Home Bibles 1 ಕೊರಿಂಥದವರಿಗೆ 14:33 · ಕನ್ನಡ ಬೈಬಲ್
1 ಕೊರಿಂಥದವರಿಗೆ 14:33 · ಕನ್ನಡ ಬೈಬಲ್

ಪರಿಶುದ್ಧರ ಎಲ್ಲಾ ಸಭೆಗಳಲ್ಲಿರುವ ಪ್ರಕಾರ ದೇವರು ಸಮಾಧಾನಕ್ಕೇ ಹೊರತು ಗಲಿಬಿಲಿಗೆ ಕಾರಣನಲ್ಲ.

Cross references

ಅಂಕೆಗಳ ಪುಸ್ತಕ 7:11

ಕರ್ತನು ಮೋಶೆಗೆ ಹೇಳಿದ್ದೇನಂದರೆ--ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿ ಪೀಠದ ಪ್ರತಿಷ್ಠೆಗಾಗಿ ತನ್ನ ಅರ್ಪಣೆಯನ್ನು ಅರ್ಪಿಸಬೇಕು.

ಲೂಕ 2:14

ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.

ಅಪೋಸ್ತಲರ ಕೃತ್ಯಗಳು 9:13

ಅದಕ್ಕೆ ಅನನೀಯನು--ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನ ಪರಿಶುದ್ಧರಿಗೆ ಎಷ್ಟೋ ಕೇಡನ್ನುಂಟು ಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ನಾನು ಕೇಳಿದ್ದೇನೆ;

ರೋಮಾಪುರದವರಿಗೆ 15:33

ಶಾಂತಿದಾಯಕನಾದ ದೇವರು ನಿಮ್ಮೆಲ್ಲರೊಂದಿಗಿ ರಲಿ. ಆಮೆನ್‌.

1 ಕೊರಿಂಥದವರಿಗೆ 4:17

ಈ ಕಾರಣ ದಿಂದ ಕರ್ತನಲ್ಲಿ ನನ್ನ ಪ್ರಿಯ ಮಗನಾದ ತಿಮೊಥೆ ಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೆನೆ; ಅವನು ಕರ್ತನಲ್ಲಿ ನಂಬಿಗಸ್ತನಾಗಿದ್ದಾನೆ; ಅವನು ಕ್ರಿಸ್ತನಲ್ಲಿ ನನ್ನ ನಡಾವಳಿಯನ್ನು ಅಂದರೆ ನಾನು ಎಲ್ಲೆಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವ ಕ್ರಮ ವನ್ನು ನಿಮ್ಮ ನೆನಪಿಗೆ ತರು

1 ಕೊರಿಂಥದವರಿಗೆ 7:15

ಆದರೆ ನಂಬಿಕೆಯಿಲ್ಲದವನು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ; ಇಂಥಾ ಸಂದರ್ಭಗಳಲ್ಲಿ ಸಹೋದರ ನಾಗಲಿ ಸಹೋದರಿಯಾಗಲಿ ಬದ್ಧರಲ್ಲ, ಸಮಾಧಾನ ದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ.

1 ಕೊರಿಂಥದವರಿಗೆ 7:17

ದೇವರು ಒಬ್ಬೊಬ್ಬನಿಗೆ ಹೇಗೆ ಹಂಚಿಕೊಟ್ಟನೋ ಮತ್ತು ಕರ್ತನು ಒಬ್ಬೊಬ್ಬನನ್ನು ಹೇಗೆ ಕರೆದನೋ ಅದಕ್ಕೆ ತಕ್ಕಂತೆ ನಡೆಯಲಿ; ಹೀಗೆ ನಾನು ಎಲ್ಲಾ ಸಭೆಗಳಲ್ಲಿಯೂ ನೇಮಕಮಾಡುತ್ತೇನೆ.

1 ಕೊರಿಂಥದವರಿಗೆ 11:16

ಒಬ್ಬನು ವಾಗ್ವಾದ ಪ್ರಿಯನಾಗಿ ಕಾಣಿಸಿ ಕೊಂಡರೆ ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳುಕೊಳ್ಳಲಿ.

1 ಕೊರಿಂಥದವರಿಗೆ 14:40

ಎಲ್ಲವುಗಳು ಮರ್ಯಾದೆಯಿಂದಲೂ ಕ್ರಮವಾಗಿಯೂ ನಡೆಯಲಿ.

ಗಲಾತ್ಯದವರಿಗೆ 5:22

ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ

2 ತೆಸಲೋನಿಕದವರಿಗೆ 3:16

ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲ ದಲ್ಲಿಯೂ ಸಕಲವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗೆ ಇರಲಿ.

ಹೆಬ್ರಿಯರಿಗೆ 13:20

ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು

ಯಾಕೋಬ 3:17

ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.

Interlinear

Choose Theme