ ಹರಡಿವೆ; ಅವುಗಳಲ್ಲಿ ಆತನು ಸೂರ್ಯನಿಗೆ ಗುಡಾರವನ್ನು ಹಾಕಿದ್ದಾನೆ.

ಕೀರ್ತನೆಗಳು 148:3

ಸೂರ್ಯ ಚಂದ್ರರೇ, ಆತನನ್ನು ಸ್ತುತಿಸಿರಿ; ಹೊಳೆಯುವ ನಕ್ಷತ್ರಗಳೇ, ಆತ ನನ್ನು ಸ್ತುತಿಸಿರಿ.

ಯೆಶಾಯ 24:23

ಆಮೇಲೆ ಚೀಯೋನ್‌ ಪರ್ವತ ದಲ್ಲಿಯೂ ಯೆರೂಸಲೇಮಿನಲ್ಲಿಯೂ ತನ್ನ ಪೂರ್ವಿ ಕರ (ಪರಿವಾರದವರ) ಮುಂದೆ ಮಹಿಮೆಯಿಂದ ಆಳುವಾಗ ಚಂದ್ರನಿಗೆ ಅವಮಾನವಾಗುವದು, ಸೂರ್ಯನು ನಾಚಿಕೆ(ಲಜ್ಜೆ)ಪಡುವನು.

ಲೂಕ 19:19

ಅದಕ್ಕೆ ಅವನು ಅದೇ ಪ್ರಕಾರ--ನೀನು ಸಹ ಐದು ಪಟ್ಟಣಗಳ ಮೇಲಿರು ಎಂದು ಅವನಿಗೆ ಹೇಳಿದನು.

Interlinear

Choose Theme