Home Bibles 1 ಕೊರಿಂಥದವರಿಗೆ 15:35 · ಕನ್ನಡ ಬೈಬಲ್
1 ಕೊರಿಂಥದವರಿಗೆ 15:35 · ಕನ್ನಡ ಬೈಬಲ್

ಆದರೆ ಒಬ್ಬನು--ಸತ್ತವರು ಹೇಗೆ ಎಬ್ಬಿಸ ಲ್ಪಡುತ್ತಾರೆ? ಎಂಥ ದೇಹದಿಂದ ಅವರು ಬರುತ್ತಾರೆ ಎಂದು ಕೇಳಾನು.

Cross references

ಯೋಬ 11:12

ಕಾಡುಕತ್ತೆಯ ಮರಿಯ ಹಾಗೆ ಮನುಷ್ಯನು ಹುಟ್ಟಿ ದರೂ ವ್ಯರ್ಥ ಮನುಷ್ಯನು ಜ್ಞಾನಿಯಾಗಿರುವನು.

ಯೋಬ 22:13

ಆದರೆ ನೀನು ಹೇಳುತ್ತೀ--ದೇವರು ಏನು ಬಲ್ಲನು? ಆತನು ಕಾರ್ಗತ್ತಲಿಂದ ನ್ಯಾಯತೀರಿಸುವನೋ?

ಕೀರ್ತನೆಗಳು 73:11

ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ.

ಸಭಾಪ್ರಸಂಗಿ 11:5

ಹೇಗೆ ನೀನು ಆತ್ಮೀಯ ಮಾರ್ಗವು ಯಾವದೆಂದೂ ಮತ್ತು ಮಗು ವಿರುವ ಅವಳ ಗರ್ಭದಲ್ಲಿ ಎಲುಬುಗಳು ಹೇಗೆ ಬೆಳೆಯುವವೆಂದೂ ತಿಳಿದುಕೊಳ್ಳಲಾರಿಯೋ ಹಾಗೆ ಯೇ ಎಲ್ಲವನ್ನೂ ಮಾಡುವ ದೇವರ ಕೆಲಸವನ್ನೂ ತಿಳಿದುಕೊಳ್ಳಲಾರಿ.

ಯೆಹೆಜ್ಕೇಲ 37:3

ಆತನು ನನಗೆ ಹೇಳಿದ್ದು--ಮನಷ್ಯಪುತ್ರನೇ, ಈ ಎಲುಬುಗಳು ಜೀವಿಸುವವೇ ಎಂದಾಗ ನಾನು ಉತ್ತರವಾಗಿ, ಓ ದೇವರಾದ ಕರ್ತನೇ, ನೀನೇ ತಿಳಿದಿರುವೆ ಎಂದೆನು.

ಯೆಹೆಜ್ಕೇಲ 37:11

ಆಮೇಲೆ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್‌ ಮನೆತನಗಳೇ; ಇಗೋ, ನಮ್ಮ ಎಲುಬುಗಳು ಒಣಗಿಸಲ್ಪಟ್ಟಿವೆ ಮತ್ತು ನಮ್ಮ ನಿರೀಕ್ಷೆಯು ಕಳೆದುಹೋಗಿದೆ; ನಾವು ಶುದ್ಧವಾಗಿ ನಮ್ಮ ಭಾಗಗಳನ್ನು ಕತ್ತರಿಸಿಕೊಂಡಿದ್ದೇವೆ ಎಂದು ಅವರು ಹೇಳುವರು.

ಮತ್ತಾಯ 22:29

ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ.

ಯೋಹಾನ 3:4

ನಿಕೊದೇಮನು ಆತನಿಗೆ--ಒಬ್ಬನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವದಾದೀತೇ ಎಂದು ಕೇಳಿದನು.

ಯೋಹಾನ 3:9

ಅದಕ್ಕೆ ನಿಕೊ ದೇಮನು ಪ್ರತ್ಯುತ್ತರವಾಗಿ ಆತನಿಗೆ--ಇವುಗಳು ಹೇಗಾದಾವು ಎಂದು ಕೇಳಿದ್ದಕ್ಕೆ

ಯೋಹಾನ 9:10

ಆದದರಿಂದ ಅವರು ಅವ ನಿಗೆ--ನಿನ್ನ ಕಣ್ಣುಗಳು ಹೇಗೆ ತೆರೆಯಲ್ಪಟ್ಟವು ಎಂದು ಕೇಳಲು

ರೋಮಾಪುರದವರಿಗೆ 9:19

ಆಗ ನೀನು ನನಗೆ--ಹಾಗಾದರೆ ಆತನು ಇನ್ನು ತಪ್ಪು ಕಂಡುಹಿಡಿಯುವದು ಹೇಗೆ? ಆತನ ಚಿತ್ತವನ್ನು ಎದುರಿಸುವದು ಯಾರಿಂದಾದೀತು ಎಂದು ಕೇಳುವಿ.

1 ಕೊರಿಂಥದವರಿಗೆ 15:38

ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೆ ಅದರದರ ದೇಹವನ್ನು ಕೊಡುತ್ತಾನೆ.

ಫಿಲಿಪ್ಪಿಯವರಿಗೆ 3:21

ಆತನು ಎಲ್ಲವನ್ನೂ ತನಗೆ ಅಧೀನ ಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾ ವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸು ವದಕ್ಕೆ ಶಕ್ತನಾಗಿದ್ದು ಪ್ರಭಾವವುಳ್ಳ ತನ್ನ ದೇಹಕ್ಕೆ ಸಾರೂಪ್ಯವಾಗುವಂತೆ ಮಾಡುವನು.

Interlinear

Choose Theme